ಇರ್ಮಾವತಾರಕ್ಕೆ ಫ್ಲೋರಿಡಾ ತತ್ತರ
Team Udayavani, Sep 11, 2017, 8:45 AM IST
ಫ್ಲೋರಿಡಾ/ವಾಷಿಂಗ್ಟನ್: ಗಂಟೆಗೆ ಬರೋಬ್ಬರಿ 130 ಮೈಲು ವೇಗದಲ್ಲಿ ಬೀಸುತ್ತಿರುವ ಗಾಳಿ, ಮಳೆ ಸಹಿತವಾಗಿ ಅಮೆರಿಕದ ಫ್ಲೋರಿಡಾಕ್ಕೆ ಚಂಡಮಾರುತ ಇರ್ಮಾ ಅಪ್ಪಳಿಸಿದೆ. ಮಳೆ ಮತ್ತು ಇತರ ಪ್ರವಾಹ ಸಂಬಂಧಿ ದುರಂತಗ ಳಿಂದಾಗಿ ಇದುವರೆಗೆ ಕನಿಷ್ಠ ನಾಲ್ಕು ಮಂದಿ ಅಸುನೀಗಿದ್ದಾರೆ. ಹವಾಮಾನ ಇಲಾಖೆ ಈ ಹಿಂದೆಯೇ ಮುನ್ಸೂಚನೆ ನೀಡಿದಂತೆ ಸ್ಥಳೀಯ ಕಾಲಮಾನ ರವಿವಾರ ಬೆಳಗ್ಗೆ ಫ್ಲೋರಿಡಾ ಕೇಸ್‌ಗೆ ಅಪ್ಪಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 6.5 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಅಮೆರಿಕಕ್ಕೆ ಅಮೆರಿಕವನ್ನೇ ನಾಶ ಮಾಡುವ ಸಾಮರ್ಥ್ಯ ಇದೆ ಎಂದು ಹೇಳಲಾಗಿರುವ ಈ ಚಂಡಮಾರುತದ ಪ್ರಭಾವದಿಂದಾಗಿ ಫ್ಲೋರಿಡಾದ ನೈಋತ್ಯ ಭಾಗದ ಕರಾವಳಿಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮಂದಿ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ, ಹವಾಮಾನ ಇಲಾಖೆ ನೀಡುವ ಎಚ್ಚರಿಕೆಯ ಸೂಚನೆಗಳನ್ನು ಪಾಲಿಸಿ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಬರೆದುಕೊಂಡಿದ್ದಾರೆ.
ಮಳೆ ಮತ್ತು ಗಾಳಿಯ ಪ್ರಭಾವ ದಿಂದಾಗಿ ಮಿಯಾಮಿಯಲ್ಲಿ 5-10 ಅಡಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಬಹು ಮಹಡಿ ಕಟ್ಟಡಗಳು ಇರು ವಲ್ಲೆಡೆ ಬೃಹತ್ ಗಾತ್ರದ ಕ್ರೇನ್‌ಗಳನ್ನು ಮತ್ತು ಸಿಬಂದಿಯನ್ನು ನಿಯೋಜಿಸಲಾಗಿದೆ.
ರಭಸದಿಂದ ಬೀಸುವ ಗಾಳಿಯ ಹೊಡೆ ತಕ್ಕೆ ಮಿಯಾಯಿ ನಗರದ ಪ್ರಮುಖ ರಸ್ತೆಗಳಲ್ಲಿ ಇರಿಸಲಾಗಿರುವ ಬೃಹತ್ ಕ್ರೇನ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಈಗಾಗಲೇ ಗಾಳಿಯ ಪ್ರಭಾವಕ್ಕೆ ಅಲ್ಲಲ್ಲಿ ಮರಗಳು ಮುರಿದುಬಿದ್ದಿದ್ದು, ಕಾರುಗಳು ಜಖಂಗೊಂಡಿವೆ. ಫ್ಲೋರಿಡಾ, ಮಿಯಾಮಿಗಳಲ್ಲಿ ಶನಿವಾರದಿಂದಲೇ ಧಾರಾಕಾರ ಮಳೆಯಾಗುತ್ತಿದೆ.
ಮ್ಯಾರಥಾನ್ ನಗರ ಭಾರೀ ತೊಂದರೆ ಗೀಡಾಗಿದ್ದು, ಮಳೆಯ ಪ್ರಭಾವ ದಿಂದಾಗಿ ವಿದ್ಯುತ್, ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಶಾಲೆಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳ ಕಟ್ಟಡಗಳು ನೀರಿನಲ್ಲಿ ಮುಳುಗಿವೆ. ರಸ್ತೆಗಳಲ್ಲಿ ಆಳೆತ್ತರದ ನೀರು ಹರಿದು ಬಂದಿದೆ.
60 ಮಂದಿ ಭಾರತೀಯರ ರಕ್ಷಣೆ
ಚಂಡಮಾರುತ ಇರ್ಮಾ ಅಮೆರಿಕದ ಫ್ಲೋರಿಡಾಕ್ಕೆ ಅಪ್ಪಳಿಸಿರುವಂತೆಯೇ ಸೈಂಟ್ ಮಾರ್ಟಿನ್‌ನಿಂದ 60 ಮಂದಿ ಭಾರತೀಯರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗಿದೆ. ಈ ಪೈಕಿ ಹೆಚ್ಚಿನವರು ತಾತ್ಕಾಲಿಕ ವೀಸಾದಡಿ ಅಮೆರಿಕಕ್ಕೆ ಆಗಮಿಸಿದವರಾಗಿದ್ದಾರೆ. ತಾತ್ಕಾಲಿಕ ವೀಸಾ ಇಲ್ಲದವರಿಗೆ ಅದನ್ನು ಒದಗಿಸುವ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಚೇರಿ ಅಮೆರಿಕದ ವಿದೇಶಾಂಗ ಸಚಿವಾಲಯದ ಜತೆ ನಿಕಟ ಸಂಪರ್ಕ ಇರಿಸಿಕೊಂಡಿದೆ. ಕೆರೆಬಿಯನ್ ದ್ವೀಪ ಪ್ರದೇಶವಾಗಿರುವ ಸೈಂಟ್ ಮಾರ್ಟಿನ್‌ನಿಂದ 1,200 ಮಂದಿಯನ್ನು ಶನಿವಾರ ಪಾರು ಮಾಡಲಾಗಿದೆ. ಇನ್ನೂ 5 ಸಾವಿರ ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.