ಶಿಂಜೋ ಅಬೆ ಭಾರತದ ಪರಮಾಪ್ತ, ಅಬೆಕಾನಾಮಿಕ್ಸ್‌ನ ಜನಕ
Team Udayavani, Jul 9, 2022, 6:55 AM IST
ಜಪಾನ್ ಜನಮಾನಸದಲ್ಲಿ ಇಂದಿಗೂ ತನ್ನದೇ ಸ್ಥಾನ ಹೊಂದಿರುವ, ಮಾಜಿ ಪ್ರಧಾನಿ ಶಿಂಜೋ ಅಬೆ ದುಷ್ಕರ್ಮಿಯೊಬ್ಬನ ಗುಂಡಿಗೆ ಬಲಿಯಾಗಿದ್ದಾರೆ. 2006-07 ಮತ್ತು 2012ರಿಂದ 2020ರ ವರೆಗೆ ಜಪಾನ್ ಪ್ರಧಾನಿಯಾಗಿದ್ದ ಅಬೆ ಅವರು, ಭಾರತದೊಂದಿಗೆ ಆಪ್ತ ಸಂಬಂಧ ಹೊಂದಿದ್ದರು. ಅದರಲ್ಲೂ ಮೋದಿ-ಅಬೆ ಸ್ನೇಹವಂತೂ ಉತ್ತುಂಗದಲ್ಲಿತ್ತು. ಅಬೆ ಅವರ ರಾಜಕೀಯ ಜೀವನ, ಅವರ ಅಬೆಕಾನಾಮಿಕ್ಸ್, ವಿದೇಶಾಂಗ ನೀತಿ, ಅನಾರೋಗ್ಯದ ಕುರಿತ ಒಂದು ಸಮಗ್ರ ಮಾಹಿತಿ ಇಲ್ಲಿದೆ…
ರಾಜಕೀಯ ಕುಟುಂಬ
ಜಪಾನ್‌ನ ಪ್ರಭಾವಿ ರಾಜಕೀಯ ಕುಟುಂಬದ ಕುಡಿ ಶಿಂಜೋ ಅಬೆ. ಇವರ ತಂದೆ ಶಿಂತಾರೋ ಅಬೆ ಮಾಜಿ ವಿದೇಶಾಂಗ ಸಚಿವರಾಗಿದ್ದರೆ, ತಾತ ನಬುಸುಕೆ ಕಿಶಿ ಮಾಜಿ ಪ್ರಧಾನಿ. ರಾಜಕೀಯ ಹಿನ್ನೆಲೆಯಲ್ಲಿಯೇ ಬೆಳೆದ ಅಬೆ ಅವರಿಗೆ, ರಾಜಕೀಯ ಸೇರ್ಪಡೆ ಅಷ್ಟೇನೂ ಕಷ್ಟವಾಗಿರಲಿಲ್ಲ. 1993ರಲ್ಲಿ ತಂದೆ ಶಿಂತಾರೋ ಅಬೆ ಅವರ ಸಾವಿನ ನಂತರ, 1995ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಶಿಂಜೋ ಶಿಬೆ ಅವರು ಸಂಸತ್‌ಗೆ ಆಯ್ಕೆಯಾದರು. 2005ರಲ್ಲಿ ಆಗಿನ ಪ್ರಧಾನಿ ಜುನಿಚಿರೋ ಇವರನ್ನು ಕ್ಯಾಬಿನೆಟ್ ಸದಸ್ಯರನ್ನಾಗಿ ಮಾಡಿ, ಅತ್ಯುನ್ನತ ಹುದ್ದೆಯಾದ ಚೀಫ್ ಕ್ಯಾಬಿನೆಟ್ ಸೆಕ್ರೆಟರಿಯಾಗಿ ನೇಮಕ ಮಾಡಿದ್ದರು. ಮಾರನೇ ವರ್‌ಷ, ಅಂದರೆ 2006ರಲ್ಲಿ ಜಪಾನ್‌ನ ಪ್ರಧಾನಿಯಾಗಿ ಅಬೆ ಆಯ್ಕೆಯಾದರು. ವಿಶೇಷವೆಂದರೆ, ಯುದೊœàತ್ತರದಲ್ಲಿ ಜಪಾನ್‌ನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆಯೂ ಇವರ ಪಾಲಾಗಿತ್ತು. ಆದರೆ, 2007ರಲ್ಲಿಯೇ ಅನಾರೋಗ್ಯ ನಿಮಿತ್ತ ಅಬೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.
