ಮಂಗಳ ಒಳಾಂಗಣ ಅನ್ವೇಷಕ: ನಾಸಾದ ಪ್ರಥಮ ಲ್ಯಾಂಡರ್ ನಭೋ ಮಂಡಲಕ್ಕೆ
Team Udayavani, May 5, 2018, 5:48 PM IST
ಕ್ಯಾಲಿಫೋರ್ನಿಯ : ಮಂಗಳ ಗ್ರಹದ ಅಂತರಂಗವನ್ನು ಅನ್ವೇಷಿಸುವ ನಾಸಾದ ಪ್ರಪ್ರಥಮ ರೋಬೋಟಿಕ್ ಲ್ಯಾಂಡರ್ ಹೊತ್ತ ಅಟ್ಲಾಸ್ 5 ರಾಕೆಟ್ ಇಂದು ಶನಿವಾರ ನಸುಕಿನ ವೇಳೆ ವ್ಯಾಂಡನ್ಬರ್ಗ್ ವಾಯು ಪಡೆ ನೆಲೆಯಿಂದ ಬಾಹ್ಯಾಕಾಶಕ್ಕೆ ಚಿಮ್ಮಿತು.
ಮಾರ್ಸ್ ಇನ್ಸೈಟ್ ಪ್ರೋಬ್ ಎಂದೇ ತಿಳಯಲ್ಪಟ್ಟಿರುವ ಮಂಗಳನ ಒಳಾಂಗಣವನ್ನು ಅನ್ವೇಷಿಸುವ ನಾಸಾದ ಮೊತ್ತ ಮೊದಲ ರೋಬೋಟಿಕ್ ಲ್ಯಾಂಡರ್ ಹೊತ್ತ ಅಟ್ಲಾಸ್ 5 ರಾಕೆಟ್ ಇಂದು ಶನಿವಾರ ನಸುಕಿನ 4.05ರ ವೇಳೆಗೆ (ಪಿಡಿಟಿ ಕಾಲಮಾನ) ನಭೋಮಂಡಲಕ್ಕೆ ಹಾರಿತು.
ಇದು ಅಮೆರಿಕದ ಮೊತ್ತ ಮೊದಲ ಅಂತರ್-ಗ್ರಹ ಅನ್ವೇಷಕ ಬಾಹ್ಯಾಕಾಶ ನೌಕೆಯಾಗಿದ್ದು ನಸುಕಿನ ವೇಳೆ ಹಾಸಿಗೆ ಬಿಟ್ಟು ಏಳುವವರಿಗೆ ಇಂದು ನಸುಕಿನ ವೇಳೆ ಪೆಸಿಫಿಕ್ ಆಗಸದಲ್ಲಿ ವರ್ಣರಂಜಿತ ಚಿತ್ರಕಲೆ ಕಂಡು ವಿಸ್ಮಯ ಪಡುವ ಅವಕಾಶ ಪ್ರಾಪ್ತವಾಯಿತು.
19 ಮಹಡಿ ಎತ್ತರದ ಅಟ್ಲಾಸ್ ರಾಕೆಟ್ ಎರಡು ಹಂತಗಳನ್ನು ಹೊಂದಿದ್ದು ಒಂದರಲ್ಲಿ ಲ್ಯಾಂಡರ್ ಮತ್ತು ಇನ್ನೊಂದರಲ್ಲಿ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿಯನ್ನು ಒಳಗೊಂಡಿದೆ. ಲಾಕ್ಹೀಡ್ ಮಾರ್ಟಿನ್ ಕಾರ್ಪ್ ಮತ್ತು ಬೋಯಿಂಗ್ ಕಂಪೆನಿಯ ಭಾಗೀದಾರಿಕೆಯ ಯುನೈಟೆಡ್ ಲಾಂಚ್ ಅಲಾಯನ್ಸ್ ಕೂಟ ಅಟ್ಲಾಸ್ 5 ರಾಕೆಟ್ ಉಡ್ಡಯನ ಸಂಘಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.