Tax Issue ಭಾರತಕ್ಕೆ ದುಬಾರಿ ತೆರಿಗೆಯ ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್
ಸಮಾನ ರೀತಿಯ ಮಾರುಕಟ್ಟೆ ನೀಡದ್ದಕ್ಕೆ ಆಕ್ರೋಶ
Team Udayavani, Aug 21, 2023, 7:49 PM IST
ವಾಷಿಂಗ್ಟನ್:ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಭಾರತಕ್ಕೆ ಹೆಚ್ಚುವರಿ ತೆರಿಗೆಯ ಬೆದರಿಕೆಯೊಡ್ಡಿದ್ದಾರೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವೇನಾದರೂ ಗೆದ್ದು ಅಧಿಕಾರ ಹಿಡಿದರೆ, ಭಾರತದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.
ಟ್ರಂಪ್ ಅವರು ತಮ್ಮ ಆಡಳಿತಾವಧಿಯಲ್ಲಿ, ಭಾರತವನ್ನು “ತೆರಿಗೆಗಳ ರಾಜ’ ಎಂದು ಕರೆದಿದ್ದರು. ಅಲ್ಲದೇ, ಭಾರತವು ಸಮಾನ ಮತ್ತು ಸಮಂಜಸವಾಗಿ ತನ್ನ ಮಾರುಕಟ್ಟೆಯನ್ನು ಅಮೆರಿಕಕ್ಕೆ ಮುಕ್ತಗೊಳಿಸುತ್ತಿಲ್ಲ ಎಂದು ಆರೋಪಿಸಿದ್ದ ಅವರು, 2019ರ ಮೇ ತಿಂಗಳಲ್ಲಿ ಭಾರತದ ಆದ್ಯತಾ ಮಾರುಕಟ್ಟೆಯ ಸೌಲಭ್ಯವನ್ನು ತೆಗೆದುಹಾಕಿದ್ದರು.
ಈಗ ಮತ್ತೊಂದು ಬಾರಿಗೆ ಅಧ್ಯಕ್ಷರಾಗಲು ಹವಣಿಸುತ್ತಿರುವ ಟ್ರಂಪ್, ಚುನಾವಣಾ ಪ್ರಚಾರ ಸಭೆಗಳಲ್ಲಿ ಮತ್ತೆ ಭಾರತದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಹರ್ಲೆ ಡೇವಿಡ್‌ಸನ್ ಮೋಟಾರ್‌ಸೈಕಲ್ ಸೇರಿದಂತೆ ಅಮೆರಿಕದ ಹಲವು ಉತ್ಪನ್ನಗಳ ಮೇಲೆ ಭಾರತವು ಅತಿಯಾದ ತೆರಿಗೆ ವಿಧಿಸುತ್ತಿದೆ. ಶೇ.100, 150, 200ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಭಾರತದಲ್ಲಿ ತಯಾರಾದ ಬೈಕುಗಳನ್ನು ಅವರು ಅಮೆರಿಕಕ್ಕೆ ತಂದು ಯಾವುದೇ ತೆರಿಗೆ, ಶುಲ್ಕವಿಲ್ಲದೇ ಮಾರಾಟ ಮಾಡುತ್ತಾರೆ. ಆದರೆ, ಹರ್ಲೆ ಬೈಕುಗಳನ್ನು ಭಾರತದಲ್ಲಿ ನಾವು ಮಾರಾಟ ಮಾಡುವುದಿದ್ದರೆ ದುಬಾರಿ ತೆರಿಗೆ ತೆರಬೇಕು. ಇದೆಂಥಾ ನ್ಯಾಯ? ಹೀಗಾಗಿ, ಮುಂದಿನ ಬಾರಿ ನಾವೇನಾದರೂ ಅಧಿಕಾರಕ್ಕೆ ಬಂದರೆ, ಭಾರತದ ಉತ್ಪನ್ನಗಳಿಗೂ ನಾವು ದುಬಾರಿ ತೆರಿಗೆ ವಿಧಿಸುವುದು ಖಚಿತ ಎಂದಿದ್ದಾರೆ ಟ್ರಂಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.