ರೋಗಿಗಳ ಕಣ್ಣಿಂದ ಬೆಳಕು! ; ಹ್ಯಾಂಪ್‌ಶೈರ್‌ನ ಆಸ್ಪತ್ರೆಯಲ್ಲಿ ಜರುಗಿದ ವಿದ್ಯಮಾನ
Team Udayavani, Jan 13, 2020, 7:56 AM IST
ನ್ಯೂಹ್ಯಾಂಪ್‌ಶೈರ್ (ಅಮೆರಿಕ): ಇಲ್ಲಿನ ನಾರಿಸ್ ಕಾಟನ್ ಕ್ಯಾನ್ಸರ್ ಸೆಂಟರ್‌ನಲ್ಲಿ (ಎನ್‌ಸಿಸಿಸಿ) ಕಣ್ಣಿನ ಕ್ಯಾನ್ಸರ್‌ಗಾಗಿ ರೇಡಿಯೋ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ಕೆಲವು ರೋಗಿಗಳ ಕಣ್ಣಿನೊಳಗೆ ಬೆಳಕೊಂದು ಕಾಣಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಚಕಿತಗೊಳಿಸಿದೆ. ಚಿಕಿತ್ಸೆ ಮುಗಿದ ಮರುಕ್ಷಣದಲ್ಲೇ ರೋಗಿಗಳ ಮುಚ್ಚಿದ ಕಣ್ಣಿನೊಳಗಿನಿಂದ ಕೆಲವು ಸೆಕೆಂಡ್‌ಗಳವರೆಗೆ ಮಂದವಾದ ಬೆಳಕಿನ ಸೆಲೆಯೊಂದು ಗೋಚರಿಸಿದೆ. ಅದರ ವೀಡಿಯೋ ತುಣುಕುಗಳನ್ನು ಮುಂದಿಟ್ಟು ಕೊಂಡು ವೈದ್ಯಲೋಕ ಆ ಬಗ್ಗೆ ಚರ್ಚೆಯಲ್ಲಿ ತೊಡಗಿಕೊಂಡಿದೆ.
ಇದು ಚೆರೆಂಕೊವ್ ರೇಡಿಯೇಷನ್: ಜಗತ್ತಿನ ಹಲವಾರು ತಜ್ಞರು ಈ ವಿಸ್ಮಯಕ್ಕೆ ಉತ್ತರ ಕೊಟ್ಟಿದ್ದಾರೆ. ಅವರ ಪ್ರಕಾರ, ಕಣ್ಣಿಗೆ ರೇಡಿಯೋ ತರಂಗಗಳನ್ನು ಹಾಯಿಸಿ ಚಿಕಿತ್ಸೆ ನೀಡುತ್ತಿದ್ದಾಗ, ಆ ತರಂಗಗಳಿಂದ ಶಕ್ತಿಯನ್ನು ಪಡೆದ ಕಣ್ಣಿನೊಳಗಿನ ‘ಅರೆ ಘನರೂಪದ ದ್ರಾವಣ’ (ಜೆಲ್) ಹೀರಿಕೊಳ್ಳುತ್ತದೆ. ಚಿಕಿತ್ಸೆ ಮುಗಿದ ಕೂಡಲೇ ಹೀರಿಕೊಂಡ ಶಕ್ತಿಯನ್ನು ವಿಕಿರಣದ ಮೂಲಕ ಹೊರಹಾಕುತ್ತದೆ. ಆ ವಿಕಿರಣವೇ ರೋಗಿಗಳ ಕಣ್ಣಲ್ಲಿ ಬೆಳಕಿನ ರೂಪದಲ್ಲಿ ಕಂಡುಬಂದಿದೆ ಎಂದಿದ್ದಾರೆ.
ಇದು ಮೂಲತಃ ಭೌತಶಾಸ್ತ್ರೀಯ ತತ್ವವಾಗಿದ್ದು, ಇದಕ್ಕೆ ‘ಚೆರೆಂಕೊವ್ ರೇಡಿಯೇಷನ್’ ಎನ್ನುತ್ತಾರೆ. ಸಾಮಾನ್ಯವಾಗಿ ಪರಮಾಣು ರಿಯಾಕ್ಟರ್‌ನಲ್ಲಿ ನಡೆಯುವ ಇಂಥ ವಿದ್ಯಮಾನದ ಹಿಂದಿನ ರಹಸ್ಯವನ್ನು ಸಮರ್ಥವಾಗಿ ವಿವರಿಸಿದ್ದ ರಷ್ಯಾದ ವಿಜ್ಞಾನಿ ಪಾವೆಲ್ ಚೆರೆಂಕೊವ್ ಸ್ಮರಣಾರ್ಥ ಈ ಬಗೆಯ ವಿಕಿರಣ ಸೂಸುವಿಕೆಗೆ ಅವರ ಹೆಸರನ್ನೇ ಇಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.