ಅಂದ ಹಾಗೆ, ಶಿಂಜೋ ಅಬೆ ಅವರು ಹುಟ್ಟಿದ್ದು 1954ರ ಸೆ.21ರಂದು. ವಿಶೇಷವೆಂದರೆ, ದ್ವಿತೀಯ ಮಹಾಯುದ್ಧದ ನಂತರ ಜನ್ಮತಾಳಿದವರೊಬ್ಬರು ಜಪಾನ್ ಪ್ರಧಾನಿಯಾಗಿದ್ದುದು ಇದೇ ಮೊದಲು.
ಸುದೀರ್ಘ ಅವಧಿಯ ಪ್ರಧಾನಿ
ಸುಮಾರು ಆರು ವರ್ಷಗಳ ಕಾಲ ಚಿಕಿತ್ಸೆ ಪಡೆದ ಅಬೆ ಅವರು, 2012ರಲ್ಲಿ ಮತ್ತೆ ಪ್ರಧಾನಿ ಹುದ್ದೆಗೈರಿದರು. 2012ರಿಂದ 2020 ವರೆಗೆ ಜಪಾನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವರು, ಅತ್ಯಂತ ದೀರ್ಘಾವಧಿಗೆ ಪ್ರಧಾನಿ ಹುದ್ದೆಯಲ್ಲಿದ್ದವರು ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಂದರೆ, ಶಿಂಜೋ ಅಬೆ ಅವರು 3,188 ದಿನಗಳ ವರೆಗೆ ಪ್ರಧಾನಿ ಹುದ್ದೆಯಲ್ಲಿದ್ದರು. 2006-07 ಮತ್ತು 2012-2020 ಎರಡೂ ಸೇರಿ ಇಷ್ಟು ದಿನಗಳ ವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಇವರನ್ನು ಬಿಟ್ಟರೆ, ಜುನಿಚಿರೋ ಅವರು 1,950 ದಿನಗಳ ವರೆಗೆ ಪ್ರಧಾನಿಯಾಗಿದ್ದರು. ಇವರು 2001ರಿಂದ 2006ರ ವರೆಗೆ ಈ ಹುದ್ದೆಯಲ್ಲಿದ್ದರು.
ಅಬೆನಾಮಿಕ್ಸ್
2012ರಲ್ಲಿ ಎರಡನೇ ಬಾರಿ ಅಧಿಕಾರಕ್ಕೇರಿದ ಶಿಂಜೋ ಅಬೆ ಅವರು, ಜಪಾನ್ ಆರ್ಥಿಕತೆ ಮೇಲೆತ್ತಲು ಶ್ರಮಿಸಿದರು. ಅಂದರೆ, 2011ರಲ್ಲಿ ಜಪಾನ್‌ನಲ್ಲಿ ಎದುರಾಗಿದ್ದ ಸುನಾಮಿಯಿಂದಾಗಿ ಆರ್ಥಿಕತೆ ಇನ್ನಷ್ಟು ತಳಕ್ಕೆ ತಲುಪಿತ್ತು. ಹೀಗಾಗಿ, ಮೂರು ಅಂಶಗಳ ಅಬೆನಾಮಿಕ್ಸ್ ಅನ್ನು ಜಾರಿಗೆ ತರಲು ಮುಂದಾದರು.
