Israel-Hamas war ಟಾರ್ಗೆಟ್ ಆಗಲಿವೆಯೇ ಗಾಜಾ ಆಸ್ಪತ್ರೆಗಳು?
ಉಗ್ರರ ಇರುವಿಕೆ ಹಿನ್ನೆಲೆ ಇಸ್ರೇಲ್‌ನಿಂದ ದಾಳಿ ಸಾಧ್ಯತೆ
Team Udayavani, Oct 30, 2023, 10:48 PM IST
ಖಾನ್ ಯೂನಿಸ್:ಇಸ್ರೇಲ್‌ನ ಪಡೆಗಳು ಸೋಮವಾರ ಉತ್ತರ ಮತ್ತು ಮಧ್ಯ ಗಾಜಾದತ್ತ ಸಂಚಾರ ಆರಂಭಿಸಿದ್ದು, ಜನಜಂಗುಳಿಯಿಂದ ಕೂಡಿರುವ ಗಾಜಾದ ಆಸ್ಪತ್ರೆಗಳ ಸಮೀಪ ಯಾವ ಕ್ಷಣದಲ್ಲಾದರೂ ವೈಮಾನಿಕ ದಾಳಿಯಾಗುವ ಭೀತಿ ಆವರಿಸಿದೆ ಎಂದು ವಿಶ್ವಸಂಸ್ಥೆ ಸಿಬ್ಬಂದಿ ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ಪ್ಯಾಲೆಸ್ತೀನಿಯರು ಚಿಕಿತ್ಸೆ ಪಡೆಯುತ್ತಿದ್ದು, ಲಕ್ಷಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದಾರೆ. ಸೋಮವಾರ ಗಾಜಾದ ಉತ್ತರ-ದಕ್ಷಿಣ ಹೆದ್ದಾರಿಯನ್ನು ಇಸ್ರೇಲ್ ಪಡೆ ಮುಚ್ಚಿದ್ದು, ದಾಳಿಯ ಆತಂಕ ಹೆಚ್ಚಾಗಿದೆ. ಅಲ್ಲದೆ, ಗಾಜಾದಲ್ಲಿ ಸದ್ಯ 10 ಆಸ್ಪತ್ರೆಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲ ಆಸ್ಪತ್ರೆಗಳಿಗೂ “ಕೂಡಲೇ ಸ್ಥಳಾಂತರಗೊಳ್ಳಿ’ ಎಂಬ ಎಚrರಿಕೆ ಸಂದೇಶ ರವಾನೆಯಾಗಿದೆ. ಇದೊಂದು ಕಳವಳಕಾರಿ ಸಂಗತಿ ಎಂದೂ ವಿಶ್ವಸಂಸ್ಥೆ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಪ್ರಮುಖ ಆಸ್ಪತ್ರೆಗಳನ್ನೇ ಉಗ್ರರು ತಮ್ಮ ನಿಯಂತ್ರಣಾ ಕೇಂದ್ರಗಳಾಗಿ ಬಳಸುತ್ತಿದ್ದಾರೆ ಎಂದು ಇತ್ತೀಚೆಗೆ ಇಸ್ರೇಲ್ ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡಿತ್ತು.
ಇದೇ ವೇಳೆ, ಈಜಿಪ್ಟ್ ನಿಂದ ಔಷಧ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಹೊತ್ತ 33 ಟ್ರಕ್‌ಗಳು ಸೋಮವಾರ ಗಾಜಾ ಪ್ರವೇಶಿಸಿವೆ. ಮತ್ತೂಂದೆಡೆ, ಲೆಬನಾನ್‌ನ ಹೆಜ್ಬುಲ್ಲಾ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ.
ಈ ನಡುವೆ, ಯುದ್ಧವು ಹೀಗೆಯೇ ಮುಂದುವರಿದರೆ ತೈಲ ದರವು ಗಗನಕ್ಕೇರುವ ಎಲ್ಲ ಸಾಧ್ಯತೆಯೂ ಇದೆ. ಇದು ಜಗತ್ತಿನಾದ್ಯಂತ ಆಹಾರವಸ್ತುಗಳ ದರ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ವಿಶ್ವಬ್ಯಾಂಕ್ ಎಚ್ಚರಿಸಿದೆ.
