![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Apr 3, 2019, 6:30 AM IST
ವಾಷಿಂಗ್ಟನ್: ಭಾರತವು ಇತ್ತೀಚೆಗೆ ನಡೆಸಿದ ಉಪಗ್ರಹ ನಿಗ್ರಹ ಕ್ಷಿಪಣಿ (ಎಸ್ಯಾಟ್) ಪರೀಕ್ಷೆಯಿಂದಾಗಿ ಬಾಹ್ಯಾಕಾಶದಲ್ಲಿ ಸುಮಾರು 400ರಷ್ಟು ತ್ಯಾಜ್ಯಗಳು ಸೃಷ್ಟಿಯಾಗಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಹಾಗೂ ಅದರಲ್ಲಿರುವ ಗಗನಯಾತ್ರಿಗಳಿಗೂ ಅಪಾಯ ತಂದೊಡ್ಡಿದೆ ಎಂದು ನಾಸಾ ಮಂಗಳವಾರ ಹೇಳಿದೆ. ನಾಸಾ ಹೇಳಿಕೆಗೆ ಭಾರತೀಯ ಬಾಹ್ಯಾಕಾಶ ಹಾಗೂ ಕ್ಷಿಪಣಿ ತಜ್ಞರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮಾತನಾಡಿದ ನಾಸಾ ಮುಖ್ಯಸ್ಥ ಜಿಮ್ ಬ್ರೈಡೆನ್‌ಸ್ಟೈನ್, “ನಾವು ಈವರೆಗೆ ಸುಮಾರು 60 ಬಾಹ್ಯಾಕಾಶ ತ್ಯಾಜ್ಯವನ್ನು ಟ್ರ್ಯಾಕ್ ಮಾಡಿದ್ದೇವೆ. ಆ ಪೈಕಿ 24 ತ್ಯಾಜ್ಯಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮೇಲ್ಭಾಗದತ್ತ ತೆರಳುತ್ತಿವೆ. ಒಟ್ಟಾರೆ ಭಾರತದ ಎಸ್ಯಾಟ್ ಪರೀಕ್ಷೆಯಿಂದ 400ರಷ್ಟು ತ್ಯಾಜ್ಯಗಳು ಸೃಷ್ಟಿಯಾಗಿದ್ದು, ಅವುಗಳಲ್ಲಿ ಕೆಲವು ಅಲ್ಪಗಾತ್ರದ್ದಾದ್ದರಿಂದ ಎಲ್ಲವನ್ನೂ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. 10 ಸೆಂಟಿ ಮೀಟರ್ ಮತ್ತು ಅದಕ್ಕಿಂತ ದೊಡ್ಡ ತ್ಯಾಜ್ಯಗಳನ್ನಷ್ಟೇ ನಾವು ಗಮನಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಆರ್‌ಡಿಒ ಮುಖ್ಯಸ್ಥ ವಿ.ಕೆ.ಸಾರಸ್ವತ್, “ಲಕ್ಷಾಂತರ ತ್ಯಾಜ್ಯಗಳು ಈಗಾಗಲೇ ಬಾಹ್ಯಾಕಾಶದಲ್ಲಿ ಚಲಿಸುತ್ತಿವೆ. ಅದರಿಂದ ಐಎಸ್‌ಎಸ್‌ಗೆ ಯಾವುದೇ ತೊಂದರೆ ಆಗುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಇನ್ನು ಡಿಆರ್‌ಡಿಒ ಮಾಜಿ ವಿಜ್ಞಾನಿ ರವಿ ಗುಪ್ತಾ ಮಾತನಾಡಿ, ನಾಸಾ ಮುಖ್ಯಸ್ಥರ ಇಂಥ ಹೇಳಿಕೆ ತಾರತಮ್ಯ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದು. ಭಾರತವು 300 ಕಿ.ಮೀ. ಎತ್ತರದಲ್ಲಿ ಈ ಪರೀಕ್ಷೆ ನಡೆಸಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವು ಇನ್ನೂ ಎಷ್ಟೋ ಎತ್ತರದಲ್ಲಿದೆ. ತ್ಯಾಜ್ಯಗಳು ಮೇಲಕ್ಕೆ ಹೋಗುವುದೇ ಕಡಿಮೆ. ಒಂದು ವೇಳೆ ಹೋದರೂ, ಶಕ್ತಿ ಕಳೆದುಕೊಂಡು ಕೆಳಕ್ಕೆ ಬೀಳಲಿವೆ ಎಂದಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.