Imran Khan ನಾಮಪತ್ರ ತಿರಸ್ಕರಿಸಿದ ಪಾಕಿಸ್ಥಾನ ಚುನಾವಣೆ ಆಯೋಗ
Team Udayavani, Dec 31, 2023, 12:48 AM IST
ಇಸ್ಲಾಮಾಬಾದ್: ಪಾಕಿಸ್ಥಾನ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ ಸ್ಪರ್ಧಿಸಲು ಮುಂದಾಗಿದ್ದ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಾಮಪತ್ರವನ್ನು ಅಲ್ಲಿನ ಚುನಾವಣೆ ಆಯೋಗ ತಿರಸ್ಕರಿಸಿದೆ. ಪ್ರಸಕ್ತ ಜೈಲಿನಲ್ಲಿರುವ ಪಾಕಿಸ್ಥಾನ ತ್ರಹೀಕ್ ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಪಂಜಾಬ್ ಪ್ರಾಂತ್ಯದ ಲಾಹೋರ್ (ಎನ್‌ಎ122), ಮೈನ್‌ವಾಲಿ (ಎನ್‌ಎ-89) ಸ್ಥಾನಗಳಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆದರೆ ಪಾಕಿಸ್ಥಾನ ಚುನಾವಣೆ ಆಯೋಗ (ಇಸಿಪಿ)ದ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಈಗಾಗಲೇ ತೋಷಖಾನ ಪ್ರಕರಣದಲ್ಲಿ ಖಾನ್ ಶಿಕ್ಷೆಗೊಳಗಾಗಿರುವುದು ಮಾತ್ರವಲ್ಲದೇ, ಅವರನ್ನು ಐದು ವರ್ಷಗಳ ವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ವಿಧಿಸಿರುವುದನ್ನು ಆಯೋಗ ಪುನರುತ್ಛರಿಸಿದೆ ಜತೆಗೆ ಅರ್ಜಿ ಸಲ್ಲಿಸಿರುವ ಕ್ಷೇತ್ರಗಳಿಗೆ ಅವರು ಸೇರಿಲ್ಲದವರಾಗಿರುವ ಕಾರಣ ಅರ್ಜಿ ತಿರಸ್ಕರಿಸಿರುವುದಾಗಿ ಹೇಳಿದೆ. 2024ರ ಫೆಬ್ರವರಿಯಲ್ಲಿ ಪಾಕ್ ಚುನಾವಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.