ಸುಗಂಧ ದ್ರವ್ಯ ಮಾರಾಟಕ್ಕಿಳಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್: 1 ಬಾಟಲಿ ಬೆಲೆ…
Team Udayavani, Oct 12, 2022, 5:30 PM IST
ವಾಷಿಂಗ್ಟನ್: ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಗಳು ಚರ್ಚೆಗಳನ್ನು ಹುಟ್ಟು ಹಾಕುತ್ತವೆ. ಸದ್ಯ ಅವರು ಹಾಕಿರುವ ಟ್ವೀಟ್ ವೊಂದು ವೈರಲ್ ಆಗಿದೆ.
ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಂದಾಗಿರುವ ಎಲಾನ್ ಮಸ್ಕ್ ಈಗ ಸುಗಂಧ ದ್ರವ್ಯ ಮಾರುವ ವ್ಯಕ್ತಿಯಾಗಿದ್ದಾರೆ.! ಅಚ್ಚರಿಯಾದರೂ ಇದು ಸತ್ಯ. ಈ ಬಗ್ಗೆ ಟ್ವಟರ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
“ನನ್ನಂತಹ ಹೆಸರಿನೊಂದಿಗೆ, ಸುಗಂಧ ವ್ಯಾಪಾರಕ್ಕೆ ಬರುವುದು ಅನಿವಾರ್ಯವಾಗಿತ್ತು – ನಾನು ಯಾಕೆ ಇಷ್ಟು ದಿನ ಹೋರಾಡಿದೆ!?” ಎಂದು ಟ್ವೀಟ್ ನಲ್ಲಿ ಎಲಾನ್ ಬರೆದುಕೊಂಡಿದ್ದಾರೆ. ಎಲಾನ್ ತಮ್ಮ ಸುಗಂಧ ದ್ರವ್ಯದ ಉತ್ಪನ್ನಕ್ಕೆ “ಬರ್ನ್ಟ್ ಹೇರ್” ( Burnt Hair) ಎಂದು ಹೆಸರಿಟ್ಟಿದ್ದಾರೆ.
ಎಲಾನ್ ತಮ್ಮ ಟ್ವಟಿರ್ ಬಯೋದಲ್ಲಿ ಸುಗಂಧ ದ್ರವ್ಯ ಮಾರಾಟಗಾರ ಎಂದು ಹಾಕಿಕೊಂಡಿದ್ದಾರೆ. ಇದರೊಂದಿಗೆ ಇದು ಭೂಮಿಯ ಮೇಲಿನ ಅತ್ಯುತ್ತಮ ಸುಗಂಧ ಎಂದು ಮಸ್ಕ್ ಹೇಳಿಕೊಂಡಿದ್ದಾರೆ.
ಪ್ರಾಡಕ್ಟ್ ಬಿಡುಗಡೆಯಾದ ಒಂದು ಗಂಟೆಯೊಳಗೆ 10 ಸಾವಿಕ್ಕೂ ಹೆಚ್ಚಿನ “ಬರ್ನ್ಟ್ ಹೇರ್” ಬಾಟಲಿಗಳು ಮಾರಾಟವಾಗಿದೆ. ಇದನ್ನು ಗಂಡು – ಹೆಣ್ಣು ಎನ್ನದೇ ಎಲ್ಲರೂ ಉಪಯೋಗಿಸಬಹುದು. ಎಲ್ಲರ ಉಪಯೋಗಕ್ಕೆ ಇದು ಬರುತ್ತದೆ ಎಂದು ಮಸ್ಕ್ ತಿಳಿಸಿದ್ದಾರೆ.
ವರದಿಯ ಪ್ರಕಾರ ಒಂದು ಬಾಟಲ್ ಫರ್ಮ್ಯೂಗೆ $100 (8,400 ರೂ.) ಬೆಲೆಯಿದೆ. ಕ್ರಿಪ್ಟೋ ಕೆರೆನ್ಸಿ ಮೂಲಕವೂ ಬರ್ನ್ಟ್ ಹೇರ್ ನ್ನು ಖರೀದಿಸಬಹುದು ಎಂದು ಎಲಾನ್ ಮಾಸ್ಕ್ ಹೇಳಿದ್ದಾರೆ.
ಈ ಬಗ್ಗೆ ನೆಟ್ಟಿಗರು ಎಲಾನ್ ಮಸ್ಕ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಇದರೊಂದು ಅತ್ಯಂತ ಕೆಟ್ಟ ಹೆಸರೆಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
The finest fragrance on Earth!https://t.co/ohjWxNX5ZC pic.twitter.com/0J1lmREOBS
— Elon Musk (@elonmusk) October 11, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.