ಉಗ್ರರಿಗೆ ಬ್ರೇಕ್; 7 ದೇಶಗಳ ನಿರಾಶ್ರಿತರು ಅಮೆರಿಕ ಪ್ರವೇಶಿಸುವಂತಿಲ್ಲ
Team Udayavani, Jan 28, 2017, 6:08 PM IST
ವಾಷಿಂಗ್ಟನ್; ನೂತನವಾಗಿ ಅಮೆರಿಕ ಪ್ರವೇಶಿಸಲಿರುವ ನಿರಾಶ್ರಿತರನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೊಸ ಆದೇಶವೊಂದಕ್ಕೆ ಸಹಿ ಹಾಕುವ ಮೂಲಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ವಿವಾದಿತ ಭರವಸೆಯೊಂದನ್ನು ಈಡೇರಿಸಿದಂತಾಗಿದೆ.
ವಿದೇಶದ ಮೂಲಭೂತವಾದಿ ಉಗ್ರರು ಅಮೆರಿಕ ಪ್ರವೇಶಿಸದಂತೆ ಹಾಗೂ ಕ್ರಿಶ್ಚಿಯನ್ ರಿಗೆ ಪ್ರಾಮುಖ್ಯತೆ ನಿಡುವುದು ನಮ್ಮ ಆದ್ಯತೆಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದಿಂದ ಇಸ್ಲಾಮಿಕ್ ದೇಶಗಳ ಮೂಲಭೂತವಾದಿ ಉಗ್ರರನ್ನು ಹೊರಗಿಡುವ ಉದ್ದೇಶದಿಂದಲೇ ನಾನು ಹೊಸ ನಿರ್ಬಂಧವನ್ನು ಜಾರಿತಂದಿದ್ದು, ಆವರು ಇಲ್ಲಿರುವುದು ಬೇಕಾಗಿಲ್ಲ ಎಂದು ಪೆಂಟಗಾನ್ ನಲ್ಲಿ ಘೋಷಿಸಿದ್ದಾರೆ.
ಇಸ್ಲಾಮಿಕ್ ಮೂಲಭೂತವಾದಿ ಉಗ್ರರಿಂದ ಅಮೆರಿಕ ದೇಶವನ್ನು ರಕ್ಷಿಸುವುದೇ ನನ್ನ ಉದ್ದೇಶ ಎಂದಿರುವ ಟ್ರಂಪ್, ಹೊಸ ಆದೇಶದಲ್ಲಿ ಮುಖ್ಯವಾಗಿ ಇಸ್ಲಾಂ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ಸೇರಿದಂತೆ 7 ರಾಷ್ಟ್ರಗಳ ವಲಸಿಗರಿಗೆ ಅಥವಾ ವಿಸಿಟರ್ಸ್ಸ್ ಗೆ 90 ದಿನಗಳ ಕಾಲ ವೀಸಾವನ್ನು ನೀಡಲು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾರು ನಮ್ಮ ದೇಶದ ಪ್ರಜೆಗಳಿದ್ದಾರೋ, ಯಾರು ನಮ್ಮನ್ನು ಬೆಂಬಲಿಸುತ್ತಾರೋ, ಯಾರು ನಮ್ಮ ಜನರನ್ನು ಆಗಾಧವಾಗಿ ಪ್ರೀತಿಸುತ್ತಾರೋ ಅವರು ಮಾತ್ರ ಇಲ್ಲಿರಲಿ ಎಂದು ಟ್ರಂಪ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.