USA; ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಸ್ವಲ್ಪದರಲ್ಲಿಯೇ ಪಾರಾದ ಮಾಜಿ ಅಧ್ಯಕ್ಷ
Team Udayavani, Jul 14, 2024, 8:14 AM IST
ಪೆನ್ಸಿಲ್ವೇನಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರ್ಯಾಲಿಯಲ್ಲಿ ಗುಂಡಿನ ದಾಳಿಯಾಗಿದ್ದು, ಟ್ರಂಪ್ ಅವರನ್ನು ಸ್ವಲ್ಪದರಲ್ಲಿಯೇ ಬಚಾವಾಗಿದ್ದಾರೆ. ಶನಿವಾರ ರಾತ್ರಿ ಪೆನ್ಸಿಲ್ವೇನಿಯಾದ ಬಟ್ಲರ್ ನಲ್ಲಿ ಈ ಘಟನೆ ನಡೆದಿದೆ.
“ನನ್ನ ಬಲ ಕಿವಿಯ ಮೇಲ್ಭಾಗವನ್ನು ಛೇದಿಸಿಕೊಂಡು ಬುಲೆಟ್ ಹೋಗಿದೆ” ಎಂದು ಟ್ರಂಪ್ ಬಳಿಕ ಹೇಳಿಕೆ ನೀಡಿದ್ದಾರೆ.
ಗಾಯಗೊಂಡಿರುವ ಟ್ರಂಪ್ ಈಗ ಸುರಕ್ಷಿತವಾಗಿದ್ದಾರೆ ಎಂದು ಸೀಕ್ರೆಟ್ ಸರ್ವೀಸ್ ದೃಢಪಡಿಸಿದೆ. ಅವರ ಮುಖದ ಮೇಲೆ ರಕ್ತ ಚೆಲ್ಲಿದ್ದು, ಕೂಡಲೇ ಅವರನ್ನು ರ್ಯಾಲಿ ವೇದಿಕೆಯಿಂದ ಕರೆದೊಯ್ಯಲಾಗಿದೆ. ಹೇಯ ಕೃತ್ಯದ ನಂತರ ಟ್ರಂಪ್ ಆರಾಮವಾಗಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
Le Président Donald #Trump vient d’être victime d’une tentative d’assassinat lors d’un meeting en #Pennsylvanie. Touché au niveau de l’oreille, il a été évacué.
Ce qui s’est passé est d’une extrême gravité. Ces images, à la fois terribles et incroyables, feront date.
Soutien… pic.twitter.com/xUCecT1nbn
— Jérémy Benhaïm (@JeremBenhaim) July 13, 2024
ಗುಂಡಿನ ದಾಳಿಯ ನಂತರ ಬಂದೂಕುಧಾರಿ ಮತ್ತು ಒಬ್ಬ ಪ್ರೇಕ್ಷಕ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಪ್ರೇಕ್ಷಕರ ಸ್ಥಿತಿ ಗಂಭೀರವಾಗಿದೆ.
“ಗುಂಡು ನನ್ನ ಬಲ ಕಿವಿಯ ಮೇಲ್ಭಾಗವನ್ನು ಚುಚ್ಚಿದೆ” ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಷಿಯಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಂಡಿನ ಶಬ್ದವಾಗುತ್ತಿದ್ದಂತೆ ಟ್ರಂಪ್ ತನ್ನ ಬಲಗೈಯಿಂದ ಕಿವಿಯನ್ನು ಹಿಡಿದುಕೊಂಡರು. ಕೂಡಲೇ ಅವರು ಪೋಡಿಯಂ ಹಿಂದೆ ಅಡಗಿ ಕುಳಿತರು.
ಸೀಕ್ರೆಟ್ ಸರ್ವಿಸ್ ಏಜೆಂಟರು ತ್ವರಿತವಾಗಿ ಗುಂಪುಗೂಡಿ ಅವರನ್ನು ಸುತ್ತುವರಿದಿರು. ಅವರು ಸುಮಾರು ಒಂದು ನಿಮಿಷದ ನಂತರ ಅಲ್ಲಿಂದ ಹೊರನಡೆದರು.
“ಏನೋ ತಪ್ಪಾಗಿದೆ ಎಂದು ನನಗೆ ತಕ್ಷಣ ತಿಳಿಯಿತು, ಗುಂಡಿನ ಶಬ್ದ ಕೇಳಿದ ತಕ್ಷಣವೇ ಗುಂಡು ಚರ್ಮದ ಮೂಲಕ ಹರಿಯಿತು ಎಂದು ಭಾವಿಸಿತು. ಹೆಚ್ಚು ರಕ್ತಸ್ರಾವವಾಯಿತು, ಬಳಿಕ ಏನಾಗುತ್ತಿದೆ ಎಂದು ನನಗೆ ತಿಳಿಯಿತು” ಎಂದು ಟ್ರಂಪ್ ಹೇಳಿದರು.
“ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆಯುವುದು ನಂಬಲಸಾಧ್ಯ. ಶೂಟರ್ ಬಗ್ಗೆ ಈ ಸಮಯದಲ್ಲಿ ಏನೂ ತಿಳಿದಿಲ್ಲ, ಅವರು ಈಗ ಸತ್ತಿದ್ದಾರೆ” ಎಂದು ಅವರು ಹೇಳಿದರು.
ಈ ಘಟನೆಯು ರಿಪಬ್ಲಿಕನ್ ಮತ್ತು ಡೆಮೋಕ್ರಾಟ್‌ಗಳಿಂದ ವ್ಯಾಪಕ ಖಂಡನೆಯನ್ನು ಹುಟ್ಟುಹಾಕಿದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು, “ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಸ್ಥಳವಿಲ್ಲ. ಇದನ್ನು ಖಂಡಿಸಲು ನಾವು ಒಂದು ರಾಷ್ಟ್ರವಾಗಿ ಒಂದಾಗಬೇಕು.” ಎಂದು ಹೇಳಿದ್ದಾರೆ.
ನವೆಂಬರ್ 5ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಜೋ ಬಿಡೆನ್ ವಿರುದ್ದ ಡೊನಾಲ್ಡ್ ಟ್ರಂಪ್ ಅವರು ಸ್ಪರ್ಧಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.