ಬ್ರಿಟನ್ ಅರಮನೆಗೂ ಕಾಡಿದ ಕೊರೊನಾ ಕಾಟ : ರಾಜ, ರಾಣಿ ಶೀಘ್ರ ಸ್ಥಳಾಂತರ!
Team Udayavani, Mar 15, 2020, 9:51 PM IST
ಲಂಡನ್: ವಿಶ್ವದ ಬಹುತೇಕ ರಾಷ್ಟ್ರಗಳನ್ನು ಬಿಟ್ಟೂ ಬಿಡದೇ ಕಾಡುತ್ತಿರುವ ಕೋವಿಡ್ 19 ಹೆಸರಿನ ಕೊರೊನಾ ವೈರಸ್ ಜನಸಾಮಾನ್ಯರನ್ನು ಮಾತ್ರವಲ್ಲದೇ ರಾಜಕಾರಣಿಗಳನ್ನು, ಸಿನೇಮಾ ನಟರನ್ನು, ಕ್ರೀಡಾ ತಾರೆಯರನ್ನು ಹೀಗೆ ಎಲ್ಲಾ ವರ್ಗದ ಜನರನ್ನೂ ಕಾಡುತ್ತಿದೆ.
ಇದೀಗ ಬಂದಿರುವ ಹೊಸ ಸುದ್ದಿಯ ಪ್ರಕಾರ ಈ ಮಾರಕ ವೈರಸ್ ಕಾಟ ವಿಶ್ವದ ಹಳೆಯ ರಾಜಮನೆತನಗಳಲ್ಲಿ ಒಂದಾಗಿರುವ ಬ್ರಿಟಿಷ್ ಅರಸೊತ್ತಿಗೆಯನ್ನೂ ಕಾಡಲಾರಂಭಿಸಿದೆ. ಇಂಗ್ಲಂಡ್ ನಲ್ಲಿ ಈಗಾಗಲೇ 21 ಜನರನ್ನು ಈ ವೈರಸ್ ಬಲಿಪಡೆದುಕೊಂಡಿದೆ.
ಹೀಗಾಗಿ 70 ವರ್ಷ ಪ್ರಾಯ ದಾಟಿದ ವ್ಯಕ್ತಿಗಳನ್ನು ಪ್ರತ್ಯೇಕವಾಗಿರಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ. ಹೀಗಾಗಿ, ಇಂಗ್ಲಂಡ್ ರಾಣಿ 93 ವರ್ಷದ ಎಲಿಝಬೆತ್ ಹಾಗೂ 98 ವರ್ಷ ಪ್ರಾಯದ ಪ್ರಿನ್ಸ್ ವಿಲಿಯಮ್ಸ್ ಅವರನ್ನು ನೋರ್ಫಕ್ ನಲ್ಲಿರುವ ರಾಜಮನೆತನಕ್ಕೆ ಸೇರಿದ ಐಶಾರಾಮಿ ಸ್ಯಾಂಡ್ರಿಂಗಮ್ ಎಸ್ಟೇಟ್ ಸದ್ಯದಲ್ಲೇ ಸ್ಥಳಾಂತರಿಸುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.