ಟ್ವಿಟರ್ ಅಕ್ಷರ ಮಿತಿ ರದ್ದು: ಉದ್ಯಮಿ ಎಲಾನ್ ಮಸ್ಕ್ ಘೋಷಣೆ
ಅಮೆರಿಕದಲ್ಲಿ ಎಚ್.1 ಬಿ ವೀಸಾದಾರರಿಗೆ ಸಂಕಷ್ಟ
Team Udayavani, Nov 7, 2022, 7:35 AM IST
ವಾಷಿಂಗ್ಟನ್: ಟ್ವಿಟರ್ ಸುಧಾರಣೆಗೆ ಕಂಪನಿ ಮಾಲೀಕ ಎಲಾನ್ ಮಸ್ಕ್ ಮುಂದಾಗಿದ್ದಾರೆ. ಪ್ರಸ್ತುತ ಟ್ವಿಟರ್‌ನ ಒಂದು ಪೋಸ್ಟ್‌ಗೆ ಗರಿಷ್ಠ 280 ಕ್ಯಾರೆಕ್ಟರ್ ಗಳ ಮಿತಿ ಇದೆ. ಉದ್ದದ ಟೆಕ್ಸ್ಟ್ ಗಳನ್ನು ಬರೆಯಲು ಸಹಾಯವಾಗುವ ನಿಟ್ಟಿನಲ್ಲಿ ಈ ಮಿತಿಯನ್ನು ಹೆಚ್ಚಿಸಲು ಎಲಾನ್ ಮಸ್ಕ್ ಕ್ರಮ ಕೈಗೊಂಡಿದ್ದಾರೆ.
ಇನ್ನೊಂದೆಡೆ, ನೋಟ್ ಪ್ಯಾಡ್ ಸ್ಕ್ರೀನ್‌ಶಾಟ್‌ಗಳ ಅಸಂಬದ್ಧತೆಯನ್ನು ಕೊನೆಗೊಳಿಸಲಾಗುವುದು ಎಂದು ಟ್ವೀಟ್ ಮೂಲಕ ಮಸ್ಕ್ ತಿಳಿಸಿದ್ದಾರೆ.
ಎಚ್-1ಬಿ ವೀಸಾದಾರರಿಗೆ ಸಂಕಷ್ಟ:
ಟ್ವಿಟರ್ ಕಂಪನಿ ತನ್ನ ಶೇ.50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಿಂದ ಅಮೆರಿಕದಲ್ಲಿ ಎಚ್-1ಬಿ ವೀಸಾ ಹೊಂದಿರುವ ಟ್ವಿಟರ್‌ನ ವಜಾಗೊಂಡ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಅಮೆರಿಕದ ಕಾನೂನಿನ ಪ್ರಕಾರ, ಅವರಿಗೆ 60 ದಿನಗಳ ಗಡುವು ಇದೆ. ಇಷ್ಟರಲ್ಲಿ ಅವರು ಹೊಸ ಉದ್ಯೋಗ ಪಡೆಯಬೇಕಾಗುತ್ತದೆ. ತಪ್ಪಿದ್ದಲ್ಲಿ ಅವರ ಎಚ್-1ಬಿ ವೀಸಾ ರದ್ದಾಗಲಿದೆ.
ನಿಯಮ ಪಾಲನೆ ಅಗತ್ಯ:
ಟ್ವಿಟರ್ ಖಾತೆಗಳಿಗೆ ಬ್ಲೂಟಿಕ್ ಹೊಂದುವುದಕ್ಕೆ ಮೊದಲು ನಿಮ್ಮ ಖಾತೆ ದೃಢಪಡಿಸಲು ಪಾಸ್‌ಪೋರ್ಟ್, ಆಧಾರ್ ಸೇರಿದಂತೆ ಯಾವುದಾದರೂ ಒಂದು ಪೋಟೋ ಇರುವ ಗುರುತಿನ ಚೀಟಿ ಸಲ್ಲಿಸಬೇಕಾಗುತ್ತದೆ. ಆಗ ನೀವು ಸ್ಪ್ಯಾಮ್ ಅಥವಾ ಸ್ಕ್ಯಾಮ್‌ನಲ್ಲಿ ಒಳಗೊಂಡಿಲ್ಲ ಎಂಬುದನ್ನು ಪರಿಶೀಲಿಸಲಾಗುತ್ತದೆ. ಜತೆಗೆ ಆ ಖಾತೆ ನಿಮ್ಮದೇ ಎಂಬುದನ್ನು ದೃಢಪಡಿಸಬೇಕುತ್ತದೆ.
ಮಾಸಾಂತ್ಯಕ್ಕೆ ಭಾರತದಲ್ಲಿ ಸೌಲಭ್ಯ?
ದೃಢಪಡಿಸಿದ ಖಾತೆಗಳಿಗೆ ಬ್ಲೂಟಿಕ್ ಹೊಂದುವ ಸೌಲಭ್ಯ ಭಾರತದಲ್ಲಿ ನವೆಂಬರ್ ಅಂತ್ಯದಿಂದ ದೊರೆಯಲಿದೆ ಎಂದು ಮಸ್ಕ್ ಖಚಿತಪಡಿಸಿದ್ದಾರೆ. ಭಾರತದಲ್ಲಿ ಈ ಸೌಲಭ್ಯಕ್ಕೆ ತಿಂಗಳಿಗೆ 200 ರೂ. ಪಾವತಿಸಬೇಕಾಗಬಹುದು. ಜತೆಗೆ ವಾರ್ಷಿಕ ಶುಲ್ಕದ ಆಯ್ಕೆ ಕೂಡ ಇರಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.