ಪಾಕ್ ಪಾಠ ಬೇಕಿಲ್ಲ; ನೆರೆರಾಷ್ಟ್ರಕ್ಕೆ ಭಾರತ ಛೀಮಾರಿ
Team Udayavani, Mar 11, 2018, 6:00 AM IST
ವಿಶ್ವಸಂಸ್ಥೆ: ಕಾಶ್ಮೀರ ಸಮಸ್ಯೆಯನ್ನು ಶುಕ್ರವಾರ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ, ಭಾರತದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಮಾಡಿದ್ದ ಪಾಕಿಸ್ತಾನಕ್ಕೆ ಶುಕ್ರವಾರ ತಿರುಗೇಟು ನೀಡಿರುವ ಭಾರತ, ಉದ್ಧಟತನ ತೋರುತ್ತಿರುವ ನೆರೆಯ ರಾಷ್ಟ್ರಕ್ಕೆ ಸಖತ್ತಾಗಿಯೇ ಛೀಮಾರಿ ಹಾಕಿದೆ.
ವಿಫಲ ರಾಷ್ಟ್ರವೊಂದರಿಂದ ನಾವು ಹಕ್ಕುಗಳ ಬಗ್ಗೆ ಪಾಠ ಕಲಿಯಬೇಕಾಗಿಲ್ಲ ಎಂಬ ಖಡಕ್ ಮಾತುಗಳನ್ನಾಡಿದೆ.
ಭಾರತ ನಿಯೋಗದ ಕಾರ್ಯದರ್ಶಿ ಮಿನಿ ದೇವಿ ಕುಮಾಮ್, “”ಪಾಕಿಸ್ತಾನ, ಒಸಾಮಾ ಬಿನ್ ಲಾಡೆನ್, ಹಫೀಜ್ ಸಯೀದ್ ಸೇರಿದಂತೆ ಅನೇಕ ಉಗ್ರರಿಗೆ ಆಶ್ರಯ ನೀಡುತ್ತಾ ಬಂದಿದೆ. ಇದರ ಬಗ್ಗೆ ವಿಶ್ವ ಸಮುದಾಯ ಕೇಳಿದಾಗ, ಪಾಕಿಸ್ತಾನ ತುಟಿಪಿಟಿಕ್ಕೆನ್ನುವುದಿಲ್ಲ. ಮುಂಬೈ ದಾಳಿಕೋರ ಹಫೀಜ್ ಸಯೀದ್, 2016ರ ಪಠಾಣ್‌ಕೋಟ್ ದಾಳಿಕೋರರು ಹಾಗೂ ಉರಿ ದಾಳಿಕೋರರು ಸೇರಿದಂತೆ ಅನೇಕ ನರಹಂತಕರು ನಿರ್ಭಯವಾಗಿ ಪಾಕಿಸ್ತಾನದ ಬೀದಿಗಳಲ್ಲಿ ಅಡ್ಡಾಡುತ್ತಿದ್ದಾರೆ. ಅವರನ್ನು ಹಿಡಿದು ತಕ್ಕ ಪಾಠ ಕಲಿಸಿ, ಉಗ್ರವಾದವನ್ನು ಮಟ್ಟ ಹಾಕುವ ಬದಲು ಇಡೀ ವಿಶ್ವಕ್ಕೆ ಪಾಕಿಸ್ತಾನ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡುತ್ತದೆ” ಎಂದು ಖಂಡಿಸಿದ್ದಾರೆ.
“”ತನ್ನ ನೆಲೆಯಲ್ಲಿ ಉಗ್ರವಾದವನ್ನು ಮಟ್ಟ ಹಾಕದೇ, ರಕ್ತಪಾತಕ್ಕೆ ನೇರವಾಗಿ ಬೆಂಬಲ ನೀಡುತ್ತಿರುವ ಪಾಕಿಸ್ತಾನ, ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡುತ್ತದೆ. ಮಾನವ ಹಕ್ಕುಗಳನ್ನು ಕಾಪಾಡುವಲ್ಲಿ ವಿಫಲವಾಗಿರುವ ರಾಷ್ಟ್ರವೆಂಬ ಕುಖ್ಯಾತಿ ಪಡೆದಿರುವ ಇಂಥ ದೇಶದಿಂದ ವಿಶ್ವವು ಮಾನವ ಹಕ್ಕುಗಳ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಪಾಠ ಕಲಿಯಬೇಕಿಲ್ಲ” ಎಂದು ಕುಮಾಮ್ ಖಡಕ್ ಮಾತುಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲದೆ, “”ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ಮಾಡುವ ಬದಲು, ತನ್ನಲ್ಲಿನ ಉಗ್ರರ ವಿರುದ್ಧ ಪಾಕಿಸ್ತಾನ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಿ. ಭಾರತ ಸೇರಿದಂತೆ ವಿಶ್ವವೇ ಇದನ್ನು ಎದುರು ನೋಡುತ್ತಿದೆ” ಎಂದಿದ್ದಾರೆ.
