ಉಗ್ರ ನಿಗ್ರಹ ಹೋರಾಟ ನಂಬಿಕೆಗಳ ಕದನವಲ್ಲ
Team Udayavani, May 22, 2017, 11:46 AM IST
ರಿಯಾದ್: ಭಯೋತ್ಪಾದನೆ ವಿರುದ್ಧ ಹೋರಾಟ ಎಂದರೆ, ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಯುದ್ಧವೇ ಹೊರತು ವಿವಿಧ ನಂಬಿಕೆಗಳ ನಡುವಿನ ಹೋರಾಟವಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಟ್ರಂಪ್, ಮುಸ್ಲಿಂ ನಾಯಕರನ್ನುದ್ದೇಶಿಸಿ ಮಾತನಾಡುತ್ತ, “ಭಯೋತ್ಪಾದನೆ ಎಂಬುದು ಮಾನವ ಜೀವನವನ್ನು ಹಾಳುಮಾಡಲು ಬಯಸುವ ಕ್ರೂರ ಕ್ರಿಮಿನಲ್‌ಗಳು ಮತ್ತು ಅವರನ್ನು ರಕ್ಷಿಸಲು ಬಯಸುತ್ತಿರುವ ಎಲ್ಲ ಧರ್ಮದ ಸಾಧು ಜನರ ನಡುವಿನ ಯುದ್ಧ ಎಂದು ಬಣ್ಣಿಸಿದ್ದಾರೆ. ಭಯೋಧಿತ್ಪಾದನೆ ಹಾದಿ ತುಳಿದರೆ, ನಿಮ್ಮ ಜೀವನ ಖಾಲಿಯಾಧಿಗುತ್ತದೆ. ಆದರೆ ಇದನ್ನೆಲ್ಲ ನಿಮಗೆ ಬೋಧಿಸಲು ನಾವಿಲ್ಲಿಗೆ ಬಂದಿಲ್ಲ. ನಮ್ಮ ಸಮಾನ ಆಸಕ್ತಿ ಮತ್ತು ಮೌಲ್ಯಗಳ ಮೂಲಕ ಪರಸ್ಪರ ಸಹಕಾರ ಬಯಸುತ್ತೇವೆ’ ಎಂದಿದ್ದಾರೆ. ಮಧ್ಯಪ್ರಾಚ್ಯದ ಎಲ್ಲ ದೇಶಗಳೂ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾಗಿಧಿಯಾಗುವಂತೆ ಮನವಿ ಮಾಡಿದ್ದಾರೆ. ಚುನಾವಣೆ ವೇಳೆ ಕಟ್ಟರ್ ಇಸ್ಲಾಂ ವಿರುದ್ಧ ಟ್ರಂಪ್ ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಸೌದಿ ಭಾಷಣ ತೀವ್ರ ಕುತೂಹಲ ಮೂಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.