ಇರಾನ್ ವಿರುದ್ಧ ಮಿಸೈಲ್ಸ್, ಮಿಲಿಟರಿ ಬಲಪ್ರಯೋಗ ಇಲ್ಲ: ಡೊನಾಲ್ಡ್ ಟ್ರಂಪ್ ನಿಗೂಢ ನಡೆ ಏನು?
ನಮ್ಮದು ವಿಶ್ವದಲ್ಲಿಯೇ ದೊಡ್ಡ ಮಿಲಿಟರಿ ಪಡೆ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುವ ದೇಶವಾಗಿದೆ.
Team Udayavani, Jan 9, 2020, 10:19 AM IST
ವಾಷಿಂಗ್ಟನ್: ಟೆಹ್ರಾನ್ ವಿರುದ್ಧ ವಾಷಿಂಗ್ಟನ್ ಮಿಲಿಟರಿ ಕಾರ್ಯಾಚರಣೆಯಾಗಲಿ ಅಥವಾ ಮಿಸೈಲ್ಸ್ ದಾಳಿ ನಡೆಸಲ್ಲ ಎಂದು ತಿಳಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮೂಲಕ ಉಭಯ ದೇಶಗಳ ನಡುವಿನ ಯುದ್ಧ ಸಂಘರ್ಷವನ್ನು ಶಮನಗೊಳಿಸುವ ಮುನ್ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಬುಧವಾರ ನಸುಕಿನ ವೇಳೆ ಇರಾಕ್ ನಲ್ಲಿರುವ ಅಮೆರಿಕ ಮೈತ್ರಿ ಪಡೆಗಳ ಮೇಲೆ ಇರಾನ್ 12ಕ್ಕೂ ಅಧಿಕ ಕ್ಷಿಪಣಿ ದಾಳಿ ನಡೆಸಿತ್ತು. ಇದು ನಾವು ಅಮೆರಿಕದ ಮುಖಕ್ಕೆ ಬಾರಿಸಿದ ಹೊಡೆತವಾಗಿದೆ ಎಂದು ಇರಾನ್ ತಿರುಗೇಟು ನೀಡಿತ್ತು. ಈ ದಾಳಿ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ ವಿವರಿಸಿದೆ.
ಇರಾನ್ ವಿರುದ್ಧ ನಾವು ಮಿಲಿಟರಿ ಬಲಪ್ರಯೋಗಕ್ಕೆ ಮುಂದಾಗುವುದಿಲ್ಲ ಎಂದು ಹೇಳುವ ಮೂಲಕ ಇರಾನ್, ಅಮೆರಿಕ ನಡುವಿನ ಸಂಘರ್ಷ ಶಮನಗೊಳಿಸುವ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆ. ನಮ್ಮದು ವಿಶ್ವದಲ್ಲಿಯೇ ದೊಡ್ಡ ಮಿಲಿಟರಿ ಪಡೆ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುವ ದೇಶವಾಗಿದೆ. ಅಂದರೆ ಇದರ ಅರ್ಥ ಉಪಯೋಗಿಸಲೇಬೇಕು ಎಂದಲ್ಲ. ನಾವು ಅದನ್ನು ಬಳಸುತ್ತಿಲ್ಲ ಅಷ್ಟೇ ಎಂದು ಹೇಳಿದ್ದಾರೆ.
ನಾವು ಆರ್ಥಿಕವಾಗಿ ಹಾಗೂ ಮಿಲಿಟರಿಯಲ್ಲಿ ಬಲಿಷ್ಠರಾಗಿದ್ದೇವೆ ಎಂದು ಟ್ರಂಪ್ ಈ ಸಂದರ್ಭದಲ್ಲಿ ತಿಳಿಸಿದರು. ಇರಾನ್ ವಿರುದ್ಧ ಯಾವುದೇ ಶೀಘ್ರ ದಾಳಿ ನಡೆಸುವ ಬೆದರಿಕೆಯ ಹೇಳಿಕೆ ನೀಡಿಲ್ಲ. ಆದರೆ ಕಠಿಣ ಆರ್ಥಿಕ ದಿಗ್ಭಂಧನ ಕೂಡಲೇ ವಿಧಿಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.