ಶ್ರೀಲಂಕಾದಲ್ಲಿ ಭುಗಿಲೆದ್ದ ಹಿಂಸಾಚಾರ; ಡೀಸೆಲ್ ಖಾಲಿ- ಕತ್ತಲೆಯಲ್ಲಿದೆ ಲಂಕೆ!
Team Udayavani, Apr 1, 2022, 8:40 AM IST
ಕೊಲಂಬೊ: ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶ ಇದೀಗ ಪ್ರತಿಭಟನೆಯ ರೂಪ ಪಡೆದಿದೆ. ರಾಜಧಾನಿ ಕೊಲಂಬೊದಲ್ಲಿ ಜನರು ಗುರುವಾರ ತಡರಾತ್ರಿ ಪ್ರತಿಭಟನೆ ನಡೆಸಿದರು. 5,000 ಕ್ಕೂ ಹೆಚ್ಚು ಜನರು ಲಂಕಾ ರಾಜಧಾನಿಯಲ್ಲಿ ಅಧ್ಯಕ್ಷರ ಭವನದ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿದರು ಮತ್ತು ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ತಡರಾತ್ರಿ ಪ್ರತಿಭಟನಾಕಾರರು ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆದಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ಕರೆಸಬೇಕಾಯಿತು.
ಕಳೆದ ರಾತ್ರಿ ನುಗೆಗೋಡಿನ ಮಿರಿಹಾನದಲ್ಲಿ ನಡೆದ ಪ್ರತಿಭಟನೆಯ ನಂತರ 45 ಜನರನ್ನು ಬಂಧಿಸಲಾಗಿದೆ (44 ಪುರುಷರು ಮತ್ತು ಓರ್ವ ಮಹಿಳೆ). ಎಎಸ್‌ಪಿ ಸೇರಿದಂತೆ 5 ಪೊಲೀಸ್ ಅಧಿಕಾರಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಪೊಲೀಸ್ ಬಸ್, ಒಂದು ಪೊಲೀಸ್ ಜೀಪ್, ಎರಡು ಮೋಟರ್ ಬೈಕ್‌ಗಳು ಮತ್ತು ಒಂದು ಜಲಫಿರಂಗಿ ಟ್ರಕ್ ಸುಟ್ಟುಹೋಗಿವೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ:ಯುಎಇ: ಕಾಶ್ಮೀರ್ ಫೈಲ್ಸ್ ಬಿಡುಗಡೆಗೆ ಒಪ್ಪಿಗೆ
ಈ ಪ್ರತಿಭಟನೆಯನ್ನು ಉಗ್ರಗಾಮಿ ಗುಂಪು ಆಯೋಜಿಸಿದೆ ಎಂದು ಸರ್ಕಾರ ಹೇಳಿದೆ. “ಅಪರಾಧಿಗಳನ್ನು ಬಂಧಿಸಲಾಗಿದೆ” ಎಂದು ಹೇಳಿದೆ. ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.
ಡೀಸೆಲ್ ಖಾಲಿ: ಶ್ರೀಲಂಕಾದ ಆರ್ಥಿಕ ದುಸ್ಥಿತಿಯಿಂದ ಉಂಟಾಗಿರುವ ತೈಲ ಕ್ಷೋಭೆ ಈಗ ತಾರಕಕ್ಕೇರಿದೆ. ಇಡೀ ರಾಷ್ಟ್ರದಲ್ಲಿ ಡೀಸೆಲ್ ಖಾಲಿಯಾಗಿ, ಡೀಸೆಲ್ ಬಂಕ್‌ಗಳು ಭಣಗುವಂತಾಗಿದೆ. ಬಸ್ಸುಗಳು, ಕಾರುಗಳು, ಸರಕು ಸಾಗಣೆ ವಾಹನಗಳು, ಆ್ಯಂಬುಲೆನ್ಸ್ ಸೇರಿ ಅತ್ಯಗತ್ಯ ವಾಹನಗಳಿಗೂ ಡೀಸೆಲ್ ಇಲ್ಲದಂತಾಗಿದೆ.
“ರಿಪೇರಿಗೆ ನಿಲ್ಲಿಸಲಾಗಿರುವ ವಾಹನಗಳ ಟ್ಯಾಂಕ್‌ಗಳಿಂದ ಡೀಸೆಲ್‌ಗಳನ್ನು ತೆಗೆದು ಅವುಗಳ ಸಹಾಯದಿಂದ ಅಗತ್ಯ ಸಾರಿಗೆ ನಿರ್ವಹಿಸಲಾಗುತ್ತಿದೆ” ಎಂದು ಲಂಕಾದ ದಿಲಂ ಅಮುನುಗಮಾ ತಿಳಿಸಿದ್ದಾರೆ.
“ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಶೇ. 66ರಷ್ಟು ಆವರಿಸಿರುವ ಖಾಸಗಿ ಬಸ್ಸುಗಳ ಮಾಲೀಕರು, ಡೀಸೆಲ್ ಕೊರತೆಯಿಂದಾಗಿ, ಅಗತ್ಯ ಸೇವೆಗಳನ್ನೂ ನೀಡಲು ಸಾಧ್ಯವಾಗುತ್ತಿಲ್ಲ” ಎಂದು ಅಲವತ್ತುಕೊಂಡಿದ್ದಾರೆ. ಪೆಟ್ರೋಲ್ ಅಭಾವ ಕೂಡ ಆವರಿಸಿದ್ದು ಪೆಟ್ರೋಲ್ ಬಂಕ್‌ಗಳ ಮುಂದೆ ಬೈಕುಗಳು, ಕಾರುಗಳು ಕಿಲೋಮೀಟರ್‌ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವೆನಿಸಿವೆ.
ವಿದ್ಯುತ್ ಕ್ಷಾಮ!: ತೈಲ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಗುರುವಾರದಿಂದ ಲಂಕಾದೆಲ್ಲೆಡೆ ದಿನಕ್ಕೆ 13 ಗಂಟೆಗಳ ವಿದ್ಯುತ್ ನಿಲುಗಡೆ ನಿಯಮ ಜಾರಿಯಾಗಿದೆ. 2.2 ಲಕ್ಷ ಜನರಿಗೆ ತೊಂದರೆಯಾಗಿದೆ. ಲಂಕಾದ ಎಲ್ಲಾ ಊರುಗಳ ಬೀದಿದೀಪಗಳು ಸ್ತಬ್ಧವಾಗಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.