ಶ್ರೀದೇವಿ ಪಾರ್ಥಿವ ಶರೀರ ತಾಯ್ನಾಡಿಗೆ, ಇಂದು ಅಂತ್ಯಕ್ರಿಯೆ
Team Udayavani, Feb 28, 2018, 6:00 AM IST
ದುಬಾೖ: ಮುಂಬಯಿಯಲ್ಲಿ ತಮ್ಮ ನೆಚ್ಚಿನ ನಟಿ ಶ್ರೀದೇವಿಯವರ ಅಂತಿಮ ದರ್ಶನಕ್ಕೆ ಕಾದು ಕುಳಿತಿರುವ ಅವರ ಸಾವಿರಾರು ಅಭಿಮಾನಿಗಳಿಗೆ, ಆ ಅವಕಾಶ ತಡವಾಗಿ ದೊರಕಿದೆ. ದುಬಾೖಯಲ್ಲಿ ಶನಿವಾರ ತಡರಾತ್ರಿ ನಿಧನ ಹೊಂದಿದ ಬಾಲಿವುಡ್ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರ, ಎರಡು ದಿನಗಳ ಸುದೀರ್ಘ ಕಾನೂನು ಪ್ರಕ್ರಿಯೆಗಳ ಅನಂತರ, ಕೊನೆಗೂ ಮುಂಬಯಿಗೆ ಮಂಗಳವಾರ ತಡರಾತ್ರಿ ಆಗಮಿಸಿದೆ.
ಈ ಮಧ್ಯೆ ಬುಧವಾರವೇ ಶ್ರೀದೇವಿ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಸುವುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಶ್ರೀದೇವಿ ಅವರು ಪ್ರಜ್ಞೆ ತಪ್ಪಿ ಬಾತ್‌ಟಬ್‌ಗ ಬಿದ್ದ ಕಾರಣ ಸಾವು ಸಂಭವಿಸಿದೆ ಎಂದು ದುಬಾೖ ಪಬ್ಲಿಕ್ ಪ್ರಾಸಿಕ್ಯೂಶನ್ ಸ್ಪಷ್ಟಪಡಿಸಿದ್ದು, ಕೇಸನ್ನು ಸಮಾಪ್ತಿಗೊಳಿಸಿದೆ. ಈ ಮೂಲಕ ನಟಿಯ ಸಾವಿನ ಬಗ್ಗೆ ಎದ್ದಿದ್ದ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದೆ.
ವಿವಿಧ ಹಂತಗಳ, ಸುದೀರ್ಘ ಕಾನೂನು ಪ್ರಕ್ರಿಯೆಗಳಿಂದಾಗಿ ಶ್ರೀದೇವಿ ಮೃತದೇಹ ಪಡೆಯುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ, ಶ್ರೀದೇವಿ ಪತಿ ಬೋನಿ ಕಪೂರ್ ಅವರ ಮೊದಲ ಪತ್ನಿಯ ಮಗನಾದ ಅರ್ಜುನ್ ಕಪೂರ್, ಮಂಗಳವಾರ ಬೆಳಗ್ಗೆ ದುಬೈ ತಲುಪಿ, ಬೋನಿ ಕಪೂರ್ ಸಹಾಯಕ್ಕೆ ನಿಂತರು. ಮುಂಬೈನ ಮನೆಗೆ ಶ್ರೀದೇವಿಯರ ಅಂತಿಮ ಪಯಣ, ಅವರು ಅಸುನೀಗಿ ಮೂರನೇ ದಿನವಾದರೂ ಸುಲಭ ಸಾಧ್ಯವಾಗಲೇ ಇಲ್ಲ. ಭಾರತೀಯ ಕಾಲಮಾನ ಸಂಜೆ 4 ಗಂಟೆ ಸುಮಾರಿಗೆ, ಬಾತ್‌ಟಬ್‌ನಲ್ಲಿ ಮುಳು
ಗಿಯೇ ಶ್ರೀದೇವಿ ಸಾವಿಗೀಡಾಗಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಿರುವುದಾಗಿ ದುಬೈ ಪಬ್ಲಿಕ್ ಪ್ರಾಸಿಕ್ಯೂಟರ್ ಘೋಷಿಸಿದರು.
