ಚೀನಕ್ಕೆ ಶಿಕ್ಷಣ ಶಾಕ್; ಚೀನೀ ಶಿಕ್ಷಣ ತಜ್ಞರ ವೀಸಾಕ್ಕೆ ಪೂರ್ವ ಭದ್ರತಾ ಅನುಮತಿ ಕಡ್ಡಾಯ
Team Udayavani, Aug 22, 2020, 6:10 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದ ವಿಶ್ವ ವಿದ್ಯಾಲಯಗಳೊಂದಿಗಿನ ಚೀನದ ಸಂಬಂಧವನ್ನು ಕಡಿತಗೊಳಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ. ಚೀನದ ಶಿಕ್ಷಣ ತಜ್ಞರಿಗೆ ವೀಸಾ ನೀಡುವುದಕ್ಕೆ ಮುನ್ನ ಭದ್ರತಾ ಅನುಮತಿ ಅಗತ್ಯ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಶಿಕ್ಷಣ ತಜ್ಞರಲ್ಲದೆ ಚೀನೀ ಉದ್ಯಮಿಗಳು, ಉದ್ಯಮ ತಜ್ಞರು, ಕಾನೂನು ತಜ್ಞರಿಗೂ ಈ ನಿಯಮಾವಳಿ ಅನ್ವಯಿಸಲಿದೆ. ಈ ವೀಸಾ ನಿಬಂಧನೆಗಳು ಪಾಕ್ ಮೇಲೆ ವಿಧಿಸ ಲಾಗಿರುವ ನಿಯಮಗಳಂತೆಯೇ ಇರುತ್ತವೆ ಎಂದು ಸ್ಪಷ್ಪಪಡಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ನಮ್ಮ ಸಂಸ್ಕೃತಿ ಮೇಲೆ ಚೀನದ ಪ್ರಭಾವ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಶೈಕ್ಷಣಿಕ ಮೂಗುದಾರ
ಚೀನದ ಶೈಕ್ಷಣಿಕ ಸಂಸ್ಥೆಗಳು ಭಾರತದ ವಿ.ವಿ.ಗಳ ಜತೆಗೆ ಮಾಡಿಕೊಂಡಿರುವ ಒಡಂಬಡಿಕೆಗಳನ್ನು ಕೇಂದ್ರ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಐಐಟಿ, ಬನಾರಸ್ ಹಿಂದೂ ವಿ.ವಿ., ಜೆಎನ್ಯು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳ ಜತೆಗೆ ಚೀನದ ಸಂಸ್ಥೆಗಳು ಈ ಹಿಂದೆ ಒಪ್ಪಂದ ಮಾಡಿಕೊಂಡಿದ್ದವು. ಚೀನೀ ಭಾಷಾ ತರಬೇತಿ ಕಚೇರಿಗಳನ್ನೂ ಇಲ್ಲಿ ಸ್ಥಾಪಿಸಲಾಗಿತ್ತು. ಭಾರತ ಮತ್ತು ಚೀನದ ಶಿಕ್ಷಣ ಸಂಸ್ಥೆಗಳ ನಡುವೆ ಒಟ್ಟು 54 ಒಡಂಬಡಿಕೆಗಳಾಗಿದ್ದು, ಇವುಗಳ ಬಗ್ಗೆಯೂ ಕೇಂದ್ರ ಸರಕಾರ ಪರಿಶೀಲನೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.