ಆನ್‌ಲೈನ್‌ನಲ್ಲಿ ಬುರ್ಖಾ ಪದ್ಧತಿ ವಿರುದ್ಧ ಹೋರಾಟ
ಸೌದಿ ಚೆಲುವೆಯರ ಚಳವಳಿ!
Team Udayavani, Sep 14, 2019, 5:12 AM IST
ರಿಯಾದ್: ಸೌದಿ ಅರೇಬಿಯಾದ ಮಹಿಳೆಯರು ಇದೇ ಮೊದಲ ಬಾರಿಗೆ ಅಂತರ್ಜಾಲದಲ್ಲಿ ವಿಶೇಷವಾದ, ವಿನೂತನ ವಾದ ಪ್ರತಿಭಟನೆಗೆ ಇಳಿದಿದ್ದಾರೆ. ಬಗೆಬಗೆಯ ವೇಷ-ಭೂಷಣಗಳನ್ನು ಧರಿಸಿ, ಬಗೆಬಗೆಯ ವಿನ್ಯಾಸದ ವಸ್ತ್ರಗಳನ್ನು ಧರಿಸಿಕೊಂಡ ಅವರು, ಅದರ ಫೋಟೋ ಗಳನ್ನು ತೆಗೆಯಿಸಿಕೊಂಡು ಅವುಗಳನ್ನು ಅಂತರ್ಜಾಲದಲ್ಲಿ ಹಾಕಲಾ ರಂಭಿಸಿದ್ದಾರೆ.
ಅಸಲಿಗೆ, ಇದು ಸೌದಿಯಲ್ಲಿ ಮಹಿಳೆ ಯರಿಗೆ ಶತಮಾನಗಳಿಂದ ಕಡ್ಡಾಯವಾಗಿರುವ ಬುರ್ಖಾ ವಿರುದ್ಧದ ಅಭಿಯಾನ. ಬದಲಾದ ಕಾಲಘಟ್ಟದಲ್ಲಿ, ಬದಲಾದ ವಿಶ್ವದಲ್ಲಿ ನಾವು ಇತರ ದೇಶಗಳ ಮಹಿಳೆಯರಂತೆ ಸಂಪ್ರದಾಯದ ಉಸಿರುಗಟ್ಟುವ ವಾತಾ ವರಣದಿಂದ ಹೊರಬಂದು ಜೀವನ ನಡೆಸಲು ಬಯಸುತ್ತೇವೆ. ಅಂಥದ್ದೊಂದು ಸ್ವಾತಂತ್ರ್ಯ ನಮಗೆ ಬೇಕಿದೆ ಎಂಬ ಸಂದೇಶವನ್ನು ಈ ಅಭಿಯಾನದಲ್ಲಿ ಸುತ್ತಲಿನ ಸಮಾಜಕ್ಕೆ ನೀಡಲು ಈ ಮಹಿಳೆಯರು ಪ್ರಯತ್ನಿಸಿದ್ದಾರೆ. ಅಭಿಯಾನದಲ್ಲಿ ಪಾಲ್ಗೊಂಡಿರುವ ಮಹಿಳೆ ಯರಲ್ಲಿ ಅನೇಕರು, ಹೈ ಹೀಲ್ಡ್ ಶೂಗಳನ್ನು ಧರಿಸಿ, ಮುಖಕ್ಕೆ ಮೇಕಪ್, ಲಿಪ್‌ಸ್ಟಿಕ್ ಹಾಕಿಕೊಂಡು, ಉಗುರುಗಳಿಗೆ ಬಣ್ಣ ಹಾಕಿಕೊಂಡು ಸಿಂಗರಿಸಿಕೊಂಡಿದ್ದಾರೆ. ಜತೆಗೆ, ತಮ್ಮ ಆಕಾರ, ಅಂದ-ಚೆಂದಕ್ಕೆ ಒಪ್ಪುವಂಥ ಚೂಡಿದಾರ್ ಮಾದರಿಯ ಬಟ್ಟೆಗಳನ್ನು ಹಾಕಿಕೊಂಡಿದ್ದಾರೆ. ಒಟ್ಟಾರೆಯಾಗಿ, ಫ್ಯಾಷನಬಲ್ ಆಗಿ ಕಾಣಿಸಿಕೊಂಡಿದ್ದಾರೆ.
ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಕಳೆದ ವರ್ಷ, ಇಸ್ಲಾಂನಲ್ಲಿ ಬುರ್ಖಾ ಕಡ್ಡಾಯವೇನಿಲ್ಲ ಎಂದು ಹೇಳಿದ್ದರಿಂದ ಸ್ಫೂರ್ತಿಗೊಂಡು ಇಂಥ ಅಭಿಯಾನ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.