ಇದಾದ ಹೊರತಾಗಿಯೂ, ಪ್ರಕರಣ ಮುಕ್ತಾಯಗೊಳಿಸಿದ ಪ್ರಮಾಣ ಪತ್ರವನ್ನು ಪಡೆಯಲು ಬೋನಿ ಕಪೂರ್ ಕುಟುಂಬ ದವರಿಗೆ
ಮತ್ತಷ್ಟು ಸಮಯ ಹಿಡಿಯಿತು. ಅಂತಿಮವಾಗಿ, ಪ್ರಮಾಣ ಪತ್ರದ ಎರಡು ಪ್ರತಿಗಳಲ್ಲಿ ಒಂದನ್ನು ಬೋನಿ ಕಪೂರ್ ಕುಟುಂಬಕ್ಕೆ
ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್, ಮತ್ತೂಂದು ಪ್ರತಿಯನ್ನು ದುಬೈನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ರವಾನಿಸಿದರು. ಆನಂತರ, ಸಂಜೆ 5:30ರ ಹೊತ್ತಿಗೆ ನಟಿಯ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಆನಂತರ, ಮೃತದೇಹದ ಸಂಸ್ಕರಣಾ ಪ್ರಕ್ರಿಯೆಗಳು ಆರಂಭವಾದವು. ಇದು ಮುಗಿದ ಮೇಲೆ ದೇಹವನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ
ತರಲಾಯಿತು. ಅಲ್ಲಿ, ಕಳೆದೆರಡು ದಿನಗಳಿಂದಲೇ ಕಾಯುತ್ತಿದ್ದ ಮುಂಬೈನ ಖಾಸಗಿ ಹೆಲಿಕಾಪ್ಟರ್‌ನ ಮೂಲಕ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಯಿತು.
ವಿವಾದಕ್ಕೀಡಾದ ಸ್ವಾಮಿ: ಶ್ರೀದೇವಿ ಅವರ ಆಕಸ್ಮಿಕ ಸಾವನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಲಿಂಕ್ ಮಾಡಿದ್ದ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರನ್ನು ಟ್ವಿಟರ್‌ನಲ್ಲಿ ಜನ ತೀವ್ರ ತರಾಟೆಗೆ ತೆಗೆದು ಕೊಂಡಿದ್ದಾರೆ. ಸುದ್ದಿಸಂಸ್ಥೆ ಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, “”ದಾವೂದ್ ಅವರ ಜತೆಗೆ ಶ್ರೀದೇವಿ ಹೊಂದಿದ್ದ ಸಂಬಂಧವೂ ಕೊಲೆಗೆ
ಕಾರಣವಾಗಿರಬಹುದು. ದುಬೈನಲ್ಲಿ ಅವರಿದ್ದ ಹೋಟೆಲ್‌ನ ಸಿಸಿಟಿವಿ ವರದಿಗಳನ್ನೇಕೆ ಪರಿಗಣಿಸಲಾಗಿಲ್ಲ. ವೈದ್ಯರೇಕೆ, ಮಾಧ್ಯಮಗಳೆದುರು ಧುತ್ತನೆ ಪ್ರತ್ಯಕ್ಷವಾಗಿ ಹೃದಯಾಘಾತದಿಂದ ನಟಿ ಸಾವು ಎಂದಿದ್ದರು” ಎಂಬ ಪ್ರಶ್ನೆಗಳನ್ನೆಸೆದಿದ್ದರು.
ಇದಕ್ಕೆ, ಟ್ವಿಟರ್‌ನಲ್ಲಿ ಅವರು ಭಾರೀ ಪ್ರತಿರೋಧ ಎದುರಿಸಬೇಕಾಯ್ತು. ಕೆಲವರು, ಸ್ವಾಮಿ ಅವರನ್ನು “ದುಷ್ಟ ಬುದ್ಧಿಯುಳ್ಳವರು’ ಎಂದು ಬೈದರೆ, ಮತ್ತೆ ಕೆಲವರು ಸ್ವಾಮಿ ಅವರನ್ನು “ಭಾರತದ ಪಿತೂರಿ ಪಿತಾಮಹ’ ಎಂದು ಜರೆದರು.
