ಭೂಮಿಯಂಥ ಗ್ರಹ ಪತ್ತೆ
Team Udayavani, Nov 2, 2017, 6:30 AM IST
ಲಂಡನ್: ಮಂಗಳ, ಚಂದ್ರನಲ್ಲಿ ಜೀವಿಗಳು ವಾಸಿಸುವ ವಾತಾವರಣ ಇದೆಯೇ ಎಂಬ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಲೇ ಇದೆ. ಈ ಗ್ರಹಗಳಲ್ಲಿ ವಾಸಿಸಲು ಸಾಧ್ಯ ವಾಗುತ್ತದೆಯೇ ಎಂಬುದು ಖಚಿತವಿಲ್ಲದಿದ್ದರೂ, ಈ ಗ್ರಹಗಳಿಗೆ ಭವಿಷ್ಯದಲ್ಲಿ ತೆರಳಲು ಯೋಜನೆಗಳು ರೂಪುಗೊಳ್ಳುತ್ತಿವೆ. ಈ ಮಧ್ಯೆಯೇ ಇಂಥದ್ದೇ 20 ಗ್ರಹಗಳಿರುವುದಾಗಿ ನಾಸಾ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನಾಸಾದ ಕೆಪ್ಲರ್ ಗಗನನೌಕೆ ಈ ಸಂಶೋಧನೆ ನಡೆಸಿದೆ. ಈಗಾಗಲೇ ನಮಗೆ ಕಂಡುಬಂದ ಗ್ರಹಗಳ ರೀತಿಯಲ್ಲೇ ಹೊಸದಾಗಿ ಕಂಡುಬಂದ ಗ್ರಹಗಳೂ ಇವೆ ಎಂದು ಕೆಪ್ಲರ್‌ನ ಸಂಶೋಧನೆಗಳಿಂದ ತಿಳಿದುಬಂದಿದೆ. ಕೆಲವು ಗ್ರಹಗಳು ಭೂಮಿಯ ವಾತಾವರಣ ವನ್ನೇ ಹೋಲುವಂತಿವೆ. ತಾಪಮಾನ ಸಮಾನ ಶ್ರೇಣಿಯಲ್ಲಿದೆ.
ಈ ಪೈಕಿ ಅತ್ಯಂತ ಉತ್ತಮ ಎನ್ನಬಹುದಾದ ಗ್ರಹವನ್ನು ಕೆಒಐ-7923.0 ಎಂದು ಕರೆಯ ಲಾಗಿದ್ದು, ಇನ್ನೊಂದು ಭೂಮಿಯನ್ನು ಕಂಡು ಕೊಳ್ಳುವ ಪ್ರಯೋಗ ನಡೆಸಲು ಸೂಕ್ತವಾಗಿವೆ ಎನ್ನಲಾಗಿದೆ. ಈ ಗ್ರಹವು ವರ್ಷದಲ್ಲಿ 395 ದಿನಗಳನ್ನು ಹೊಂದಿದ್ದು, ಭೂಮಿಯ ಶೇ. 97ರಷ್ಟಿದೆ. ಆದರೆ ಭೂಮಿಗಿಂತ ಶೀತ ವಾತಾವರಣ ಸ್ವಲ್ಪ ಹೆಚ್ಚಿದೆ.
ಯಾಕೆಂದರೆ ಇದು ಸೂರ್ಯನಿಂದ ಹೆಚ್ಚು ದೂರದಲ್ಲಿದ್ದು, ಸೂರ್ಯನ ಕಿರಣಗಳು ಅಷ್ಟು ತೀಕ್ಷ್ಣವಾಗಿಲ್ಲ. ಈ ಗ್ರಹಕ್ಕೆ ಗಗನನೌಕೆಯನ್ನು ಕಳುಹಿಸುವುದು ಕಷ್ಟವೇನೂ ಅಲ್ಲ ಎಂದು ಕೆಪ್ಲರ್ ಪ್ರಾಜೆಕ್ಟ್‌ನ ಮುಖ್ಯಸ್ಥರಾಗಿರುವ ಜೆಫ್ ಕಫ್ಲಿನ್ ಹೇಳಿ ದ್ದಾರೆ. ಈ ಅಂಶಗಳನ್ನು ದೃಢೀಕರಿಸಿಕೊಳ್ಳಲು ಇನ್ನೂ ಹೆಚ್ಚಿನ ಸಂಶೋಧನೆ ನಡೆಸಬೇಕಿದೆ. ಆದರೆ ಕೆಪ್ಲರ್ ಗಗನನೌಕೆ ಸದ್ಯ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಸಂಗ್ರಹಿ ಸಿದ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸಲು ತೊಂದರೆ ಎದುರಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.