ಎಫ್.ಎ.ಟಿ.ಎಫ್. ತೂಗುಗತ್ತಿ ತಪ್ಪಿಸಲು ಪಾಕಿಸ್ಥಾನ ಸರ್ಕಸ್
Team Udayavani, May 2, 2020, 7:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಇಸ್ಲಾಮಾಬಾದ್: ಉಗ್ರರ ಹಣಕಾಸು ನೆರವು ನಿಗ್ರಹ ಪಡೆಯ (ಎಫ್ಎಟಿಎಫ್) ಕಪ್ಪುಪಟ್ಟಿಗೆ ಸೇರ್ಪಡೆಗೊಳ್ಳುವುದರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವ ಆತುರದಲ್ಲಿರುವ ಪಾಕಿಸ್ಥಾನ, ಇದೀಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಹೊಸ ನಾಟಕವನ್ನಾಡಲು ಮುಂದಾಗಿದೆ.
ಕೆಲವು ವರ್ಷಗಳ ಹಿಂದೆ, ಪಾಕ್ ನೆಲದಲ್ಲಿರುವ 130 ಉಗ್ರರ ವಿರುದ್ಧ ನಿಷೇಧಗಳನ್ನು ಹೇರಿದ್ದ ಭದ್ರತಾ ಮಂಡಳಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರ ಕ್ಕೆ ಸೂಚಿಸಿತ್ತು. ಈ ಬಗ್ಗೆ ಹೊಸತೊಂದು ಸೋಗು ಹಾಕಿರುವ ಪಾಕಿಸ್ಥಾನ, ವರ್ಷಗಟ್ಟಲೆ ಹುಡುಕಾಡಿದರೂ 130 ಉಗ್ರರಲ್ಲಿ ಕೇವಲ 19 ಉಗ್ರರು ಮಾತ್ರ ತನ್ನ ನೆಲದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾಗಾಗಿ, 111 ಉಗ್ರರ ಹೆಸರುಗಳನ್ನು ಸೂಚನಾ ಪಟ್ಟಿಯಿಂದ ಕೈಬಿಡಬೇಕೆಂದು ಮನವಿ ಮಾಡಲು ತೀರ್ಮಾನಿಸಿದೆ.
ಕಳೆದ ತಿಂಗಳು ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ವಿಶ್ವಸಂಸ್ಥೆಯ ಸಮಿತಿಯೊಂದರ ಮುಂದೆಯೂ ಈ ವಿಚಾರವನ್ನು ಪ್ರಸ್ತಾಪ ಮಾಡಿದೆ. ಅದೇ ವಿಚಾರವನ್ನು ಮನವಿಯ ರೂಪದಲ್ಲಿ ಭದ್ರತಾ ಮಂಡಳಿಗೆ ಕಳುಹಿಸಲು ನಿರ್ಧರಿಸಿದೆ. ಈಗ ಮನವಿಯಲ್ಲಿ ಮತ್ತಷ್ಟು ಪರಿಷ್ಕರಣೆ ಮಾಡಿ, 19 ಉಗ್ರರಲ್ಲಿ 6 ಉಗ್ರರ ಹೆಸರುಗಳನ್ನೂ ಕೈಬಿಡುವಂತೆ ಮನವಿ ಸಲ್ಲಿಸಲೂ ತೀರ್ಮಾನಿಸಿದೆ.
ಯುಎನ್‌ಎಸ್‌ಸಿಯಲ್ಲಿರುವ ತನ್ನ ಪರಮಾಪ್ತ ಮಿತ್ರ ಚೀನದ ಮೂಲಕ ಈ ಮನವಿಗಳನ್ನು ಮಂಡಿಸಿ, ಈ ವರ್ಷಾಂತ್ಯದೊಳಗೆ ಅವುಗಳಿಗೆ ಒಪ್ಪಿಗೆ ಸಿಗುವಂತೆ ಮಾಡಿಕೊಳ್ಳಬೇಕೆಂಬ ತವಕದಲ್ಲಿದೆ ಪಾಕಿಸ್ತಾನ. ಹೇಗಿದ್ದರೂ, ಎಫ್ಎಟಿಎಫ್ ಚಟುವಟಿಕೆ 6 ತಿಂಗಳು ಬಂದ್ ಆಗಿರುವುದರಿಂದ ಅದು ಮತ್ತೆ ಪುನರಾಂಭಿಸುವಷ್ಟರಲ್ಲಿ ‘ಸ್ಥಿತಿಗತಿ’ಗಳನ್ನು ಬದಲಿಸಿಕೊಳ್ಳಲು ಪಾಕಿಸ್ಥಾನ ಲೆಕ್ಕ ಹಾಕಿದೆ.
ಸ್ಪೀಕರ್ ಅಸಾದ್ ಕೈಸರ್‌ಗೆ ಸೋಂಕು
ಇಸ್ಲಾಮಾಬಾದ್: ಪಾಕಿಸ್ಥಾನ ಸಂಸತ್‌ನ ಕೆಳಮನೆ ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್‌ಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ‘ನನಗೆ ಕೋವಿಡ್ 19 ವೈರಸ್ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ನಾನು ಕ್ವಾರಂಟೈನ್ ಆಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಕೈಸರ್ ಅವರ ಪುತ್ರ ಮತ್ತು ಪತ್ನಿಗೆ ಕೂಡ ಸೋಂಕು ದೃಢಪಟ್ಟಿದೆ. ಕೆಲ ದಿನಗಳ ಹಿಂದೆ ಕೈಸರ್ ಅವರ ಇಬ್ಬರು ಬಂಧುಗಳಿಗೆ ಸೋಂಕು ಇರುವುದು ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.