ಭೂಮಿಯ ಪರಿಭ್ರಮಣೆಯಲ್ಲಿ ವ್ಯತ್ಯಾಸ
Team Udayavani, Aug 1, 2022, 7:15 AM IST
ವಾಷಿಂಗ್ಟನ್: ದಿನಕ್ಕೆಷ್ಟು ಗಂಟೆ ಎಂದು ಕೇಳಿದರೆ ಇಪ್ಪತ್ತನಾಲ್ಕು ಎಂದು ತಡವಿಲ್ಲದೆ ಉತ್ತರಿಸುತ್ತೇವೆ. ಅಲ್ಲವೇ? ತನ್ನಷ್ಟಕ್ಕೆ ತಾನೇ ಒಂದು ಪೂರ್ತಿ ಸುತ್ತು ಹಾಕುವುದಕ್ಕೆ 24 ಗಂಟೆಗಳು ಎಂದರ್ಥ.
ಆದರೆ, ಜು. 29ರಂದು ಭೂಮಿಯು 1.59 ಮಿಲಿ ಸೆಕೆಂಡ್‌ಗಳಷ್ಟು ಮುಂಚಿತವಾಗಿಯೇ ತನ್ನ ಪರಿಭ್ರಮಣೆಯನ್ನು ಮುಗಿಸಿದೆ! ಹಾಗಂತ, ಭೂಮಿಗೆ ಇಷ್ಟು ವೇಗವಾಗಿ ಪರಿಭ್ರಮಣ ನಡೆಸಿದ್ದು ಇದೇ ಮೊದಲೇನಲ್ಲ.
ವಿಜ್ಞಾನಿಗಳ ಪ್ರಕಾರ, 1960ರ ನಂತರ ಭೂಮಿಯ ಪರಿಭ್ರಮಣೆಯ ವೇಗ ಹೆಚ್ಚಾಗಿದೆ. 1960ರ ಜು. 19ರಂದು ಭೂಮಿ, ಸೂರ್ಯನನ್ನು 1.47 ಸೆಕೆಂಡ್‌ಗಳಷ್ಟು ಮೊದಲೇ ಸುತ್ತಿ ಬಂದಿತ್ತು.
ಕಾರಣವೇನು?
ಭೂಮಿಯ ಪರಿಭ್ರಮಣೆಯ ವೇಗ ಏಕೆ ಹೀಗೆ ಹೆಚ್ಚಾಗುತ್ತಿದೆ ಎಂಬುದಕ್ಕೆ ನಿಖರ ಕಾರಣಗಳು ಏನು ಎಂಬುದು ತಿಳಿದುಬಂದಿಲ್ಲ. ಜಾಗತಿಕ ಹವಾಮಾನ ಬದಲಾವಣೆ, ಭೂಮಿಯ ಒಳ ಮತ್ತು ಹೊರ ಪದರಗಳಲ್ಲಿ ಆಗುತ್ತಿರುವ ಬದಲಾವಣೆಗಳೇ ಕಾರಣವಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇನ್ನೂ ಕೆಲವು ಸಂಶೋಧಕರು, ಭೂಮಿಯ ಧ್ರುವಗಳಲ್ಲಿ ಆಗುತ್ತಿರುವ ಪಲ್ಲಟವೇ ಇದಕ್ಕೆ ಕಾರಣವಿರಬಹುದು ಎಂದು ಹೇಳಿದ್ದಾರೆ.
ಏರುಪೇರಾದರೆ ಸಮಸ್ಯೆ ಖಂಡಿತ!
ಭೂಮಿಯ ಪರಿಭ್ರಮಣೆಯ ವೇಗ ಹೆಚ್ಚುತ್ತಿರುವುದಿಂದ ಬೇರೆಯದ್ದೇ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗೆ, ಕೆಲವು ಮಿಲಿಸೆಕೆಂಡ್‌ಗಳಷ್ಟು ಮುನ್ನವೇ ಭೂಮಿ ತನ್ನನ್ನು ತಾನು ಸುತ್ತು ಹಾಕುವುದು ಮುಂದುವರಿದರೆ, ಸಮಯದ ಲೆಕ್ಕಾಚಾರದಲ್ಲಿ ರೂಪಿಸಲಾಗಿರುವ ತಂತ್ರಜ್ಞಾನದಲ್ಲಿ (ಉದಾಹರಣೆಗೆ ಕಂಪ್ಯೂಟರ್ ಟೈಮಿಂಗ್), ಶೆಡ್ಯೂಲಿಂಗ್ ಸೇವೆಗಳಲ್ಲಿ ವ್ಯತ್ಯಯವಾಗುತ್ತದೆ. ಅಂದರೆ, ಡಿಜಿಟಲ್ ಕ್ಲಾಕ್‌ನಲ್ಲಿ ದಿನದ 24 ಗಂಟೆ ಮುಗಿಯುವಾಗ 23 ಗಂಟೆ 59 ನಿಮಿಷ 58 ಸೆಕೆಂಡ್ (23:59:58), ಆನಂತರ 23:59:59, ತದನಂತರ 00:00:00 (ಮಧ್ಯರಾತ್ರಿ 12 ಗಂಟೆ) 00:00:01 ಎಂದು ತೋರಿಸುವಂತೆ ಕೋಡಿಂಗ್ ಮಾಡಲಾಗಿರುತ್ತದೆ.
ಭೂಮಿಯ ವೇಗ ಸರಾಸರಿ 1 ಸೆಕೆಂಡ್‌ನಷ್ಟು ಹೆಚ್ಚಾಗಿರುವುದರಿಂದ ದಿನದ ಲೆಕ್ಕಾಚಾರದಲ್ಲಿ ಒಂದು ಸೆಕೆಂಡ್ ಕಡಿಮೆ ಮಾಡಬೇಕಾಗುತ್ತದೆ. ಆಗ, ಕಂಪ್ಯೂಟರ್ ಹಾಗೂ ಇನ್ನಿತರ ಡಿಜಿಟಲ್ ಸಾಧನಗಳಲ್ಲಿ ಅಳವಡಿಸಲಾಗಿರುವ ಸಮಯದ ಎಣಿಕೆ ವ್ಯವಸ್ಥೆಯನ್ನು 23:59:58ರಿಂದ ನೇರವಾಗಿ 00:00:00 (ಮಧ್ಯರಾತ್ರಿ 11:58ರಿಂದ ನೇರವಾಗಿ 12 ಗಂಟೆಗೆ) ಜಂಪ್ ಆಗುವಂತೆ ಮಾಡಬೇಕಾಗುತ್ತದೆ.
ಆದರೆ, ಇಷ್ಟು ಮಾಡಿದರೆ ಸಮಯ ಎಣಿಕೆ ಸಮಸ್ಯೆಯೇನೋ ಸರಿಹೋದೀತು ಆದರೆ, ಸಮಯದ ಎಣಿಕೆ ಆಧಾರ ಮೇಲೆ ಕಾರ್ಯನಿರ್ವಹಿಸುವ ಸಾಫ್ಟ್ ವೇರ್ ಗಳು ಉಳ್ಳ ಸಾಮಗ್ರಿಗಳು ಸರಿಯಾಗಿ ಕೆಲಸ ಮಾಡದಂತಾಗಬಹುದು. ಕಂಪ್ಯೂಟರೀಕೃತ ಅಥವಾ ಡಿಜಿಟಲ್ ವ್ಯವಸ್ಥೆಗಳಂತೂ ಸಂಪೂರ್ಣ ಕ್ರಾಷ್ ಆಗಿಬಿಡುವ ಅಪಾಯವಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.