Taliban’s New Rule: ಮಹಿಳೆ ಜೋರಾಗಿ ಕುರಾನ್ ಪಠಿಸುವಂತಿಲ್ಲ: ತಾಲಿಬಾನ್
Team Udayavani, Oct 31, 2024, 7:45 AM IST
ಕಾಬೂಲ್: ಶಿಕ್ಷಣ, ಉದ್ಯೋಗ, ಉಡುಗೆ-ತೊಡುಗೆಯೂ ಸೇರಿ ಈಗಾಗಲೇ ಸ್ತ್ರೀಯರ ಬಹುತೇಕ ಸ್ವಾತಂತ್ರ್ಯ ಕಸಿದಿರುವ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಇದೀಗ, ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆಯ ಎದುರು ಜೋರಾಗಿ ಕುರಾನ್ ಪಠಿಸಬಾರದು. ಸುಶ್ರಾವ್ಯವಾಗಿ ಅಜಾನ್ ಹೇಳಬಾರದು ಎಂದು ನಿಷೇಧ ಹೇರಿದೆ. ಈ ಮೂಲಕ ಮಹಿಳೆಯರು ಸಂಗೀತವನ್ನು ಆಸ್ವಾದಿಸ ದಂತೆ ಖಾತರಿ ಪಡಿಸಿಕೊಳ್ಳಲಾಗುವುದು ಎಂದು ಹೇಳಿಕೊಂಡಿದೆ.
ಹೊಸ ತಾಕೀತಿನ ಬಗ್ಗೆ ಮಾತನಾಡಿದ ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಮಾತನಾಡಿದ್ದು, “ಇಸ್ಲಾಂನಲ್ಲಿ ಮಹಿಳೆಯರ ಧ್ವನಿಯನ್ನು “ಅವ್ರಾ’ (ಗೌಪ್ಯ) ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಧ್ವನಿ ಎತ್ತರಿಸುವಂತಿಲ್ಲ. ಜತೆಗೆ ತಕಿºàರ್ (ಅಲ್ಲಾ ಹು ಅಕ್ಬರ್) ಅಥವಾ ಅಜಾನ್ ಅನ್ನು ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆ ಮುಂದೆ ಜೋರಾಗಿ ಪಠಿಸಿದರೆ ಸುಶ್ರಾವ್ಯವಾಗಿ ಹಾಡುವುದು ಅಭ್ಯಾಸವಾಗಿಬಿಡುತ್ತದೆ. ಮಹಿಳೆಯರ ಧ್ವನಿಯು ಅವ್ರಾ ಆದ ಕಾರಣ ಇದು ನಿಷಿದ್ಧ. ಹಾಗಾಗಿ ಒಬ್ಬ ಮಹಿಳೆ ಮತ್ತೂಬ್ಬ ಮಹಿಳೆಯ ಮುಂದೆ ಜೋರಾಗಿ ಕುರಾನ್ ಪಠಿಸುವುದು, ಪ್ರಾರ್ಥಿಸುವು ದನ್ನು ನಿಷೇಧಿಸಲಾಗಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.