ಟ್ವಿಟ್ಟರ್‌ಗೆ ಹೊಸ ಸಿಇಒ ನೇಮಿಸಿದ ಎಲಾನ್ ಮಸ್ಕ್
Team Udayavani, May 12, 2023, 11:40 AM IST
ನ್ಯೂಯಾರ್ಕ್: ಟ್ವಿಟ್ಟರ್‌ಗೆ ಹೊಸ ಸಿಇಒ ನೇಮಕ ಮಾಡಿರುವುದಾಗಿ ಎಲಾನ್ ಮಸ್ಕ್ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಮಸ್ಕ್, ಟ್ವಿಟರ್‌ಗೆ ಹೊಸ ಸಿಇಒ ನೇಮಕ ಮಾಡಿದ್ದೇನೆ ಎಂದು ಘೋಷಿಸಲು ನಾನು ಖುಷಿಪಡುತ್ತೇನೆ.
ಆರು ವಾರದೊಳಗೆ ಅವರು ಹುದ್ದೆಯನ್ನು ಅಲಂಕರಿಸಲಿದ್ದಾರೆ. ಈ ಮಾಹಿತಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ವಿಟರ್ ಮುನ್ನಡೆಸಲು ಮಹಿಳೆಯೊಬ್ಬರು ಬರುತ್ತಾರೆ ಎಂದು ತಿಳಿಸಿದ್ದಾರೆ.
Excited to announce that I’ve hired a new CEO for X/Twitter. She will be starting in ~6 weeks!
My role will transition to being exec chair & CTO, overseeing product, software & sysops.
— Elon Musk (@elonmusk) May 11, 2023
ಹೊಸ ಟ್ವಿಟ್ಟರ್ ಸಿಇಒ ಲಿಂಡಾ ಯಾಕರಿನೊ?
ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟರ್‌ನ ಹೊಸ ಸಿಇಒ ಆಗಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಟ್ವಿಟ್ಟರ್‌ಗೆ ಹೊಸ ಸಿಇಒ ಬಂದ ನಂತರ ಮಸ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ (ಚೀಫ್ ಟೆಕ್ನಾಲಜಿ ಆಫೀಸರ್) ಆಗಿ ಮುಂದುವರಿಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.