ಇದರಲ್ಲಿ ಹಣಕಾಸು ನೀತಿಯ ಸಡಿಲಿಕೆ, ಹಣಕಾಸು ಪ್ರೋತ್ಸಾಹ ಮತ್ತು ರಚನಾತ್ಮಕ ಆರ್ಥಿಕ ಸುಧಾರಣೆಗಳು ಸೇರಿವೆ. 2012ರಲ್ಲಿ ಶಿಂಜೋ ಅಬೆ ಅವರು, ಪ್ರಧಾನಿಯಾದಾಗ ದೇಶ ಡಿಪ್ಲೇಷನ್ ಹಂತ ತಲುಪಿತ್ತು. ಅಂದರೆ, ಸಂಪನ್ಮೂಲಗಳು ಖಾಲಿಯಾಗುವ ಮತ್ತು ಕೈ ಬರಿದಾಗುವ ಹಂತಕ್ಕೆ ಬಂದಿತ್ತು. ಇಂಥ ಸಂದರ್ಭದಲ್ಲಿ ಆರ್ಥಿಕತೆಯನ್ನೂ ಮೇಲೆತ್ತಬೇಕಾಗಿತ್ತು, ಜನರ ಕೈಯಲ್ಲಿ ಹಣವನ್ನೂ ಓಡಾಡಿಸಬೇಕಾಗಿತ್ತು. ಹೀಗಾಗಿಯೇ ಈ ಅಬೆಕಾನಾಮಿಕ್ಸ್ ಅನ್ನು ಜಾರಿಗೆ ತಂದರು. ವಿಶ್ಲೇಷಕರ ಪ್ರಕಾರ, ಇದು ಒಂದು ರೀತಿಯಲ್ಲಿ ಯಶಸ್ಸು ತಂದುಕೊಟ್ಟರೆ, ಮತ್ತೊಂದು ರೀತಿ ಪ್ರಕಾರ, ಮಿಶ್ರ ಯಶಸ್ಸು ತಂದುಕೊಟ್ಟಿತು.
ಈ ಅಂಶಗಳ ಪ್ರಕಾರವಾಗಿ, ತೀರಾ ಕಡಿಮೆ ಬಡ್ಡಿಗೆ ಸಾಲ ನೀಡುವುದು, ಮೂಲಭೂತ ಸೌಕರ್ಯಗಳ ಮೇಲೆ ಅಗಾಧವಾದ ವೆಚ್ಚ ಮಾಡುವುದು ಸೇರಿತ್ತು. ಮೂರನೇ ಅಂಶದಲ್ಲಿ ಪ್ರಮುಖವಾಗಿ ಜಪಾನ್‌ನಲ್ಲಿ ಕಾಡುತ್ತಿರುವ ವೃದ್ಧಾಪ್ಯದ ಸಮಸ್ಯೆಗೆ ಒಂದು ನಿವಾರಣೆ ಬೇಕಾಗಿತ್ತು. ಇದರ ಅಂಗವಾಗಿ ಕೆಲಸದ ಸ್ಥಳಗಳಲ್ಲಿ ಮತ್ತು ಮೇಲಿನ ಹಂತದ ಹುದ್ದೆಗಳಲ್ಲಿ ಶೇ.??ರಷ್ಟು ಮಹಿಳೆಯರು ಇರಬೇಕು ಎಂಬ ನಿಯಮ ಜಾರಿಗೆ ತಂದರು. ಈ ಮೂಲಕ ವರ್ಕ್‌ಫೋರ್ಶ್‌ಗೆ ಇನ್ನಷ್ಟು ಜನರನ್ನು ಸೇರಿಸಲು ಅನುಕೂಲವಾಯಿತು.
ಈ ಅಂಶಗಳಿಂದಾಗಿ ನಿರುದ್ಯೋಗ ಸಮಸ್ಯೆ ತೀರಾ ಅನ್ನುವಷ್ಟರ ಮಟ್ಟಿಗೆ ನಿವಾರಣೆಯಾಯಿತು. ರಫ್ತು ಮಟ್ಟ ಏರಿಕೆಯಾಯಿತು. ಅಲ್ಲದೆ, 2015ರಿಂದ 2018ರ ವರೆಗೆ ಸತತ ಎಂಟು ತ್ರೆ„ಮಾಸಿಕಗಳಲ್ಲಿ ಜಪಾನ್‌ನ ಪ್ರಗತಿ ಧನಾತ್ಮಕವಾಗಿ ಮುಂದುವರಿಯಿತು.
