Donald Trump; ತೀರ್ಪಿನ ಬಳಿಕ ಹರಿದು ಬಂತು ದೇಣಿಗೆ! ಟ್ರಂಪ್ಗೆ ವರವಾದ “ಕೋರ್ಟ್ ತೀರ್ಪು’
18.8 ದಶಲಕ್ಷ ಡಾಲರ್ ದೇಣಿಗೆ ಸಂಗ್ರಹ
Team Udayavani, Apr 18, 2023, 7:30 AM IST
ವಾಷಿಂಗ್ಟನ್:ಅಕ್ರಮ ಸಂಬಂಧದ ಬಗ್ಗೆ ಬಾಯಿಬಿಡದಂತೆ ನೀಲಿ ಚಿತ್ರ ತಾರೆಗೆ ಹಣ ಪಾವತಿಸಿದ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ದೋಷಿ ಎಂದು ಜ್ಯೂರಿಗಳು ತೀರ್ಪಿತ್ತಿದ್ದು, ಟ್ರಂಪ್ಗೆ ಲಾಭವಾಗಿ ಪರಿಣಮಿಸಿದೆ!
ಟ್ರಂಪ್ ವಿರುದ್ಧ ತೀರ್ಪು ಪ್ರಕಟವಾದ ನಂತರ ಅವರ ಪರ ದೊಡ್ಡಮಟ್ಟದ ಅಲೆ ಎದ್ದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕೆ ಭಾರೀ ಪ್ರಮಾಣದ ದೇಣಿಗೆ ಹರಿದುಬರಲಾರಂಭಿಸಿದೆ.
ಟ್ರಂಪ್ ಪರ ದೇಣಿಗೆ ಸಂಗ್ರಹಿಸಲು ಎರಡು ಪ್ರಚಾರ ಸಮಿತಿಗಳಿದ್ದು, 2023ರ ಮೊದಲ ಮೂರು ತಿಂಗಳಲ್ಲಿ ಅಂದರೆ ಮಾರ್ಚ್ಗೆ ಮುಕ್ತಾಯವಾದ ತ್ತೈಮಾಸಿಕದಲ್ಲಿ ಒಟ್ಟಾರೆ 18.8 ದಶಲಕ್ಷ ಡಾಲರ್ ಸಂಗ್ರಹವಾಗಿದೆ.
ವಿಶೇಷವೆಂದರೆ, ಅವರ ವಿರುದ್ಧ ತೀರ್ಪು ಪ್ರಕಟವಾದ ಬಳಿಕ ಬರೋಬ್ಬರಿ 15 ದಶಲಕ್ಷ ಡಾಲರ್ ಹರಿದುಬಂದಿದೆ. ಮಾ.30ರಂದು ಅವರು ದೋಷಿ ಎಂದು ತೀರ್ಪು ಬಂದ 24 ಗಂಟೆಗಳಲ್ಲಿ 4 ದಶಲಕ್ಷ ಡಾಲರ್ ದೇಣಿಗೆ ಬಂದಿತ್ತು ಎಂದು ಪ್ರಚಾರ ಸಮಿತಿ ಹೇಳಿದೆ. ಒಟ್ಟು 3 ಲಕ್ಷ ಮಂದಿ ಟ್ರಂಪ್ ಪ್ರಚಾರಕ್ಕೆ ದೇಣಿಗೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.