ನಿಫಾ ಭೀತಿ: ಸೌದಿಯಿಂದ ಕೇರಳದ ಹಣ್ಣು , ತರಕಾರಿ ಆಮದು ನಿಷೇಧ
Team Udayavani, Jun 5, 2018, 3:25 PM IST
ರಿಯಾಧ್ : ಮಾರಣಾಂತಿಕ ನಿಫಾ ವೈರಸ್ ಹರಡುವ ಭೀತಿಯಲ್ಲಿ ಸೌದಿ ಅರೇಬಿಯ, ಕೇರಳದ ಶೀತಲೀಕೃತ ಅಥವಾ ಸಂಸ್ಕರಿತ ಹಣ್ಣುಹಂಪಲು ಮತ್ತು ತರಕಾರಿ ಆಮದನ್ನು ನಿಷೇಧಿಸಿದೆ.
ನಿಫಾ ವೈರಸ್ನಿಂದ ಮಂಗನ ಕಾಯಿಲೆ ಹರಡುವ ಭೀತಿ ಕೂಡ ಇದೆ. ಎರಡೂ ಕಾಯಿಲೆಗಳ ಗುಣಲಕ್ಷಣಗಳು ಬಹುತೇಕ ಒಂದೇ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಏರುತ್ತಲೇ ಹೋಗುವ ಜ್ವರ, ಕೆಮ್ಮು, ತಲೆ ನೋವು, ಉಸಿರಾಟದಲ್ಲಿನ ವ್ಯತ್ಯಯ ಇತ್ಯಾದಿ ತೊಂದರೆಗಳು ವೈರಸ್ಗೆ ಈಡಾದವರಲ್ಲಿ ಕಂಡು ಬರುತ್ತದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಕಳೆದ ಮೇ 29ರಂದೇ ಕೇರಳದಿಂದ ಹಣ್ಣು ಹಂಪಲು ತರಕಾರಿಗಳ ಆಮದನ್ನು ನಿಷೇಧಿಸಿದೆ. ಇದಕ್ಕೆ ಮೊದಲೇ ಕೊಟ್ಟಿದ್ದ 100 ಟನ್ನುಗಳ ಹಣ್ಣು ಹಂಪಲು ತರಕಾರಿ ಉತ್ಪನ್ನಗಳ ಆಮದು ಆರ್ಡರನ್ನು ರದ್ದು ಪಡಿಸಿರುವುದಾಗಿ ಯುಎಇ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.