ಇಷ್ಟೆಲ್ಲಾ ಕ್ರಮ ತೆಗೆದುಕೊಂಡರೂ, ಅಬೆನಾಮಿಕ್ಸ್, ಶಿಂಜೋ ಅಬೆ ಅವರ ಅಧಿಕಾರಾವಧಿಯ ಕೊನೆ ದಿನಗಳಲ್ಲಿ ಕೊಂಚ ದಾರಿ ತಪ್ಪಿತು. ಇದಕ್ಕೆ ಕಾರಣವಾಗಿದ್ದು, ಕೊರೊನಾ. ಇಡೀ ಜಗತ್ತನ್ನೇ ಕಾಡಿದಂತೆ ಇಲ್ಲಿಯೂ ಕೊರೊನಾ ಕಾಡಿದ್ದರಿಂದ ಮತ್ತೆ ಆರ್ಥಿಕತೆಗೆ ಪೆಟ್ಟು ಬಿದ್ದಿತು.
ಅಬೆ ರಕ್ಷಣಾ ನೀತಿ
ಎರಡನೇ ಮಹಾಯುದ್ಧದ ನಂತರದಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಜಪಾನ್ ತನ್ನದೇ ಆದ ಮಿಲಿಟರಿಯನ್ನು ಮಾಡಿಕೊಳ್ಳುವಂತಿರಲಿಲ್ಲ. ಹೀಗಾಗಿ, ಈ ದೇಶಕ್ಕೆ ಸ್ವಂತ ಮಿಲಿಟರಿ ಇರಲಿಲ್ಲ. ಇದ್ದುದು ಸ್ವರಕ್ಷಣಾ ಪಡೆ(ಎಸ್‌ಡಿಎಫ್) ಮಾತ್ರ. ಅಷ್ಟೇ ಅಲ್ಲ, ಅಬೆ ಅವರು ಪ್ರಧಾನಿಯಾಗುವವರೆಗೆ ಈ ದೇಶದಲ್ಲಿ ರಕ್ಷಣಾ ಇಲಾಖೆಯೇ ಇರಲಿಲ್ಲ. 2007ರಲ್ಲಿ ಅಬೆ ಅವರು ರಕ್ಷಣಾ ಇಲಾಖೆಯನ್ನು ಸ್ಥಾಪಿಸಿದರು. ಉಳಿದಂತೆ ಅಬೆ ಅವರ ರಕ್ಷಣಾ ನೀತಿಯನ್ನು ನೋಡುವುದಾದರೆ,
1. 2012ರಲ್ಲಿ ಅಬೆ ಅವರು ರಾಷ್ಟ್ರೀಯ ಭದ್ರತಾ ಮಂಡಳಿ ರಚಿಸಿದರು.
2. ಎಸ್‌ಡಿಎಫ್‌ನ ಉನ್ನತೀಕರಣಕ್ಕಾಗಿ 2012ರಲ್ಲಿ ರಾಷ್ಟ್ರೀಯ ಭದ್ರತಾ ವ್ಯೂಹ ಮತ್ತು ರಾಷ್ಟ್ರೀಯ ರಕ್ಷಣಾ ಕಾರ್ಯಕ್ರಮ ಮಾರ್ಗಸೂಚಿಗಳನ್ನು ರಚಿಸಿದರು.
3. 2014ರಲ್ಲಿ ಅಮೆರಿಕ ಜತೆಗೆ ಉತ್ತಮ ಸಂಬಂಧವೇರ್ಪಡಿಸಿಕೊಂಡ ಅವರು, ರಕ್ಷಣಾ ಉಪಕರಣಗಳನ್ನು ಪರಸ್ಪರ ಹಂಚಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದರು.
4.2015ರಲ್ಲಿ ಅಕ್ವಿಸಿಷನ್, ಟೆಕ್ನಾಲಜಿ, ಲಾಜಿಸ್ಟಿಕ್ಸ್ ಏಜೆನ್ಸಿಯನ್ನು ರೂಪಿಸಿ, ಈ ಮೂಲಕ ರಕ್ಷಣಾ ಸಂಶೋಧನೆ, ಅಭಿವೃದ್ಧಿ ಮತ್ತು ಖರೀದಿಗೆ ಅವಕಾಶ ನೀಡಿದರು.
