ಒಂದಲ್ಲ ಎರಡಲ್ಲ 20 ವರ್ಷದಿಂದ ಪ್ರತಿದಿನ ಮಗಳ ಫೋಟೋ ತೆಗೆದಿಟ್ಟ ತಂದೆ: ವಿಡಿಯೋ ವೈರಲ್
Team Udayavani, Nov 7, 2022, 6:08 PM IST
ನವದೆಹಲಿ: ಈಗಿನ ಕಾಲದಲ್ಲಿ ಮಕ್ಕಳನ್ನು ಸಾಕುತ್ತಾ ಅವರ ಬಾಲ್ಯವನ್ನು ಮೊಬೈಲ್ ಮೂಲಕ ಫೋಟೋವಾಗಿ ಸೆರೆ ಹಿಡಿಯುವುದು ಸಾಮಾನ್ಯ. ಆ ಫೋಟೋಗಳನ್ನೇ ಫ್ರೇಮ್ ಆಗಿ, ವಾಲ್ ಪೇಪರ್ ಆಗಿ ಇಡುತ್ತೇವೆ. ಇಲ್ಲೊಬ್ಬ ತಂದೆ ತನ್ನ ಮಗಳ ಫೋಟೋವನ್ನು ಸೆರೆ ಹಿಡಿದಿದ್ದಾನೆ. ಅದು ಪ್ರತಿ ದಿನ.!
ಡಚ್ಚ್ ದೇಶದ ಸಿನಿಮಾ ನಿರ್ದೇಶಕ ಫ್ರಾನ್ಸ್ ಹಾಫ್ಮೀಸ್ಟರ್ ತನ್ನ ಮುದ್ದಿನ ಮಗಳ ಫೋಟೋವನ್ನು, ಆಕೆ ಹುಟ್ಟಿದ ದಿನದಿಂದ ಇದುವರೆಗೆ ಅಂದರೆ ಮಗಳು ಲೊಟ್ಟೆಯ ( ಮಗಳ ಹೆಸರು) ಫೋಟೋವನ್ನು ಸೆರೆ ಹಿಡಿದಿದ್ದಾನೆ. ಮಗಳಿಗೆ ಈಗ 20 ವರ್ಷ. ಅಷ್ಟು ವರ್ಷದಿಂದ ಹಿಡಿದ ಫೋಟೋವನ್ನು ಫ್ರಾನ್ಸ್ ಹಾಫ್ಮೀಸ್ಟರ್ ಈಗ ಟೈಮ್ ಲ್ಯಾಪ್ಸ್ ಮೂಲಕ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಆಪ್ಲೋಡ್ ಮಾಡಿದ್ದಾರೆ.
ಇದನ್ನೂ ಓದಿ: ಪೊಲೀಸ್ ಅಧಿಕಾರಿ ಬ್ಯಾಂಕ್ ಖಾತೆಗೆ ಸಂಬಳದೊಂದಿಗೆ 10 ಕೋಟಿ ರೂ. ಕ್ರೆಡಿಟ್: ಮುಂದೆನಾಯ್ತು?
2 ನಿಮಿಷ 18 ಸೆಕೆಂಡ್ ಗಳುಳ್ಳ ಈ ವೀಡಿಯೋದಲ್ಲಿ ಮಗುವಾಗಿದ್ದಾಗ ಲೊಟ್ಟೆ, ಬಾಲ್ಯ, ಯೌವನದ ನೂರಾರು ಫೋಟೋಗಳು ಸೆರೆಯಾಗಿವೆ. 20 ವರ್ಷ ಪ್ರತಿದಿನ ತೆಗೆದ ಫೋಟೋಗಳಲ್ಲಿ ಪ್ರಮುಖ ಫೋಟೋ ಅಂದರೆ ಮಗು, ಬಾಲ್ಯ, ಯೌವನದ ಹಂತದಲ್ಲಿ ಆಕೆಯ ಮುಖ ಬದಲಾದ ಫೋಟೋಗಳನ್ನು ಈ ವಿಡಿಯೋದಲ್ಲಿ ಹಾಕಿದ್ದಾರೆ.
ರೆಡ್ಡಿಟ್ ನಲ್ಲಿ ಈ ವಿಡಿಯೋ ಆಪ್ಲೋಡ್ ಆಗಿದ್ದು, ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.