ಸೌರವ್ಯೂಹಕ್ಕೊಬ್ಬ ಬಾಹ್ಯ ಅತಿಥಿ
Team Udayavani, Oct 29, 2017, 7:55 AM IST
ವಾಷಿಂಗ್ಟನ್: ನಮ್ಮ ಸೌರವ್ಯೂಹದಾಚೆಗೂ ಗ್ರಹಗಳು, ಉಪಗ್ರಹಗಳು ಹಾಗೂ ನಕ್ಷತ್ರಗಳಿವೆ. ಅನ್ಯಗ್ರಹ ಜೀವಿಗಳಿವೆ ಎಂಬ ಊಹೆ ಹಾಗೂ ತರ್ಕಕ್ಕೆ ಈ ವರೆಗೂ ಯಾವುದೇ ಪೂರಕ ಸಾಕ್ಷ್ಯ ಸಿಕ್ಕಿರಲಿಲ್ಲ. ಆದರೆ ಇದೀಗ ಅಂಥ ಸಾಕ್ಷ್ಯವೊಂದು ಸಿಕ್ಕಿದೆ. ಸೌರವ್ಯೂಹದಾಚೆಗಿನದ್ದು ಎಂದು ಹೇಳಲಾದ ಒಂದು ವಿಶಿಷ್ಟ ಕಲ್ಲಿನಂತಹ ವಸ್ತು ಖಗೋಳವಿಜ್ಞಾನಿಗಳಿಗೆ ಕಂಡು ಬಂದಿದೆ. ಈ ವಸ್ತು ಸುಮಾರು 400 ಮೀ. ವ್ಯಾಸ ಹೊಂದಿದೆ. ಈ ಹಿಂದೆ ಹಲವು ಬಾರಿ ಈ ರೀತಿಯ ವಸ್ತು ಕಂಡುಬಂದಿರುವುದಾಗಿ ಹೇಳಿದ್ದರೂ ಅದಕ್ಕೆ ಪುರಾವೆ ಸಿಕ್ಕಿರಲಿಲ್ಲ.
ಅಮೆರಿಕ ರಾಯಲ್ ಅಬ್ಸರ್ವೇಟರಿ ರಿಸರ್ಚ್‌ನ ಸಂಶೋಧಕರ ಪ್ರಕಾರ “ಇದು ಬೇರೊಂದು ಸೌರವ್ಯೂಹದಿಂದ ಬಂದ ನಮ್ಮ ಅತಿಥಿ’! ಈ ವಸ್ತುವು ಸೂರ್ಯನ ಗುರುತ್ವಾಕರ್ಷಣೆಯನ್ನೂ ತಪ್ಪಿಸಿಕೊಳ್ಳಬಲ್ಲಷ್ಟು ವೇಗವಾಗಿ ಚಲಿಸಿದೆ. ಸಾಮಾನ್ಯವಾಗಿ ಯಾವುದೇ ಗ್ರಹದ ಬಳಿ ಆಗಮಿಸಿದಾಗ ಆ ಗ್ರಹದ ಗುರುತ್ವಾಕರ್ಷಣೆಯಿಂದ ಅದು ಸಮೀಪಕ್ಕೆ ಆಕರ್ಷಿಸಲ್ಪಡುತ್ತದೆ. ಆದರೆ ಈ ವಸ್ತು ಯಾವುದೇ ಗ್ರಹದ ಆಕರ್ಷಣೆಗೂ ಒಳಪಟ್ಟಿಲ್ಲ.
ಸೆ.9ರಂದು ಮೊದಲ ಬಾರಿಗೆ ಸೂರ್ಯನಿಂದ 23.4 ಮೀಟರ್ ಮೈಲುಗಳಷ್ಟು ದೂರದಲ್ಲಿ ಹವಾಯಿ ದೂರದರ್ಶಕದಲ್ಲಿ ಇದು ಗೋಚರಿಸಿತ್ತು. ಮೇಲ್ಭಾಗದಿಂದ ನಮ್ಮ ಸೌರವ್ಯೂಹಕ್ಕೆ ಪ್ರವೇಶಿಸಿದ ಈ ವಸ್ತು ಬುಧ ಗ್ರಹದ ಕಕ್ಷೆಯ ಸಮೀಪ ಬಂದು ಸೂರ್ಯನಿ ಗಿಂತಲೂ ಕೆಳಭಾಗದಲ್ಲಿ ಕಂಡಿತ್ತು. ಅನಂತರ ಮೇಲೆ ಸಾಗಿದೆ. ಇನ್ನೊಂದೆಡೆ ಇದೇ ವಸ್ತುವಿಗೆ ಸಂಬಂಧಿಸಿದ ಪ್ರಕಟಿಸಲಾದ ಇನ್ನೊಂದು ಅಧ್ಯಯನ ವರದಿಯಲ್ಲಿ ಇದನ್ನು ಕ್ಷುದ್ರಗ್ರಹ ಎಂದೂ ಕರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
MUST WATCH
ಹೊಸ ಸೇರ್ಪಡೆ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.