ಮಮ್ಮಿ ಮೇಲೆ ಎಕ್ಸರೇ ಕಣ್ಣು !
Team Udayavani, Dec 7, 2017, 1:09 PM IST
ವಾಷಿಂಗ್ಟನ್: ಸಾವಿರಾರು ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಗಳ ಸಂರಕ್ಷಿತ ಶವಗಳಾದ ಈಜಿಪ್ಟ್ ನ ಮಮ್ಮಿಗಳನ್ನು ಪರಿಶೀಲನೆಗೆ ಒಳಪಡಿಸಲು ಅಮೆರಿಕದ ಪ್ರಮುಖ ಪ್ರಯೋಗಾಲಯವೊಂದು ಸಿದ್ಧತೆ ನಡೆಸಿದೆ.
ಮಮ್ಮಿಯ ಕವಚವನ್ನು ತೆರೆಯದೇ ಒಳಗಿನ ರಚನೆಯನ್ನು ವೀಕ್ಷಿಸಲು ವಿಜ್ಞಾನಿ ಗಳು ಅತ್ಯಂತ ಹೆಚ್ಚಿನ ತೀವ್ರತೆಯ ಸಂಕ್ರೋ ಟ್ರಾನ್ ಎಕ್ಸ್‌ರೇ ಬಳಸಲಿದ್ದಾರೆ. ಈ ಮೂಲಕ ಮಮ್ಮಿಯ ರಚನೆಯನ್ನು ಕೊಂಚವೂ ಬದಲಾಯಿಸದೆ ದೇಹದ ಮೂರು ಆಯಾಮಗಳನ್ನು ವಿವರವಾಗಿ ವಿಶ್ಲೇಷಣೆಗೆ ಒಳಪಡಿಸುವುದು ಹಾಗೂ ಲೆನಿನ್ ಕವಚದ ಒಳಗಿರುವ ವಸ್ತುಗಳನ್ನು ಪತ್ತೆಹಚ್ಚುವುದು ವಿಜ್ಞಾನಿಗಳ ಉದ್ದೇಶವಾಗಿದೆ.
ಪ್ರಸ್ತುತ ಪ್ರಯೋಗಕ್ಕೆ ಒಳಪಡಿಸಲಿರುವ ಮಮ್ಮಿಯು ಸುಮಾರು 1,900 ವರ್ಷಗಳ ಹಿಂದೆ ಮೃತಪಟ್ಟ ಐದು ವರ್ಷ ವಯಸ್ಸಿನ ಬಾಲಕಿಯದ್ದು ಎನ್ನಲಾಗಿದ್ದು, ಮಮ್ಮಿಯನ್ನು ಬಿಗಿಯಾಗಿ ಕಟ್ಟಿರುವ ಬಟ್ಟೆಯ ಮೇಲೆ ಬಾಲಕಿಯ ಮುಖದ ಚಹರೆಯ ಚಿತ್ರವೂ ಇದೆ. ಈ ಮಮ್ಮಿಯನ್ನು ಸುಮಾರು ನೂರು ವರ್ಷಗಳ ಹಿಂದೆ ಸಮಾಧಿಯಿಂದ ಹೊರತೆಗೆದಿದ್ದರೂ ಕವಚವನ್ನು ತೆರೆಯದೇ ನಾರ್ಥ್ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ
ಸಂರಕ್ಷಿಸಿ ಇಡಲಾಗಿದೆ.
ಹೀಗೆ ಈಜಿಪ್ಟ್ ಶೈಲಿಯಲ್ಲಿ ಮಮ್ಮಿ ಮಾಡಲಾಗಿರುವ ಹಾಗೂ ರೋಮನ್ ಶೈಲಿಯಲ್ಲಿ ಸಾವನ್ನು ವಿವರಿಸಿ, ಮೃತರ ಭಾವಚಿತ್ರ ಹೊಂದಿರುವ ಸುಮಾರು ನೂರು ಮಮ್ಮಿಗಳು ಮಾತ್ರ ಲಭ್ಯವಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.