ನ್ಯೂಯಾರ್ಕ್ ಪೋರ್ಟ್ ಅಥಾರಿಟಿ ಬಸ್ ಟರ್ಮಿನಲ್ ಬಳಿ ಸ್ಫೋಟ
Team Udayavani, Dec 11, 2017, 7:06 PM IST
ನ್ಯೂಯಾರ್ಕ್ : ಅತ್ಯಂತ ಬಿರುಸಿನ ಚಟುವಟಿಕೆಯ ತಾಣವಾಗಿರುವ ನ್ಯೂಯಾರ್ಕ್ ನಗರದ ಪೋರ್ಟ್ ಅಥಾರಿಟಿ ಬಸ್ ಟರ್ಮಿನಲ್‌ನಲ್ಲಿ ಸ್ಫೋಟ ಸಂಭವಿಸಿರುವುದಾಗಿ ಮಾಧ್ಯಮಗಳ ವರದಿ ಮಾಡುತ್ತಿವೆ.
ಸ್ಫೋಟ ಸಂಭವಿಸಿರುವ ಈ ತಾಣವು ನ್ಯೂಯಾರ್ಕ್‌ನ ಪ್ರಸಿದ್ಧ ಪ್ರಾತಿನಿಧಿಕ ತಾಣವಾಗಿರುವ ಟೈಮ್ಸ್ ಸ್ಕ್ವಾರ್‌ಗೆ ಸಮೀಪವೇ ಇದೆ.
ಈ ಸ್ಫೋಟವು ಭಯೋತ್ಪಾದಕರ ಕೃತ್ಯವೇ ? ಅಥವಾ ಬೇರೆ ಯಾವುದೇ ಕಾರಣದಿಂದ ಸಂಭವಿಸಿರಬಹುದಾದ ಸ್ಫೋಟವೇ ಎಂಬುದು ಈಗಿನ್ನೂ ಖಚಿತಪಟ್ಟಿಲ್ಲ. ಹಾಗೆಯೇ ಸ್ಫೋಟದಲ್ಲಿ ಮಡಿದವರ ಅಥವಾ ಗಾಯಗೊಂಡವರ ಸಂಖ್ಯೆ, ವಿವರಗಳು ಕೂಡ ಈ ತನಕ ಗೊತ್ತಾಗಿಲ್ಲ.
ನ್ಯೂಯಾರ್ಕ್ ಪೊಲೀಸ್ ಇಲಾಖೆಯು ಈ ಸ್ಫೋಟ ಕುರಿತಾಗಿ ಒಂದೇ ಸಾಲಿನ ಪ್ರಕಟನೆಯನ್ನು ಹೊರಡಿಸಿದೆ. “42ನೇ ರಸ್ತೆ ಮತ್ತು 8ನೇ ಅವೆನ್ಯೂ – ಮ್ಯಾನ್‌ಹಟನ್‌ನಲ್ಲಿ ಅಜ್ಞಾತ ಮೂಲದಿಂದ ಸಂಭವಿಸಿರುವ ಸ್ಫೋಟದ ವರದಿಗಳಿಗೆ ಎನ್‌ವೈಪಿಡಿ ಸ್ಪಂದಿಸುತ್ತಿದೆ. ಎ, ಸಿ ಮತ್ತು ಇ ಲೈನಿನಲ್ಲಿರುವವರನ್ನು ಸ್ಥಳಾಂತರಿಸಲಾಗುತ್ತಿದೆ. ಸ್ಫೋಟ ಕುರಿತಾಗಿ ಈಗ ದೊರಕಿರುವ ಮಾಹಿತಿ ಪ್ರಾಥಮಿಕ ಸ್ವರೂಪದ್ದಾಗಿದೆ. ಹೆಚ್ಚಿನ ಮಾಹಿತಿಗಳನ್ನು ಸಿಕ್ಕಿದಾಗ ಅವುಗಳನ್ನು ಪ್ರಕಟಿಸಲಾಗುವದು’.
ಈ ನಡುವೆ ಎನ್‌ವೈಪಿಡಿ ಟ್ರಾನ್ಸಿಟ್ ವಿಭಾಗದ ಮುಖ್ಯಸ್ಥರು ಟ್ವೀಟ್ ಮಾಡಿ, “ಟೈಮ್ಸ್ ಸ್ಕ್ವಾರ್ ಮೂಲಕ ಸಾಗುವ ಎಲ್ಲ subway ಸೇವೆಗಳನ್ನು ನಿರ್ಬಂಧಿಸಲಾಗಿದೆ. ಈ ತಾಣಕ್ಕೆ ಹೋಗದಿರುವಂತೆ ಎಲ್ಲರಿಗೂ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.