ಉಗ್ರ ಹಫೀಜ್ ಬಂಧನಕ್ಕೆ ಲಾಹೋರ್ ಹೈ ತಡೆ
Team Udayavani, Jan 25, 2018, 9:29 AM IST
ಲಾಹೋರ್: ಮುಂಬಯಿ ದಾಳಿಯ ರೂವಾರಿ, ಜಮಾತ್ ಉದ್ ದಾವಾ ಸಂಘಟನೆ ಉಗ್ರ ಹಫೀಜ್ ಸಯೀದ್ನನ್ನು ಮಾ.17ರವರೆಗೆ ಬಂಧಿಸದಂತೆ ಪಾಕ್ ಸರಕಾರಕ್ಕೆ ಲಾಹೋರ್ ಹೈಕೋರ್ಟ್ ಆದೇಶ ನೀಡಿದೆ.
ಸಯ್ಯದ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಕುರಿತಾಗಿ ಪರಿಶೀಲನೆ ನಡೆಸಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯೋಗ ಪಾಕಿಸ್ಥಾನಕ್ಕೆ ಗುರುವಾರ ಭೇಟಿ ನೀಡುವ ಮುನ್ನವೇ ಈ ಬೆಳವಣಿಗೆ ನಡೆದಿದೆ. ಅತ್ತ ಪಾಕಿಸ್ಥಾನದ ಕೆಲ ಮಾಧ್ಯಮಗಳು, ಪಾಕ್ ಸರಕಾರ, ನಿಯೋಗಕ್ಕೆ ಹಫೀಜ್ ಭೇಟಿ ಮಾಡಲು ಅವಕಾಶ ನೀಡುವುದಿಲ್ಲವೆಂದು ಅಭಿಪ್ರಾಯಪಟ್ಟಿವೆ.
ಏತನ್ಮಧ್ಯೆ, ಪಾಕಿಸ್ಥಾನ-ಅಫ್ಘಾನಿಸ್ಥಾನ ಗಡಿ ಪ್ರದೇಶದ ಮನೆಯೊಂದರ ಮೇಲೆ ಬುಧವಾರ ಅಮೆರಿಕ ಸೇನೆ, ಡ್ರೋಣ್ ಮೂಲಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹಕ್ಕಾನಿ ಉಗ್ರರ ನಾಯಕ ಎಹಸಾನ್ ಅಲಿಯಾಸ್ ಖವಾರಿ ಹಾಗೂ ಆತನ ಇಬ್ಬರು ಸಹಚರರು ಬಲಿಯಾಗಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.