ಸೇನೆ ವಿರೋಧಿಗಳಿಗೆ ಉಗ್ರ ಪಟ್ಟ
ಪ್ರತಿರೋಧ ಒಡ್ಡಿದವರಿಗೆಲ್ಲ ಪಾಕ್ ಸರಕಾರದಿಂದ ಹಿಂಸೆ
Team Udayavani, Oct 20, 2019, 4:25 AM IST
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಸೇನೆಯ ಕುಕೃತ್ಯಗಳನ್ನು ವಿರೋಧಿಸಿದವರಿಗೆ ಉಗ್ರ ಪಟ್ಟವನ್ನು ಕಟ್ಟಲಾಗುತ್ತಿದ್ದು, ಅವರಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ತಿಳಿದು ಬಂದಿದೆ. ಇತ್ತೀಚೆಗೆ ಸೇನೆಯ ಕುಕೃತ್ಯವನ್ನು ಖಂಡಿಸಿ ಮಾತನಾಡಿದ್ದ ಗುಲಾಲೈ ಇಸ್ಮಾಯಿಲ್ ಎಂಬ ಮಹಿಳೆಯ ವಿರುದ್ಧ ಉಗ್ರರಿಗೆ ನೆರವು ನೀಡಿದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಅಷ್ಟೇ ಅಲ್ಲ, ಆಕೆಯ ಮನೆಯ ಮೇಲೂ ದಾಳಿ ನಡೆಸಲಾಗಿತ್ತು.
ಸದ್ಯ ಈಕೆ ಪಾಕಿಸ್ಥಾನ ತೊರೆದು ಅಮೆರಿಕದಲ್ಲಿ ಆಶ್ರಯ ಕೋರಿದ್ದಾರೆ. ಈಕೆಯ ತಂದೆ ಮತ್ತು ತಾಯಿ ಪಾಕಿಸ್ಥಾನದಲ್ಲಿದ್ದು, ಇವರ ಮೇಲೂ ದೂರು ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ಕೆಲವೇ ದಿನಗಳ ಹಿಂದಷ್ಟೇ ಮನೆಯ ಮೇಲೆ ದಾಳಿ ನಡೆಸುವ ಯತ್ನವನ್ನೂ ನಡೆಸ ಲಾಗಿದೆ ಎಂದು ತಿಳಿದುಬಂದಿದೆ.
ಗುಲಾಲೈ ಕುಟುಂಬವು ಪಾಶೂನ್ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಸೇನೆಯ ಕೆಂಗಣ್ಣಿಗೆ ಗುರಿಯಾಗಿದೆ. ಪಾಶೂನ್ ಚಳ ವಳಿಯು ಪಾಕ್ ಸೇನೆ ನಡೆಸುತ್ತಿರುವ ಹಿಂಸಾ ಚಾರವನ್ನು ತೀವ್ರವಾಗಿ ಖಂಡಿಸುತ್ತಿದೆ. ಈ ಚಳವಳಿಯು ಅಫ್ಘಾನಿಸ್ತಾನದ ಗಡಿ ಭಾಗ ದಲ್ಲಿ ಸಕ್ರಿಯವಾಗಿದೆ.ಗುಲಾಲೈ ಇಸ್ಮಾಯಿಲ್ ತಂದೆ ಉರ್ದು ಉಪನ್ಯಾಸಕರಾಗಿದ್ದು, 1980ರಿಂ ದಲೂ ಸೇನೆಯ ಹಿಂಸಾಚಾರವನ್ನು ವಿರೋಧಿ ಸುತ್ತಿ ದ್ದಾರೆ. ಇವರು ಹಲವು ಬಾರಿ ಸೇನೆಯ ದಾಳಿಗೆ ತುತ್ತಾಗಿದ್ದು, ಜೈಲು ವಾಸವನ್ನೂ ಅನು ಭವಿಸಿದ್ದಾರೆ. ಇವರ ವಿರುದ್ಧ ಉಗ್ರ ಸಂಘಟನೆ ತಾಲಿಬಾನ್ ಕೂಡ ಕತ್ತಿ ಮಸೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.