ಖಲೀಫಾದಲ್ಲಿ ಕೋಲ್ಮಿಂಚು ; ಕೆಮೆರಾ ಕಣ್ಣಿಗೆ ಸೆರೆಸಿಕ್ಕ ಅಪರೂಪದ ದೃಶ್ಯ
Team Udayavani, Jan 15, 2020, 1:17 AM IST
ದುಬಾೖ: ಅನಿರೀಕ್ಷಿತ ಮಳೆಯು ದುಬಾೖನಾದ್ಯಂತ ಜನಜೀವನ ಅಸ್ತವ್ಯಸ್ತಗೊಳಿಸಿರುವ ನಡುವೆಯೇ, ಜಗತ್ತಿನ ಅತೀ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾಗಿರುವ ಇಲ್ಲಿನ ಬುರ್ಜ್ ಖಲೀಫಾದ ತುತ್ತ ತುದಿಗೆ ಸಿಡಿಲು ಬಡಿಯುತ್ತಿರುವ ಅದ್ಭುತ ದೃಶ್ಯವೊಂದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
ಝೊಹೈಬ್ ಅಂಜುಮ್ ಎಂಬವರು ಬುರ್ಜ್ ಖಲೀಫಾದಲ್ಲಿ ‘ಮಿಂಚಿ’ನ ಸಂಚಲನ ಆಗುತ್ತಿರುವ ವಿಡಿಯೋವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಥದ್ದೊಂದು ಪರ್ಫೆಕ್ಟ್ ಶಾಟ್ ಸಿಗಬೇಕೆಂದು ಅಂಜುಮ್ ಅವರು ಬರೋಬ್ಬರಿ 7 ವರ್ಷಗಳಿಂದಲೂ ಕಾಯುತ್ತಿದ್ದರಂತೆ.
‘ಮರಳುಗಾಡಿನಲ್ಲಿ ಮಳೆಯ ಸಿಂಚನವಾದಾಗೆಲ್ಲ ಬುರ್ಜ್ ಖಲೀಫಾದ ಹೊರಗೆ ರಾತ್ರಿಪೂರ್ತಿ ಕಳೆದು, ಸಿಡಿಲು ಬಡಿಯುವ ದೃಶ್ಯವನ್ನು ಸೆರೆಹಿಡಿಯಲು ಯತ್ನಿಸುತ್ತಿದ್ದೆ. ಈಗ 2,720 ಅಡಿ ಎತ್ತರದ ಕಟ್ಟಡದ ಮೇಲ್ಭಾಗದಲ್ಲಿ ಸಿಡಿಲಿನ ರೇಖೆ ಮೂಡುತ್ತಿರುವಾಗಲೇ ಕೆಮೆರಾಗೆ ಅದು ಸೆರೆ ಸಿಕ್ಕಿರುವುದು ನನ್ನ ಕನಸನ್ನು ನನಸು ಮಾಡಿದೆ. ಆ ಭಗವಂತನೇ ನನಗಾಗಿ ಈ ಕ್ಷಣವನ್ನು ಯೋಜಿಸಿದ್ದ’ ಎಂದಿದ್ದಾರೆ ಝೊಹೈಬ್.
1996ರ ಬಳಿಕ ಇದೇ ಮೊದಲ ಬಾರಿಗೆ ಯುಎಇ ಇಷ್ಟು ಪ್ರಮಾಣದ ಮಳೆಯನ್ನು ಕಂಡಿದ್ದು, ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.