ಯಹೂದಿಯರಿಗಾಗಿ ರಷ್ಯಾ ವಿಮಾನ ನಿಲ್ದಾಣಕ್ಕೆ ನುಗ್ಗಿದರು!
ಇಸ್ರೇಲ್‌ನಿಂದ ರಷ್ಯಾದ ಡಾಗೆಸ್ತಾನ್ ವಿಮಾನ ನಿಲ್ದಾಣಕ್ಕೆ ಭಾನುವಾರ ವಿಮಾನವೊಂದು ಬಂದಿಳಿಯಿತು. ಈ ವೇಳೆ, ಪ್ಯಾಲೆಸ್ತೀನ್ ಬೆಂಬಲಿಸಿ ನೂರಾರು ಮುಸ್ಲಿಮರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಮಖಚಲಾ ಮುಸ್ಲಿಂ ಬಾಹುಳ್ಯದ ಪ್ರದೇಶ. ಪ್ರತಿಭಟನಾಕಾರರು ಭದ್ರತೆಯನ್ನು ಭೇದಿಸಿ, ವಿಮಾನ ನಿಲ್ದಾಣದೊಳಗೆ ನುಗ್ಗಿದರು. ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವರು ಕೈನಲ್ಲಿ ಬಂದೂಕು ಮತ್ತು ದೊಣ್ಣೆಗಳನ್ನು ಹಿಡಿದು, ಭದ್ರತಾ ಸಿಬ್ಬಂದಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ, ಒಳ ಪ್ರವೇಶಿಸಿದರು. “ನಾವು ಯಹೂದಿಯರಿಗಾಗಿ ಬಂದಿದ್ದೇವೆ. ಅವರನ್ನು ಕೊಲ್ಲುತ್ತೇವೆ. ಅಲ್ಲಾಹು ಅಕºರ್’ ಎಂದು ಘೋಷಣೆಗಳನ್ನು ಕೂಗಿದರು.
ಯಹೂದಿಯರಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಘರ್ಷಣೆಯಲ್ಲಿ 9 ಪೊಲೀಸರು ಸೇರಿದಂತೆ ಕನಿಷ್ಠ 20 ಮಂದಿ ಗಾಯಗೊಂಡರು. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 60 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜರ್ಮನ್ ಯುವತಿ ಶವ ಪತ್ತೆ !
ಇಸ್ರೇಲ್ ಮೇಲಿನ ದಾಳಿ ಸಂದರ್ಭದಲ್ಲಿ ಹಮಾಸ್ ಉಗ್ರರು ಅಪಹರಿಸಿ, ವಿಕೃತವಾಗಿ ಮೆರವಣಿಗೆ ನಡೆಸಿದ್ದ ಜರ್ಮನ್ ಮೂಲದ ಟ್ಯಾಟೂಯಿಸ್ಟ್ ಶಾನಿಲೌಕ್ ಅವರ ಮೃತದೇಹ ಪತ್ತೆಯಾಗಿದೆ. ಶಾನಿ ಅವರ ದೇಹದ ಗುರುತು ಪತ್ತೆಹಚ್ಚಿದ ಬಳಿಕ ಈ ಕುರಿತು ಇಸ್ರೇಲ್ ಸರ್ಕಾರ ಟ್ವೀಟ್ ಮಾಡಿದ್ದು,” ಶಾಂತಿಗಾಗಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾನಿ ಅವರನ್ನು ಹಮಾಸ್ ಉಗ್ರರು ಅಪಹರಿಸಿ, ಚಿತ್ರಹಿಂಸೆ ನೀಡಿ, ಗಾಜಾದ ತುಂಬಾ ಮೆರವಣಿಗೆ ನಡೆಸಿದರು. ಶಾನಿ ಅನುಭವಿಸಿದ ಚಿತ್ರಹಿಂಸೆಗಳು ನಮ್ಮ ಹೃದಯಗಳನ್ನು ವಿದ್ರಾವಕಗೊಳಿಸಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.