ಉಕ್ರೇನ್ ಕಿಚ್ಚಿಗೆ ಅಮೆರಿಕ ತುಪ್ಪ
Team Udayavani, Feb 4, 2022, 6:50 AM IST
ಮಾಸ್ಕೋ/ಲಂಡನ್: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರನ್ನು ಹೊಡೆದೋಡಿಸಲು ಇಪ್ಪತ್ತು ವರ್ಷಗಳ ಕಾಲ ತನ್ನ ಹಾಗೂ ನ್ಯಾಟೋ ಸೇನೆಯನ್ನು ನಿಯೋಜಿಸಿ ಅಮೆರಿಕ ಈಗಾಗಲೇ ಮುಖಭಂಗ ಅನುಭವಿಸಿದೆ.
ಮತ್ತೆ ಅದೇ ತಪ್ಪನ್ನು ಉಕ್ರೈನ್ ವಿಚಾರದಲ್ಲಿ ಮಾಡಲು ಮುಂದಾಗಿದೆ. ಉಕ್ರೈನ್ ಬಿಕ್ಕಟ್ಟಿನ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದು ಬೇಡವೆಂಬ ರಷ್ಯಾದ ಎಚ್ಚರಿಕೆಯ ನಡುವೆಯೇ 3 ಸಾವಿರ ಹೆಚ್ಚುವರಿ ಪಡೆಗಳನ್ನು ಐರೋಪ್ಯ ಒಕ್ಕೂಟದ ಪೂರ್ವ ಭಾಗದಲ್ಲಿ ನಿಯೋಜಿಸಿಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಮ್ಮತಿ ಸೂಚಿಸಿದ್ದಾರೆ. ಉಕ್ರೈನ್ಗೆ ತೆರಳುವ ಬದಲು ಅಮೆರಿಕದ ಯೋಧರು ಪೋಲಂಡ್ ಮತ್ತು ರೊಮೇನಿಯಾಗೆ ತೆರಳಲಿದ್ದಾರೆ ಎಂದು ಬೈಡೆನ್ ಸರಕಾರ ತಿಳಿಸಿದೆ.
ಎಚ್ಚರಿಕೆಯ ಹೊರತಾಗಿಯೂ ಐರೋಪ್ಯ ಒಕ್ಕೂಟದ ಪೂರ್ವ ಭಾಗದಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿದ ಕ್ರಮಕ್ಕೆ ರಷ್ಯಾ ಕಟುವಾಗಿ ಆಕ್ಷೇಪ ಮಾಡಿದೆ. ಈ ಕ್ರಮದಿಂದಾಗಿ ಅಮೆರಿಕದ ಜತೆಗೆ ಹೊಂದಿ ರುವ ಬಾಂಧವ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಗ್ರಶ್ಕೋ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ವಕ್ತಾರ ಡೆಮಿಟ್ರಿ ಪೆಸ್ಕೋವ್ ಮಾತನಾಡಿ ಅಮೆರಿಕ ತ್ವೇಷಮಯ ವಾತಾವರಣ ಹೆಚ್ಚಲು ನೆರವು ನೀಡಬಾರದು ಎಂದಿದ್ದಾರೆ.
ಅಣ್ವಸ್ತ್ರಯುಕ್ತ ಕ್ಷಿಪಣಿ: ಉಕ್ರೈನ್ ಮೇಲೆ ದಾಳಿ ನಡೆಸಲು ರಷ್ಯಾ ಅಣ್ವಸ್ತ್ರ ಸಹಿತ ಕ್ಷಿಪಣಿಗಳನ್ನು ಬೆಲಾರೂಸ್ನಲ್ಲಿ ನಿಯೋ ಜನೆ ಮಾಡಿದೆ ಎಂದು ನ್ಯಾಟೋ ಆರೋ ಪಿಸಿದೆ. ಅದರ ಜತೆಗೆ 30 ಸಾವಿರ ಮಂದಿ ಹೆಚ್ಚುವರಿ ಸೇನಾ ಸಿಬಂದಿಯನ್ನು ಕ್ರೋಡೀಕರಿಸುತ್ತಿದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಟೆನ್ಸ್ ಬರ್ಗ್ ಟೀಕಿಸಿದ್ದಾರೆ. ಇದರ ಜತೆಗೆ ಎಸ್- 400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ನಿಯೋಜನೆ ಮಾಡಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.