Rocketನಲ್ಲಿ ದೋಷ: ಚೀನದ ಚಂದ್ರಯಾನ ಯೋಜನೆಗೆ ಹಿನ್ನಡೆ
Team Udayavani, Mar 16, 2024, 1:16 AM IST
ಬೀಜಿಂಗ್: ಚಂದ್ರನ ಅಧ್ಯಯನಕ್ಕಾಗಿ ಚೀನ ಉಡಾವಣೆ ಮಾಡಿದ್ದ ರಾಕೆಟ್ ತಾಂತ್ರಿಕ ತೊಂದರೆಯಿಂದ ಶುಕ್ರವಾರ ವಿಫಲಗೊಂಡಿದೆ. ಹೀಗಾಗಿ ಚಂದ್ರನ ಕಕ್ಷಗೆ ಒಂದೇ ಬಾರಿ 2 ಉಪಗ್ರಹಗಳನ್ನು ತಲುಪಿಸುವ ಚೀನದ ಮಹತ್ವಾಕಾಂಕ್ಷಿ ಯೋಜನೆಯೊಂದು ವಿಫಲಗೊಂಡಿದೆ.
ಚಂದ್ರನ ಅಧ್ಯಯನಕ್ಕಾಗಿ 2 ಉಪಗ್ರಹ ಗಳನ್ನು ಹೊತ್ತ ಚೀನದ ರಾಕೆಟ್ ಬುಧವಾರ ಸಾಯಂಕಾಲ ಉಡಾವಣೆಗೊಂಡಿತ್ತು. ರಾಕೆಟ್‌ನ ಮೊದಲ 2 ಹಂತಗಳು ಸರಿಯಾಗಿ ಕಾರ್ಯನಿರ್ವಹಿಸಿದರೂ ಸಹ 3ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಉಪಗ್ರಹಗಳು ಕಕ್ಷೆಗೆ ತಲುಪುವಲ್ಲಿ ವಿಫಲಗೊಂಡವು ಎಂದು ಚೀನದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಚಂದ್ರ ಹಾಗೂ ಭೂಮಿ ನಡುವೆ ನ್ಯಾವಿಗೇಶನ್ ವ್ಯವಸ್ಥೆ ತರುವುದಕ್ಕಾಗಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.