ಫೂಟ್‌ಬ್ರಿಡ್ಜ್ ಉದ್ಘಾಟನೆ: ರಿಬ್ಬನ್ ಕತ್ತರಿಸುವ ವೇಳೆ ಕುಸಿದ ಸೇತುವೆ; ವಿಡಿಯೋ ವೈರಲ್…
ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ನಿಂತಿದ್ದರಿಂದ ಈ ಅವಘಡ ಸಂಭವಿಸಿದೆ
Team Udayavani, Sep 7, 2022, 6:12 PM IST
ಕಾಂಗೋ: ಕಾಲ್ಸೇತುವೆ ಅಧಿಕೃತ ಉದ್ಘಾಟನೆಯಲ್ಲಿ ಅಧಿಕಾರಿಗಳು ರಿಬ್ಬನ್ ಕತ್ತರಿಸುವ ವೇಳೆ ಸೇತುವೆ ಕುಸಿದು ಬಿದ್ದ ಘಟನೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ನಡೆದಿದ್ದು, ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪಾದಚಾರಿ ಸೇತುವೆ ನಿರ್ಮಾಣದ ಗುಣಮಟ್ಟವನ್ನು ಮತ್ತಷ್ಟು ಪ್ರಶ್ನಿಸುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ!: ಕಾಂಗ್ರೆಸ್
ಹಳೆಯ ತಾತ್ಕಾಲಿಕ ಸೇತುವೆ ಪದೇ ಪದೇ ಹಾನಿಗೊಳಗಾಗುತ್ತಿತ್ತು. ಮಳೆಗಾಲದ ಅವಧಿಯಲ್ಲಿ ಸ್ಥಳೀಯರಿಗೆ ನದಿ ದಾಟಲು ಸಹಾಯ ಮಾಡಲು ಈ ಕಾಲುಸೇತುವೆಯನ್ನು ನಿರ್ಮಿಸಲಾಗಿದ್ದು, ಸೇತುವೆಯ ಉದ್ಘಾಟನೆಗಾಗಿ ಅಧಿಕಾರಿಗಳು ನಿಂತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ.
Funniest video you will see in the internet today where a Bridge collapses while being commissioned in DRC Congo?
Welcome to Africa pic.twitter.com/PTVoh01LXg— Omwamba ?? (@omwambaKE) September 6, 2022
ಉದ್ಘಾಟನೆ ವೇಳೆ ಕಿರಿದಾದ ಸೇತುವೆ ಮೇಲೆ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ನಿಂತಿದ್ದರಿಂದ ಈ ಅವಘಡ ಸಂಭವಿಸಿದೆ. ಸಮಾರಂಭ ವೀಕ್ಷಿಸಲು ಸೇತುವೆಯ ಕೆಳಗೆ ಹಲವಾರು ಜನರು ಜಮಾಯಿಸಿದ್ದರು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.