ನೀಲಿ ನಟಿಯೊಂದಿಗಿನ ಟ್ರಂಪ್ ಪ್ರಣಯದಾಟ ಬಯಲು!
Team Udayavani, Jan 14, 2018, 6:00 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಮತ್ತೂಂದು ಕಳಂಕ ಅಂಟಿಕೊಂಡಿದೆ. 2006ರ ಘಟನೆಯೊಂದರ ಸಂಬಂಧ ಟ್ರಂಪ್ ಅವರ ವಕೀಲ ಮೈಕೆಲ್ ಕೋಹೆನ್, ಪೋರ್ನ್ ಸ್ಟಾರ್ವೊಬ್ಬರಿಗೆ ಟ್ರಂಪ್ ಮತ್ತು ಆಕೆಯ ನಡುವಿನ ಸಂಬಂಧದ ಬಗ್ಗೆ ಸುಮ್ಮನಿರಲು 82 ಲಕ್ಷ ರೂ.(1.30 ಲಕ್ಷ ಡಾಲರ್)ಹಣ ನೀಡಿದ್ದರು ಎಂಬುದು ಬಹಿರಂಗಗೊಂಡಿದೆ. ಟ್ರಂಪ್ ಅವರು ತಮ್ಮ ಮೂರನೇ ಪತ್ನಿ ಮೆಲನಿಯಾರನ್ನು ವಿವಾಹವಾಗುವ ಕೆಲ ದಿನಗಳ ಹಿಂದಷ್ಟೇ ಈ ಘಟನೆ ನಡೆದಿತ್ತು ಎಂದು ಅಮೆರಿಕದ ಪ್ರತಿಷ್ಠಿತ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ಹಣವನ್ನು 2016ರಲ್ಲಿ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಕೆಲವೇ ವಾರಗಳ ಹಿಂದೆ ಸ್ಟಿಫಾನಿ ಕ್ಲಿಫೋರ್ಡ್ಗೆ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಹಿಂದಿನ ಸಂಬಂಧದ ಬಗ್ಗೆ ಬಾಯಿ ಬಿಡಬಾರದು ಎಂದು ತಾಕೀತು ಮಾಡಲಾಗಿತ್ತು ಎಂದು ಪತ್ರಿಕೆ ವರದಿ ಮಾಡಿದೆ. ಅಲ್ಲದೆ ಈ ಹಣವನ್ನು ಲಾಸ್ ಏಂಜಲೀಸ್ನ ಸಿಟಿ ನ್ಯಾಷನಲ್ ಬ್ಯಾಂಕ್ ಮೂಲಕ ತಲುಪಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕೀಲ ಮೈಕೆಲ್, 2011ರಲ್ಲೂ ಟ್ರಂಪ್ ಕುರಿತಂತೆ ಇಂಥ ಸುದ್ದಿಗಳು ಹರಡಿದ್ದವು. ಆಗಲೂ ಟ್ರಂಪ್ ಅವರೇ ಇಂಥ ಸುದ್ದಿಗಳನ್ನು ನಿರಾಕರಿಸಿದ್ದರು. ಅಲ್ಲದೆ ಇದೀಗ ಹೇಳಲಾಗಿರುವ ಪೋರ್ನ್ ಸ್ಟಾರ್ ಅವರ ಹೆಸರು ಸ್ಟಿಫಾನಿ ಕ್ಲಿಪೋರ್ಡ್ ಅಲ್ಲ, ಸ್ಟಾರ್ಮಿ ಡೇನಿಯಲ್ಸ್ ಎಂದೂ ಅವರು ಹೇಳಿದ್ದಾರೆ.
ಯಾವಾಗ ಭೇಟಿ?
ಟ್ರಂಪ್ ಮತ್ತು ಸ್ಟಿಫಾನಿ ಕ್ಲಿಪೋರ್ಡ್ 2006ರಲ್ಲಿ ನಾವಡದಲ್ಲಿನ ಲೇಕ್ ಟಾವೋನಲ್ಲಿ ನಡೆದ ಸೆಲೆಬ್ರಿಟಿ ಗಾಲ್ಫ್ ಟೂರ್ನಮೆಂಟ್ ವೇಳೆಯಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ದೈಹಿಕ ಸಂಬಂಧವೇರ್ಪಟ್ಟಿತ್ತು. ಈಕೆಯನ್ನು ಒಂದು ರಾತ್ರಿ ಪಾರ್ಟಿಗಾಗಿ ಆಹ್ವಾನಿಸಲಾಗಿತ್ತು. ಅಷ್ಟೇ ಅಲ್ಲ, ಮಾರನೇ ದಿನ ಬೆಳಗ್ಗೆ ಟ್ರಂಪ್ ಅವರು, ತಾವು ಉಳಿದಿದ್ದ ಹೋಟೆಲ್ನ ಕಾರಿಡಾರ್ನಲ್ಲಿ ಒಳವಸ್ತ್ರದಲ್ಲಿಯೇ ಸ್ಟಿಫಾನಿ ಅವರನ್ನು ಓಡಾಡಿಸಿದ್ದರು ಎಂದೂ ವರದಿ ಮಾಡಲಾಗಿದೆ.
ಆರೋಪ ನಿರಾಕರಣೆ
ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಟಿಫಾನಿ, ತನ್ನ ಮತ್ತು ಟ್ರಂಪ್ ನಡುವೆ ಯಾವುದೇ ಸಂಬಂಧವಿರಲಿಲ್ಲ. ಈಗ ಹರಿದಾಡುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ಈ ಹಿಂದೆ ಕೆಲವೇ ಕೆಲವು ಬಾರಿ ಸಾರ್ವಜನಿಕ ವೇದಿಕೆಗಳಲ್ಲಿ ಅವರನ್ನು ಭೇಟಿಯಾಗಿದ್ದೇನೆ. ಅವರೊಬ್ಬ ಉತ್ತಮ ವ್ಯಕ್ತಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.