ಪಾಕ್ “ಸ್ಪೆಷಲ್ ಟೆರ ರಿಸ್ಟ್ ಝೋನ್’ ಇದಷ್ಟೇ ಅಲ್ಲ, ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಲು ಪ್ರಯತ್ನಿಸಿ ಹಿಂದೆಯೂ ಏಟು ತಿಂದಿದ್ದ ಪಾಕಿಸ್ತಾನಕ್ಕೆ ಈ ಬಾರಿಯೂ ಸರಿ ಯಾಗಿಯೇ ಏಟು ಬಿದ್ದಿದೆ. ಕಳೆದ ಬಾರಿ ಟೆರರಿಸ್ತಾನ್ ಎಂದು ಕರೆದಿದ್ದ ಭಾರತ ಈ ಬಾರಿ, ಪಾಕಿಸ್ತಾನವನ್ನು “ಸ್ಪೆಷಲ್ ಟೆರ ರಿಸ್ಟ್ ಝೋನ್’ ಎಂದು ಹೇಳಿದೆ. ಜಗತ್ತಿನ ಪ್ರಖ್ಯಾತ ಉಗ್ರರಿಗೆ ನೆಲೆ ನೀಡಿ ಕೊಂಡು ಅವ ರಿಗೆ ಸ್ವರ್ಗ ಕಲ್ಪಿಸಿರುವ ಪಾಕಿಸ್ತಾನ ಮೊದಲು ಇನ್ನೊಬ್ಬರನ್ನು ದೂರುವುದನ್ನು ಬಿಟ್ಟು, ಸ್ಪೆಷಲ್ ಟೆರರ್ ಝೋನ್ ಅನ್ನು ನಾಶ ಮಾಡಲಿ ಎಂದೂ ಮಿನಿ ದೇವಿ ಕುಮಾರ್ ತಾಕೀತು ಮಾಡಿದ್ದಾರೆ.
ಶುಕ್ರವಾರದ ತಮ್ಮ ಭಾಷಣದಲ್ಲಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಯಾಗಿರುವ ತಾಹಿರ್ ಅದ್ರಾಬಿ, “”ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಗಡಿಯಲ್ಲಿ ಭಾರತದ ಕಡೆಯಿಂದ ಪದೇ ಪದೆ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ” ಎಂದು ಆರೋಪಿಸಿದ್ದರು. ಅಲ್ಲದೆ, ಕಾಶ್ಮೀರ ಭೂಭಾಗವು ಭಾರತಕ್ಕೆ ಸೇರಬೇಕೋ, ಪಾಕಿಸ್ತಾನಕ್ಕೆ ಸೇರಬೇಕೋ ಎಂಬುದರ ಬಗ್ಗೆ ಕಾಶ್ಮೀರ ಜನತೆಯೇ ನಿರ್ಧರಿಸಲಿ ಎಂದು ಹಿಂದೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಹೇಳಿದ್ದರು. ಆದರೆ, ಅವರ ಮಾತನ್ನು ಭಾರತ ಸರ್ಕಾರ ಮರೆತಿದೆ. ಜನಾಭಿಪ್ರಾಯಪಡೆಯಬೇಕು ಎಂದು ಪಂಡಿತ್ ನೆಹರೂ ಹೇಳಿದ್ದನ್ನು ಭಾರತ ಮರೆತಿದೆ” ಎಂದು ಟೀಕಿಸಿದ್ದರು.
ಮತ್ತೆ ಪ್ರತ್ಯೇಕ ತಾವಾದಿಗಳಿಗೆ ಆಹ್ವಾನ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್‌ನಲ್ಲಿ ನಡೆಯಲಿರುವ ಪಾಕಿ ಸ್ತಾನ ದಿನಕ್ಕಾಗಿ ಕಾಶ್ಮೀರ ಪ್ರತ್ಯೇಕ ತಾವಾದಿಗಳಿಗೆ ಆಹ್ವಾನ ನೀಡಲಾಗಿದೆ. ಮಾರ್ಚ್ 23 ರಂದು ಈ ಕಾರ್ಯಕ್ರಮ ನಡೆ ಯಲಿದ್ದು, ಹೈಕಮಿಷನರ್ ಆಹ್ವಾನ ತೀವ್ರ ವಿವಾದಕ್ಕೂ ಕಾರ ಣವಾಗಿದೆ. ಸೊಹೈಲ್ ಮೊಹಮ್ಮದ್ ಅವರು, ಅಂದು ರಾತ್ರಿಯ ಔತಣ ಕೂಟಕ್ಕಾಗಿ ಆಹ್ವಾನ ನೀಡಿದ್ದಾರೆ. ಕಳೆದ ಬಾರಿಯೂ ಆಗಿನ ಹೈಕಮಿಷನರ್ ಅಬ್ದುಲ್ ಬಸಿತ್ ನೀಡಿದ್ದ ಭೋಜನ ಕೂಟದ ಆಹ್ವಾನ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಲ್ಲದೇ, ತೀವ್ರ ಪ್ರತಿರೋಧ ಎದುರಿಸಬೇಕಾಗಿತ್ತು. ಈ ಬಾರಿಯೂ ಪಾಕಿಸ್ತಾನ ಅದೇ ತಪ್ಪು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.