ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಬಳಿಕ ದೂರವಾದ ಎಲಾನ್ ಮಸ್ಕ್- ಗ್ರಿಮ್ಸ್
Team Udayavani, Mar 14, 2022, 1:21 PM IST
ನ್ಯೂಯಾರ್ಕ್: ಕೆಲ ದಿನಗಳ ಹಿಂದಷ್ಟೇ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದು ಸುದ್ದಿಯಾಗಿದ್ದ ಪ್ರಸಿದ್ದ ಟೆಸ್ಲಾ ಸಂಸ್ಥೆ ಮುಖ್ಯಸ್ಥ ಎಲಾನ್ ಮಸ್ಕ್ ಮತ್ತು ಗೆಳತಿ ಗ್ರಿಮ್ಸ್ ಇದೀಗ ಬ್ರೇಕಪ್ ಮಾಡಿಕೊಂಡಿದ್ದಾರೆ. ಸುಮಾರು ಮೂರು ವರ್ಷಗಳಿಂದ ಡೇಟ್ ಮಾಡುತ್ತಿದ್ದ ಎಲಾನ್ ಮತ್ತು ಗ್ರಿಮ್ಸ್ ಇದೀಗ ದೂರವಾಗಲು ನಿರ್ಧರಿಸಿದ್ದಾರೆ.
ಇವರು ಇತ್ತೀಚೆಗಷ್ಟೇ ಬಾಡಿಗೆ ತಾಯ್ತನದ ಮೂಲಕ ತಮ್ಮ ಎರಡನೇ ಮಗುವನ್ನು ಪಡೆದಿದ್ದರು. ಇದೀಗ ದೂರವಾಗುತ್ತಿರುವ ವಿಚಾರವನ್ನು ಗ್ರಿಮ್ಸ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.
ವ್ಯಾನಿಟಿ ಫೇರ್ ಮ್ಯಾಗಜೀನ್‌ನೊಂದಿಗೆ ಇತ್ತೀಚೆಗೆ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿ, ಅವರು “ಈ ಲೇಖನವನ್ನು ಬರೆದ ನಂತರ ನಾನು ಮತ್ತು ಎಲಾನ್ ಮತ್ತೆ ದೂರವಾಗಿದ್ದೇವೆ” ಎಂದು ಬರೆದಿದ್ದಾರೆ. ಎಲಾನ್ ಮಸ್ಕ್ ತನ್ನ ಅತ್ಯುತ್ತಮ ಸ್ನೇಹಿತನಾಗಿ ಮುಂದುವರಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ:ಪಂಚರಾಜ್ಯ ಸೋಲಿಗೆ ಕೇವಲ ‘ಗಾಂಧಿ ಕುಟುಂಬ’ ಹೊಣೆಯಲ್ಲ…: ಮಲ್ಲಿಕಾರ್ಜುನ ಖರ್ಗೆ
ಎಲಾನ್ ಮಸ್ಕ್ ಮತ್ತು ಗ್ರಿಮ್ಸ್ 2018ರಿಂದ ಡೇಟ್ ಮಾಡುತ್ತಿದ್ದಾರೆ. ಆದರೆ 2021ರ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಬ್ರೇಕ್ ಅಪ್ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಗ್ರಿಮ್ಸ್ ಅವರ ನಿಜವಾದ ಹೆಸರು ಕ್ಲಾರಾ ಎಲಿಸ್ ಬೌಚರ್ ಆಗಿದ್ದು, ಆಕೆ ಕೆನಡಾದ ಸಂಗೀತಗಾರ್ತಿಯಾಗಿದ್ದಾರೆ. ಎಲಾನ್- ಗ್ರಿಮ್ಸ್ ಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿಯಿದ್ದಾರೆ.
Me and E have broken up *again* since the writing of this article haha, but he’s my best friend and the love of my life, and my life and art are forever dedicated to The Mission now, I think Devin wrote that part of the story rly well. Sique – peace out
— ?????? (⌛️,⏳) ᚷᚱᛁᛗᛖᛋ (@Grimezsz) March 10, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.