ವಿಡಿಯೋ ಗೇಮ್ ಕಿತ್ತುಕೊಂಡ ಕಾರಣಕ್ಕೆ ಶಿಕ್ಷಕಿಯನ್ನೇ ಪಜ್ಞೆ ತಪ್ಪುವಂತೆ ಥಳಿಸಿದ ವಿದ್ಯಾರ್ಥಿ
Team Udayavani, Feb 25, 2023, 12:00 PM IST
ವಾಷಿಂಗ್ಟನ್: ವಿಡಿಯೋ ಗೇಮ್ ಕಿತ್ತುಕೊಂಡ ಕಾರಣಕ್ಕೆ 17 ವರ್ಷದ ವಿದ್ಯಾರ್ಥಿಯೊಬ್ಬ ಶಿಕ್ಷಕಿಯನ್ನು ಅಟ್ಟಾಡಿಸಿ ಥಳಿಸಿರುವ ಘಟನೆ ಅಮೆರಿಕಾದ ಫ್ಲೋರಿಡಾದ ಹೈಸ್ಕೂಲ್ ವೊಂದರಲ್ಲಿ ನಡೆದಿದೆ.
ವಿದ್ಯಾರ್ಥಿ ತರಗತಿ ನಡೆಯುವಾಗ ವಿಡಿಯೋ ಗೇಮ್ ಬಳಸಿದ್ದಾನೆ. ಇದನ್ನು ನೋಡಿದ ಶಿಕ್ಷಕಿ ಅದನ್ನು ಆತನಿಂದ ಕಿತ್ತುಕೊಂಡಿದ್ದಾರೆ. ಆದಾದ ಬಳಿಕ ತರಗತಿಯ ಹೊರಗೆ ಹೋದ ಶಿಕ್ಷಕಿಯನ್ನು ಹಿಂದಿನಿಂದ ಬಂದು ವಿದ್ಯಾರ್ಥಿ ಕಾಲಿನಿಂದ ಒದ್ದಿದ್ದಾನೆ. ಕೆಳಗೆ ಬಿದ್ದ ಶಿಕ್ಷಕಿಯ ಮುಖಕ್ಕೆ ಹೊಡೆದು, ಥಳಿಸಿದ್ದಾನೆ. ಪರಿಣಾಮ ಶಿಕ್ಷಕಿ ಪ್ರಜ್ಞೆ ತಪ್ಪಿದ್ದಾರೆ.
ಇದನ್ನೂ ಓದಿ: ಬೊಮ್ಮಾಯಿಯವರು ಕಣ್ಣು ಬಿಡಲು ಇನ್ನೆಷ್ಟು ಶಿಕ್ಷಕರ ಹೆಣ ಬೀಳಬೇಕು?: ಸಿದ್ದರಾಮಯ್ಯ ಪ್ರಶ್ನೆ
ಅಕ್ಕಪಕ್ಕದಲ್ಲಿ ಜನ ಕೂಡಲೇ ಬಂದು ವಿದ್ಯಾರ್ಥಿಯನ್ನು ಬಲವಂತವಾಗಿ ಎಳೆದಿದ್ದಾರೆ. ಇಲ್ಲದಿದ್ರೆ ಶಿಕ್ಷಕಿಯನ್ನು ಆತ ಸಾಯಿಸುತ್ತಿದ್ದ ಎಂದ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆಯಾಗಿದೆ.
High School Student eliminates his female teacher and Ground and Pounds her unconscious body after she took away his Nintendo Switch… pic.twitter.com/QbjpxZS3xP
— Fight Haven (@FightHaven) February 24, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.