ಬೇಗ ಬಂದು ಬಿಡಿ ಅಮೆರಿಕಕ್ಕೆ ಎಂದರು ಟ್ರಂಪ್
Team Udayavani, Apr 3, 2020, 4:00 PM IST
ನ್ಯೂಯಾರ್ಕ್ : ಅಮೆರಿಕದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕೋವಿಡ್ 19 ಸೋಂಕಿತರು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಸುಮಾರು 5 ಸಾವಿರ ಮಂದಿ ಸಾವನ್ನಪ್ಪಿದ್ದು , ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಎಲ್ಲ ರಾಷ್ಟ್ರಗಳಲ್ಲಿರುವ ತನ್ನ ದೇಶದ ಪ್ರಜೆಗಳನ್ನು ವಾಪಸು ಕರೆಸಿಕೊಳ್ಳಲು ಚಿಂತನೆ ನಡೆಸಿದೆ.
ಅಮೆರಿಕವು ಭಾರತ ಸಹಿತ ವಿಶ್ವದ ಸುಮಾರು 60 ರಾಷ್ಟ್ರಗಳಿಂದ ತನ್ನ ಪ್ರಜೆಗಳನ್ನು ತನ್ನ ದೇಶಕ್ಕೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಈ ಹಿನ್ನೆಲೆ ಭಾರತ ಸರಕಾರದ ಸಹಾಯ ಹಸ್ತವನ್ನು ಕೋರಿದೆ. ಭಾರತದಲ್ಲಿ ಸುಮಾರು 170 ಅಮೆರಿಕನ್ ಪ್ರಜೆಗಳಿದ್ದು, ಈ ವಾರದ ಕೊನೆಯಲ್ಲಿ ದಿಲ್ಲಿ ಹಾಗೂ ಮುಂಬಯಿಗೆ ವಿಮಾನವನ್ನು ಕಳಿಸಲಿದ್ದೇವೆ ಎಂದು ಅಮೆರಿಕದ ಅಧಿಕೃತ ಮೂಲಗಳು ತಿಳಿಸಿದ್ದು, ಸುಮಾರು 30 ಸಾವಿರ ಅಮೆರಿಕ ಪ್ರಜೆಗಳನ್ನು ಕರೆಸಿಕೊಳ್ಳಲು 350 ವಿಮಾನಗಳ ಬಳಸುತ್ತಿದೆ. ಆದರೆ ವಿಶೇಷ ಎಂದರೆ ಭಾರತಕ್ಕಿಂತಲೂ ಈಗ ಅಮೆರಿಕದ ಸ್ಥಿತಿ ಹದಗೆಟ್ಟಿದೆ.
ಆಫ್ರಿಕಾದ ಕುರಿತು ಗೊಂದಲ
ಆಫ್ರಿಕಾದಲ್ಲಿ ವಾಯು ಮಾರ್ಗವನ್ನು ರದ್ದುಗೊಳಿಸಿರುವುದರಿಂದ ಆಫ್ರಿಕಾದಲ್ಲಿನ ಅಮೆರಿಕನ್ನರನ್ನು ಕರೆಸಿಕೊಳ್ಳಲು ಸ್ವಲ್ಪ ಸಮಸ್ಯೆಯಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಹೊರತು ಪಡಿಸಿದಂತೆ ಬೇರೆಲ್ಲ ರಾಷ್ಟ್ರಗಳಲ್ಲಿ ಸದ್ಯಕ್ಕೆ ಸಮಸ್ಯೆ ಇಲ್ಲವೆನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.