ಜೀವ ಜನ್ಮ ರಹಸ್ಯಕ್ಕೆ ಕುರುಹು?
Team Udayavani, Oct 8, 2017, 7:00 AM IST
ವಾಷಿಂಗ್ಟನ್: ಮಂಗಳ ಗ್ರಹದ ಪುರಾತನ ಸಮುದ್ರ ತಳದಲ್ಲಿ ಹೈಡ್ರೋಥರ್ಮಲ್ ಶೇಖರಣೆ ಪತ್ತೆಯಾಗಿದ್ದು, ಇದರಿಂದ ಭೂಮಿಯಲ್ಲಿ ಜೀವಿಗಳ ವಿಕಾಸದ ಮೂಲದ ಬಗ್ಗೆ ಸುಳಿವು ಸಿಗಬಹುದು ಎನ್ನಲಾಗಿದೆ. ನಾಸಾದ ಮಾರ್ಸ್ ರಿಕೊನಯಸನ್ಸ್ ಆರ್ಬಿಟರ್ (ಎಂಆರ್‌ಒ) ಮಂಗಳನ ದಕ್ಷಿಣ ಭಾಗದಲ್ಲಿ ಭಾರಿ ಪ್ರಮಾಣದ ಶೇಖರಣೆ ಇರುವುದನ್ನು ಗುರುತಿಸಿದೆ. ಜ್ವಾಲಾಮುಖೀಯಿಂದಾಗಿ ಅತಿಯಾದ ಉಷ್ಣ ಜಲ, ಬೃಹತ್ ಸಮುದ್ರದ ಅಡಿಭಾಗವನ್ನು ತಲುಪಿತ್ತು. ಹೀಗಾಗಿ ಈ ಶೇಖರಣೆ ಉಂಟಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ಒಂದು ವೇಳೆ ಮಂಗಳನಲ್ಲಿ ಜೀವಿ ವಿಕಾಸದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆಹಾ ಕಲು ಇದರಿಂದ ಸಾಧ್ಯವಾಗಿಲ್ಲದಿದ್ದರೂ, ಯಾವ ರೀತಿಯ ಜೀವಿಗಳು ಇದ್ದವು ಎಂಬುದನ್ನು ಕಂಡುಕೊಳ್ಳಬಹುದು ಎಂದು ನಾಸಾ ಸಂಶೋಧನಾ ಕೇಂದ್ರದ ಪಾಲ್ ನೈಲ್ಸ್ ಹೇಳಿದ್ದಾರೆ.
ಭೂಮಿಯ ಮೇಲೆ ನೀರು ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಅದೇ ರೀತಿಯ ನೀರು ಮಂಗಳನಲ್ಲೂ ಇತ್ತು. ಈ ಸಂದರ್ಭದಲ್ಲಿ ಜೀವ ವಿಕಾಸ ಭೂಮಿಯ ಮೇಲೆ ಆಗುತ್ತಿತ್ತು. ಸುಮಾರು 370 ಕೋಟಿ ವರ್ಷಗಳ ಹಿಂದೆ ಮಂಗಳನಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ಅವರು ಹೇಳಿದ್ದಾರೆ. ನಾಸಾದ ಎಂಆರ್‌ಒ, ಮಂಗಳನ ಪದರಗಳಲ್ಲಿ ಸಂಗ್ರಹವಾಗಿರುವ ಖನಿಜಗಳ ವಿವರಗಳನ್ನು ಒದಗಿಸಿದ್ದು, ಇದು ವಿಜ್ಞಾನಿಗಳ ಸಂಶೋಧ ನೆಗೆ ಪೂರಕವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.