ಲೈವ್ ಕಾರ್ಯಕ್ರಮ: ಟಿವಿ ನಿರೂಪಕನ ಮೇಲೆ ಕಳಚಿ ಬಿದ್ದ ಸ್ಟುಡಿಯೋ ಸೆಟ್; ವಿಡಿಯೋ ವೈರಲ್
Team Udayavani, Mar 12, 2021, 2:15 PM IST
ಕೊಲಂಬಿಯಾ: ಇಲ್ಲಿನ ESPN ಚಾನೆಲ್ ನಲ್ಲಿ ಲೈವ್ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಟಿವಿ ನಿರೂಪಕನ ಮೇಲೆ ಸ್ಟುಡಿಯೋದ ಒಂದು ಭಾಗ ಕಳಚಿ ಬಿದ್ದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಮಿಲಯನ್ ಗಿಂತಲೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ESPN ಚಾನೆಲ್ ನಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದಂತೆ ಲೈವ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಮಯದಲ್ಲಿ, ಕ್ರೀಡಾ ವಿಶ್ಲೇಷಣೆಯನ್ನು ಮಾಡುತ್ತಿದ್ದ ನಿರೂಪಕನ ಮೇಲೆ ಇದ್ದಕ್ಕಿದ್ದಂತೆ ಸ್ಟುಡಿಯೋದ ಭಾಗವೊಂದು ಕಳಚಿ ಬಿದ್ದಿದೆ. ಪರಿಣಾಮ ಕ್ರೀಡಾ ವಿಶ್ಲೇಷಕನ ಮುಖದ ಹತ್ತಿರದಲ್ಲಿಯೇ ಇದ್ದ ಬೆಂಚ್ ಒಂದಕ್ಕೆ ತಾಗಿದೆ, ಅದೃಷ್ಟವಶಾತ್ ಆತ ಭಾರಿ ಪ್ರಮಾಣದ ಅನಾಹುತದಿಂದ ತಪ್ಪಿಸಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಬೆಳ್ತಂಗಡಿ: ಶಿವರಾತ್ರಿಯಂದೇ ರಸ್ತೆ ಬದಿ ಸಾಲು ಸಾಲು ಮರ ಕಡಿದು ವಿಕೃತಿ !
ಘಟನೆ ನಡೆದ ಸಮಯದಲ್ಲಿ ಲೈವ್ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಆ ಕ್ಷಣದಲ್ಲಿಯೇ ನೆರವಿಗೆ ವಿಶ್ಲೇಷಕನ ಬಳಿ ಹೋಗಲು ಸಾಧ್ಯವಾಗಿಲ್ಲ. ಆದರೆ ತಕ್ಷಣವೇ ಕಾರ್ಯಕ್ರಮ ನಿರೂಪಕರು ಬ್ರೇಕ್ ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ. ನಂತರ ಆ ಕೂಡಲೇ ಕ್ರೀಡಾ ವಿಶ್ಲೇಷಕರಿಗೆ ಚಿಕಿತ್ಸೆಯನ್ನು ನೀಡಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
Shocking video. ESPN anchor crushed live on the air by falling set piece. Thankfully he was uninjured. pic.twitter.com/CeFxy8AksY
— Mike Sington (@MikeSington)
ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ಕ್ರೀಡಾ ವಿಶ್ಲೇಷಕ ನನ್ನ ಮೂಗಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದನ್ನು ಹೊರತುಪಡಿಸಿದರೆ ನಾನು ಸುರಕ್ಷಿತವಾಗಿದ್ದೇನೆ. ನನಗೆ ಈ ರೀತಿ ಅಪಘಾತ ಸಂಭವಿಸಿದೆ ಎಂದು ತಿಳಿದ ತಕ್ಷಣ ನನ್ನ ಕುರಿತಾಗಿ ಕಾಳಜಿ ವಹಿಸಿ, ಸಂದೇಶಗಳನ್ನು ಕಳುಹಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.