5. ಎರಡನೇ ಮಹಾಯುದ್ಧದ ಬಳಿಕ ಹೊರದೇಶಕ್ಕೆ ತನ್ನ ಮಿಲಿಟರಿಯನ್ನು ಕಳುಹಿಸಿದ ಮೊದಲ ಜಪಾನ್ ಪ್ರಧಾನಿ.
ಕ್ವಾಡ್ ನಿರ್ಮಾತೃ
ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಮತ್ತು ಭಾರತ ಸೇರಿ ಮಾಡಿಕೊಂಡಿರುವ ಕ್ವಾಡ್‌ನ ರೂಪುರೇಷೆ ಅಬೆ ಅವರದ್ದೇ. 2007ರಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದ ಅಬೆ ಅವರು, ಈ ಬಗ್ಗೆ ಮೊದಲ ಬಾರಿಗೆ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದರು. ಆದರೆ, ಇದು ಕಾರ್ಯರೂಪಕ್ಕೆ ಬಂದಿದ್ದು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ. ಅಂದರೆ, ಇಂಡೋ-ಪೆಸಿಫಿಕ್ ಭಾಗದಲ್ಲಿ ಚೀನದ ಪ್ರಾಭಲ್ಯ ಹೆಚ್ಚುತ್ತಿರುವುದನ್ನು ಮನಗಂಡ ಅಬೆ ಅವರು, ಕ್ವಾಡ್ ರೂಪಿಸಿಕೊಂಡರೆ ಅದಕ್ಕೆ ಸರಿಯಾಗಿ ಎದಿರೇಟು ನೀಡಬಹುದು ಎಂದು ಭಾವಿಸಿದರು.
ಹೀಗಾಗಿಯೇ, ಬಲಿಷ್ಠ ರಾಷ್ಟ್ರಗಳೊಂದಿಗೆ ಸೇರಿ ಈ ಕ್ವಾ?ಡ್ ಅನ್ನು ಮಾಡಿಕೊಂಡರು. ಅಂದರೆ, 2017ರಲ್ಲಿ ಡೋಕ್ಲಾಂನಲ್ಲಿ ಚೀನದ ಮೊಂಡಾಟ ಗಮನಿಸಿದ ಅಬೆ ಅವರು, ನನೆಗುದಿಗೆ ಬಿದ್ದಿದ್ದ ಕ್ವಾಡ್ ಅನ್ನು ಮರು ರೂಪಿಸುವ ಬಗ್ಗೆ ಮಾತನಾಡಿದರು. ಇದಕ್ಕಾಗಿಯೇ ಚೀನ ಈ ಕ್ವಾಡ್ ಅನ್ನು ಇಂಡೋ ಪೆಸಿಫಿಕ್ ಭಾಗದ ನ್ಯಾಟೋ ಎಂದು ಕರೆಯುತ್ತಿದೆ.
ಜತೆಗೆ, ಭಾರತ ಮತ್ತು ಚೀನ ನಡುವಿನ ವೈಮನಸ್ಸಿನ ವೇಳೆ ಸಂಪೂರ್ಣವಾಗಿ ಭಾರತದ ಜತೆಗೈ ಅಬೆ ಅವರು ನಿಂತರು.
ಭಾರತದ ಜತೆ ಸಂಬಂಧ
ಶಿಂಜೋ ಅಬೆ ಅವರು, ತಮ್ಮ ತಾತನಂತೆಯೇ ಭಾರತದ ಜತೆಗೆ ಉತ್ತಮ ಸಂಬಂಧವಿರಿಸಿಕೊಂಡಿದ್ದರು. ಅಂದರೆ, ಅವರ ತಾತ ನಬುಸುಕೆ ಕಿಶಿ ಅವರು ಆಗಿನ ಪ್ರಧಾನಿ ಜವಾರ್ಹ ಲಾಲ್ ನೆಹರು ಅವರೊಂದಿಗೆ ಅತ್ಯಾಪ್ತ ಗೆಳೆತನವಿರಿಸಿಕೊಂಡಿದ್ದರು. ????ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗಲೇ ಅಬೆ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಆಗ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಈ ಸಮಯದಲ್ಲಿ ಅಬೆ ಅವರು ಭಾರತೀಯ ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿದ್ದರು.
