ಭ್ರೂಣ ಕಸಿಯಿಂದ ಮಗು
Team Udayavani, Dec 6, 2018, 6:00 AM IST
ಸಾವೋ ಪಾವ್ಲೋ: ವಿಶ್ವದಲ್ಲೇ ಮೊದಲ ಬಾರಿಗೆ ಕಸಿ ಮಾಡಿದ ಭ್ರೂಣದಿಂದ ಬ್ರೆಜಿಲ್‌ನಲ್ಲಿ ಯಶಸ್ವಿಯಾಗಿ ಮಗು ಪಡೆಯಲಾಗಿದೆ. ದಿ ಲಾನ್ಸೆಟ್ ಮೆಡಿಕಲ್ ಜರ್ನಲ್‌ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದ್ದು, ದಾನಿಯಿಂದ ಪಡೆದ ಭ್ರೂಣವನ್ನು ಮಹಿಳೆಗೆ ಕಸಿ ಮಾಡಲಾಗಿತ್ತು. ಈ ಹಿಂದೆ ಅಮೆರಿಕ, ಝೆಕ್ ಗಣರಾಜ್ಯ ಹಾಗೂ ಟರ್ಕಿ ಸೇರಿದಂತೆ ವಿವಿಧ ದೇಶಗಳಲ್ಲಿ 10 ಬಾರಿ ಈ ರೀತಿಯ ಪ್ರಯೋಗ ಮಾಡಲಾಗಿತ್ತಾದರೂ, ವಿಫಲವಾಗಿತ್ತು. ಆದರೆ, ಬ್ರೆಜಿಲ್‌ನಲ್ಲಿ ನಡೆಸಿದ ಈ ಪ್ರಯೋಗ ಯಶಸ್ವಿಯಾಗಿದೆ. 35 ವಾರಗಳಲ್ಲಿ ಮಹಿಳೆಗೆ ಸಿಸೇರಿಯನ್ ಮೂಲಕ ಪ್ರಸವವಾಗಿದೆ. ಮಗು 2.5 ಕಿಲೋ ತೂಕವಿದ್ದು, ಆರೋಗ್ಯವಾಗಿದೆ.
ಬ್ರೆಜಿಲ್‌ನ ಸಾವೋ ಪಾವ್ಲೋ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆಸಲಾಗಿದೆ. ಮೃತ ಮಹಿಳೆಯಿಂದ ಈ ಭ್ರೂಣ ವನ್ನು ಪಡೆಯಲಾಗಿದ್ದು, ಜೀವಂತ ವ್ಯಕ್ತಿ ಗಳಿಗಿಂತ ಹೆಚ್ಚಾಗಿ ಮೃತರಿಂದಲೇ ಇಂತಹ ದಾನ ಹೆಚ್ಚು ನಡೆಯುತ್ತದೆ ಎಂದು ಸಾವೋ ಪಾವ್ಲೋ ವಿವಿ ವೈದ್ಯೆ ಡ್ಯಾನಿ ಎಜೆನ್‌ಬಗ್ ಹೇಳಿದ್ದಾರೆ. ಬಂಜೆತನ ಇರುವ ಮಹಿಳೆ ಯರಿಗೆ ಈ ವರೆಗೆ ದತ್ತು ಸ್ವೀಕಾರ ಅಥವಾ ಬಾಡಿಗೆ ತಾಯ್ತನ ಆಯ್ಕೆ ಮಾತ್ರವೇ ಇತ್ತು. ಇನ್ನು ಭ್ರೂಣ ಕಸಿಯಿಂದಲೂ ಈ ಮಗು ವನ್ನು ಪಡೆಯುವ ಸಾಧ್ಯತೆ ಸಿಕ್ಕಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.