200 ಕ್ಕೂ ಹೆಚ್ಚು ಹುಡುಗಿಯರಿಗೆ ಕಿರುಕುಳ: ಮಾಜಿ ಪೊಲೀಸ್ ಅಧಿಕಾರಿಗೆ 12 ವರ್ಷ ಜೈಲು
ಖಾಸಗಿ ಫೋಟೋ ಕಳುಹಿಸುವಂತೆ ಹೇಳಿ ಬ್ಲ್ಯಾಕ್‌ಮೇಲ್
Team Udayavani, Oct 25, 2023, 7:36 PM IST
ಲಂಡನ್: 100 ಕ್ಕೂ ಹೆಚ್ಚು ಮಕ್ಕಳ ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ತಪ್ಪೊಪ್ಪಿಕೊಂಡ ನಂತರ ಬ್ರಿಟಿಷ್ ಮಾಜಿ ಪೊಲೀಸ್ ಅಧಿಕಾರಿಗೆ ಬುಧವಾರ ಕನಿಷ್ಠ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
Snapchat ನಲ್ಲಿ 200 ಕ್ಕೂ ಹೆಚ್ಚು ಹುಡುಗಿಯರಿಗೆ ತಮ್ಮ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಸಾಬೀತಾಗಿದೆ.
24 ವರ್ಷದ ಲೆವಿಸ್ ಎಡ್ವರ್ಡ್ಸ್ ಫೋನ್ ಅಪ್ಲಿಕೇಶನ್‌ನಲ್ಲಿ ಹದಿಹರೆಯದ ಹುಡುಗನಂತೆ ಪೋಸ್ ನೀಡುವ ಮೂಲಕ 10 ರಿಂದ 16 ವರ್ಷದೊಳಗಿನ 210 ಹುಡುಗಿಯರನ್ನು ಗುರಿಯಾಗಿಸಿಕೊಂಡಿದ್ದ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.
ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳಲು ಹೇಳಿದ್ದು ನಿರಾಕರಿಸಿದಾಗ ಅವರ ಹುಡುಗಿಯರಲ್ಲಿ ಅನೇಕರಿಗೆ ಬೆದರಿಕೆ ಹಾಕಿದ್ದ. ಕೆಲವರು ಫೋಟೋ ಗಳನ್ನು ಬಹಿರಂಗಪಡಿಸುತ್ತಾರೆ ಎಂಬ ಭಯದಿಂದಿದ್ದ ಕಾರಣ ಬ್ಲ್ಯಾಕ್‌ಮೇಲ್ ಕೂಡ ಮಾಡಿದ್ದ ಎಂದು ತಿಳಿದು ಬಂದಿದೆ.
2021 ರಲ್ಲಿ ಸೌತ್ ವೇಲ್ಸ್ ಪೊಲೀಸ್ ಇಲಾಖೆಗೆ ಸೇರಿದ್ದ ಎಡ್ವರ್ಡ್ಸ್ ಹೆಚ್ಚಿನ ಅಪರಾಧಗಳನ್ನು ಮಾಡಿದಾಗ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಸುಮಾರು 160 ಮಕ್ಕಳ ಲೈಂಗಿಕ ಅಪರಾಧಗಳು ಮತ್ತು ಬ್ಲ್ಯಾಕ್‌ಮೇಲ್‌ಗಳಿಗೆ ತಪ್ಪೊಪ್ಪಿಕೊಂಡಿದ್ದಾನೆ.
“18 ವರ್ಷದೊಳಗಿನವರಿಗೆ ನಾವು ಹೆಚ್ಚುವರಿ ರಕ್ಷಣೆಗಳನ್ನು ಹೊಂದಿದ್ದು ಹದಿಹರೆಯದವರಿಗೆ ತಿಳಿದಿಲ್ಲದ ಯಾರಾದರೂ ಅವರನ್ನು ಸಂಪರ್ಕಿಸಿದರೆ ಅವರಿಗೆ ಹೊಸ ಪಾಪ್-ಅಪ್ ಎಚ್ಚರಿಕೆಯನ್ನು ನೀಡುವ ಕ್ರಮವನ್ನು ಇತ್ತೀಚೆಗೆ ಸೇರಿಸಿದ್ದೇವೆ” ಎಂದು ಕ್ಯಾಲಿಫೋರ್ನಿಯಾ ಮೂಲದ ಸ್ನ್ಯಾಪ್ ಚಾಟ್ ಕಂಪನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.