2014ರ ಜನವರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿಯೂ ಅಬೆ ಭಾಗಿಯಾಗಿದ್ದರು. ಈ ಗೌರವಕ್ಕೆ ಪಾತ್ರರಾದ ಜಪಾನ್‌ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಜತೆಗೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಈ ಸಂಬಂಧ ಮತ್ತಷ್ಟು ಉತ್ತುಂಗಕ್ಕೇರಿತು.
2019ರ ನವೆಂಬರ್‌ನಲ್ಲಿ ಭಾರತ ಮತ್ತು ಜಪಾನ್ ದೇಶಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರ(2ಪ್ಲಸ್2) ಮಾತುಕತೆ ನಡೆಯಿತು. ಅಲ್ಲದೆ 2015ರಲ್ಲಿ ರಕ್ಷಣಾ ಪರಿಕರಗಳು ಮತ್ತು ತಂತ್ರಜ್ಞಾನಗಳನ್ನು ಪರಸ್ಪರ ಹಂಚಿಕೊಳ್ಳುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ಕೂಡ 2ನೇ ಮಹಾಯುದ್ಧದ ಬಳಿಕ ಜಪಾನ್ ಮಾಡಿಕೊಂಡ ಒಪ್ಪಂದ.
ಅಲ್ಲದೆ, 2015ರಲ್ಲೇ ಭಾರತದಲ್ಲಿ ಮೊದಲ ಬುಲೆಟ್ ಟ್ರೆ„ನ್ ವ್ಯವಸ್ಥೆ ನೀಡುವ ಕುರಿತಂತೆಯೂ ಅಬೆ ಮತ್ತು ಮೋದಿ ಅವರು ಸಹಿ ಹಾಕಿದರು. ಭಾರತ ಮತ್ತು ಜಪಾನ್‌ನ ಸಂಬಂಧದ ನೆನಪಿಗಾಗಿ ಇವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಗೌರವವನ್ನೂ ನೀಡಿದೆ.
ಚೀನ, ದಕ್ಷಿಣ ಕೊರಿಯಾ ಜತೆಗಿನ ಸಂಬಂಧ
ವಿಚಿತ್ರವೆಂದರೆ, ಚೀನ ಮತ್ತು ದಕ್ಷಿಣ ಕೊರಿಯಾ ದೇಶಗಳು ಮೊದಲಿನಿಂದಲೂ ಜಪಾನ್ ವಿರೋಧಿ ನಿಲುವು ತಳೆದಿವೆ. ಹಾಗೆಯೇ, ಜಪಾನ್‌ನ ಟೋಕಿಯೋದಲ್ಲಿರುವ ವಿವಾದಿತ ಯಾಸುಕುನಿ 2013ರಲ್ಲಿ ಭೇಟಿ ನೀಡಿದರು. ಇದು ಚೀನ ಮತ್ತು ದಕ್ಷಿಣ ಕೊರಿಯಾದ ಕಣ್ಣು ಕೆಂಪಾಗಿಸಿತ್ತು. ಏಕೆಂದರೆ, ಈ ಶ್ರೆ„ನ್ ಅನ್ನು ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು, ಜಪಾನ್‌ನ 2ನೇ ಮಹಾಯುದ್ಧದ ಸಂಕೇತವಾಗಿ ನೋಡುತ್ತವೆ. ಆದರೆ, ಈ ಎರಡು ದೇಶಗಳ ಜತೆ ಉತ್ತಮ ಸಂಬಂಧವಿರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರು. ಆದರೆ, ತಮ್ಮ ಹೆಸರಿನಲ್ಲಿ ಪೂಜೆ ಮಾಡಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.