ಪಿಜ್ಜಾ ಡೆಲಿವರಿ ಮಹಿಳೆಗೆ ದುಡ್ಡು ಪಾವತಿಸಿ ಪಿಜ್ಜಾ ತೆಗೆದುಕೊಂಡ ಚಿಂಪಾಂಜಿ: ವಿಡಿಯೋ ವೈರಲ್
Team Udayavani, Oct 8, 2022, 3:01 PM IST
ರಷ್ಯಾ : ಚಿಂಪಾಂಜಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದನ್ನು ನೋಡಿ ಇಂಟರ್ನೆಟ್ ಮಂದಿ ಬೆಚ್ಚಿಬಿದ್ದಿದ್ದಾರೆ!
ವಿಸ್ಮಯಕಾರಿ ವಿಷಯವೆಂದರೆ ಈ ವಿಡಿಯೋ ಇದುವರೆಗೆ 17 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಮತ್ತು 2 ಲಕ್ಷ 50 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಒಟ್ಟಿನಲ್ಲಿ ಈ ವೀಡಿಯೋ ಇಂಟರ್‌ನೆಟ್ ನಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದಿದೆ.
ವಾಸ್ತವವಾಗಿ, ಈ ವಿಡಿಯೋದಲ್ಲಿ ಚಿಂಪಾಂಜಿಯು ಪಿಜ್ಜಾ ಡೆಲಿವರಿ ಮಹಿಳೆಯಿಂದ ಪಿಜ್ಜಾ ತೆಗೆದುಕೊಳ್ಳುವುದು ಪ್ರತಿಯಾಗಿ ಮಹಿಳೆಗೆ ಹಣ ಪಾವತಿಸುವುದನ್ನು ಕಾಣಬಹುದು. ಬಹುಶಃ ಈ ಅಪರೂಪದ ದೃಶ್ಯವನ್ನು ನೋಡಿದ ಜನರು ಆಶ್ಚರ್ಯ ಪಡಲು ಇದೇ ಕಾರಣವಾಗಿರಬಹುದು.
ವೀಡಿಯೊದಲ್ಲಿ, ಪಿಜ್ಜಾ ಡೆಲಿವರಿಗೆ ಬಂದ ಮಹಿಳೆ ಮನೆಯ ಬಾಗಿಲು ಬಡಿಯುತ್ತಿದ್ದಂತೆ ಟಿ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿರುವ ಚಿಂಪಾಂಜಿ ಬಾಗಿಲು ತೆರೆದು ಹೊರ ಬಂದಿದೆ, ಈ ವೇಳೆ ಮಹಿಳೆ ಗಾಬರಿಗೊಂಡಿದ್ದಾರೆ ಆದರೆ ಚಿಂಪಾಂಜಿ ಮಾತ್ರ ಮನುಷ್ಯರಂತೆ ಮಹಿಳೆಗೆ ದುಡ್ಡು ನೀಡಿ ಪಿಜ್ಜಾ ಬಾಕ್ಸ್ ಮಹಿಳೆಯ ಕೈಯಿಂದ ಪಡೆದು ಮನೆಯೊಳಗೆ ಹೋಗುವ ದೃಶ್ಯ ಕಂಡುಬಂದಿದೆ.
ಇದು ನಿಜಕ್ಕೂ ಆಶ್ಚರ್ಯವಾದರೂ ವಿಡಿಯೋದಲ್ಲಿ ಕಂಡಿರುವುದು ಮಾತ್ರ ಸತ್ಯ, ಟ್ವಿಟರ್ ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು. ರಷ್ಯಾದಲ್ಲಿ ಪಿಜ್ಜಾಕ್ಕೆ ಹಣ ಪಾವತಿಸಿದ ಚಿಂಪಾಂಜಿ… ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅನೇಕ ಮಂದಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಕೆಲವರು ವಾಸ್ತವವಾಗಿ ಇವರು ನಮ್ಮ ಪೂರ್ವಜರು ಎಂದು ಕೆಲವರು ಬರೆದಿದ್ದಾರೆ. ಅಲ್ಲದೆ ಕೆಲವರು ಚಿಂಪಾಂಜಿಗಳಿಗೆ ಇಷ್ಟೊಂದು ಬುದ್ಧಿ ಇರುವುದಿಲ್ಲ ಇದು ಸುಳ್ಳು ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ : ಹೊಸಪೇಟೆ: ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ ಘೋಷಣೆ: ಸಂಭ್ರಾಮಚಾರಣೆ
Chimpanzee paying for a pizza delivery in Russia ? pic.twitter.com/YCvlUUvwZt
— OddIy Terrifying (@closecalls7) October 3, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.