ಮಾಧ್ಯಮಗಳ ವಿರುದ್ಧ ತಾರೆಗಳ ಕಿಡಿ: ಏತನ್ಮಧ್ಯೆ, ಶ್ರೀದೇವಿಯವರ ನಿಧನದ ಸುತ್ತ ಇದ್ದ ನಿಗೂಢತೆಯನ್ನಾಧರಿಸಿ, ಸೋಮವಾರ ಭಾರತೀಯ ಮಾಧ್ಯಮಗಳು ವರದಿ ಮಾಡಿದ ರೀತಿಯನ್ನು ಬಾಲಿವುಡ್ ನಟ, ನಟಿಯರು ಟ್ವಿಟರ್‌ನಲ್ಲಿ ತೀವ್ರವಾಗಿ ಆಕ್ಷೇಪಿಸಿದ್ದಾರೆ. ನಟ-ನಿರ್ದೇಶಕ ಫರ್ಹಾನ್ ಅಖ್ತರ್ ಅವರು, “ಅಮಾನವೀಯ ವರದಿಗಳುಳ್ಳ ಈ ಕೊಪ್ಪರಿಗೆಗೆ ತಳವೇ ಇಲ್ಲ’ ಎಂದಿದ್ದರೆ, ನಟಿ
ವಿದ್ಯಾಬಾಲನ್, “ನಟಿ ಶ್ರೀದೇವಿಯನ್ನು ನೇರ ಪ್ರಸಾರದಲ್ಲಿ ಮಾಧ್ಯಮಗಳೇ ಕೊಂದವು. ಇದು ನಿಜಕ್ಕೂ ನಾಚಿಗೆಗೇಡು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿ, “”ಪ್ರೀತಿಯಿಂದ ವರದಿ ಮಾಡಿ. ಇದೊಂದೇ ನೀವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ” ಎಂದಿದ್ದಾರೆ. ನಟ, ನಿರ್ದೇಶಕ ರೋಹಿತ್ ಶೆಟ್ಟಿ, ನಿರ್ದೇಶಕ ಅಭಿಷೇಕ್ ಕಪೂರ್ ಮುಂತಾದವರೂ ಟ್ವಿಟರ್‌ನಲ್ಲಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ದರ್ಶನಕ್ಕೆ ಅವಕಾಶ
ಶ್ರೀದೇವಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ಸಂಜೆ 3:30ರ ಸುಮಾರಿಗೆ ನಡೆಯಲಿದೆ ಎಂದು ಕುಟುಂಬ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಸೆಲೆಬ್ರೇಷನ್ ನ್ಪೋರ್ಟ್ಸ್ ಕ್ಲಬ್‌ನ ಗಾರ್ಡನ್ ಸಂಖ್ಯೆ 5ರಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಿಮ ನಮನ ಸಲ್ಲಿಸ ಬಯಸುವ ಮಾಧ್ಯಮ ಮಿತ್ರರು, ತಮ್ಮ ಕ್ಯಾಮೆರಾ ಅಥವಾ ಇನ್ಯಾವುದೇ ರೆಕಾರ್ಡಿಂಗ್ ಪರಿಕರಗಳನ್ನು ಗಾರ್ಡನ್‌ನ
ಹೊರಗಡೆ ಇಟ್ಟು ಬಂದು ನಮನ ಸಲ್ಲಿಸಬಹು ದೆಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ಜತೆಗೆ, ಶ್ರೀದೇವಿ ಸಾವಿಗೆ ನಿರೀಕ್ಷೆಗೂ ಮೀರಿ ಸ್ಪಂದಿಸಿದ ಮಾಧ್ಯಮಗಳಿಗೆ ಕಪೂರ್, ಅಯ್ಯಪ್ಪನ್ ಕುಟುಂಬಗಳ ವತಿಯಿಂದ ಧನ್ಯವಾದ ಅರ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.