4 ದಿನಗಳಲ್ಲಿ 5 ನೌಕೆಗಳ ಮೇಲೆ ಕಡಲ್ಗಳ್ಳರ ದಾಳಿ
Team Udayavani, Dec 26, 2019, 8:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಿಂಗಾಪುರ: ವಿಶ್ವದಲ್ಲೇ ಅತಿ ಹೆಚ್ಚು ನೌಕಾ ಸಂಚಾರವಿರುವಂಥ ಸಿಂಗಾಪುರ ಜಲಸಂಧಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಬರೋಬ್ಬರಿ 5 ಹಡಗುಗಳ ಮೇಲೆ ಕಡಲ್ಗಳ್ಳರು ದಾಳಿ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ.
ಸೋಮವಾರ ರಾತ್ರಿ ಕಚ್ಚಾ ತೈಲ ಟ್ಯಾಂಕರ್‌ವೊಂದರ ಮೇಲೆ ದಾಳಿ ನಡೆದಿದ್ದು, ಅದಾದ ಎರಡೇ ಗಂಟೆಯಲ್ಲಿ ಮತ್ತೂಂದು ನೌಕೆಯ ಮೇಲೆ ದಾಳಿ ನಡೆದಿದೆ. ಎರಡೂ ನೌಕೆಯಲ್ಲಿದ್ದ ಸಿಬಂದಿಯನ್ನು ಕಟ್ಟಿಹಾಕಿದ್ದ ಕಡಲ್ಗಳ್ಳರು, ದರೋಡೆಗೆ ಯತ್ನಿಸಿದ್ದರು.
ಆದರೆ, ಹಡಗಿನಲ್ಲಿದ್ದ ಎಚ್ಚರಿಕೆಯ ಗಂಟೆ ಮೊಳಗಿದ ಕಾರಣ ಅವರ ಯತ್ನ ವಿಫಲವಾಗಿತ್ತು. ಡಿ.20ರಂದು 3 ಕಡಲ್ಗಳ್ಳತನ ಘಟನೆ ನಡೆದಿತ್ತು. 2019ರಲ್ಲಿ ಸಿಂಗಾಪುರ ಜಲಸಂಧಿಯಲ್ಲಿ ಒಟ್ಟಾರೆ ಇಂಥ 29 ಪ್ರಕರಣಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.