ಬಾಂಗ್ಲಾದೇಶ ವಿಮಾನ ನಿಲ್ದಾಣದ ಏರಿಂಡಿಯಾ ಕಚೇರಿಯಲ್ಲಿ ಬೆಂಕಿ
Team Udayavani, Aug 11, 2017, 4:11 PM IST
ಢಾಕಾ : ಇಲ್ಲಿನ ಬಾಂಗ್ಲಾದೇಶ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಏರಿಂಡಿಯಾ ಕಾರ್ಯಾಲಯದ ಒಳಗೆ ಇಂದು ಶುಕ್ರವಾರ ಬೆಂಕಿ ಕಾಣಿಸಿಕೊಂಡಿತೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿದು ಹಜರತ್ ಶಹಜ್‌ಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧಾವಿಸಿ ಬಂದ ಹತ್ತು ಅಗ್ನಿ ಶಾಮಕ ಘಟಕಗಳು ಬೆಂಕಿಯನ್ನು ನಂದಿಸುವ ಕೆಲಸದಲ್ಲಿ ತೊಡಗಿಕೊಂಡವು.
ಏರಿಂಡಿಯಾ ಅಧಿಕಾರಿಯೋರ್ವರು ಹೇಳಿರುವ ಪ್ರಕಾರ ಬೆಂಕಿಯು ಏರ್ ಲೈನ್‌ನ ಕಾರ್ಯಾಲಯದಲ್ಲೇ ಕಾಣಿಸಿದೆ. ಆದರೆ ಅದಕ್ಕೆ ಕಾರಣವೇನೆಂಬುದನ್ನು ಅವರು ತಿಳಿಸಿಲ್ಲ.
ವಿಮಾನ ನಿಲ್ದಾಣ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಏರಿಂಡಿಯಾ ಮತ್ತು ಸೌದಿ ಏರ್ ಲೈನ್ಸ್ ಕಾರ್ಯಾಲಯಗಳಿವೆ. ಬೆಂಕಿ ಕಾಣಿಸಿಕೊಂಡದ್ದನ್ನು ಅನುಸರಿಸಿ ವಿಮಾನ ನಿಲ್ದಾಣ ಕ್ಕೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಕಟ್ಟಡದ ಒಳಗೆ ಹೊಗೆ ಆವರಿಸಿಕೊಂಡದ್ದನ್ನು ಅನುಸರಿಸಿ ಪ್ರಯಾಣಿಕರನ್ನು ಮತ್ತು ಸಿಬಂದಿಗಳನ್ನು ಸ್ಥಳಾಂತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
War: ಉಕ್ರೇನ್‌ನಿಂದ ಸೆರೆ ಭೀತಿ: ಉ.ಕೊರಿಯಾದ 300 ಯೋಧರ ಆತ್ಮಹತ್ಯೆ?
Canada ಮಾರಾಟಕ್ಕಿಲ್ಲ: ಟ್ರಂಪ್‌ಗೆ ಎನ್‌ಡಿಪಿ ನಾಯಕ ಸಿಂಗ್ ಚಾಟಿ
Los Angeles;ಕಾಳ್ಗಿಚ್ಚು ಆರಿಸಲು ಸೂಪರ್ ಸ್ಕೂಪರ್:ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.