ಭುಟ್ಟೋ ಹತ್ಯೆ: ಮುಷರ್ರೀಫ್ ಘೋಷಿತ ಅಪರಾಧಿ
Team Udayavani, Sep 1, 2017, 7:50 AM IST
ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಜ| ಪರ್ವೇಜ್ ಮುಷರ್ರೀಫ್ರನ್ನು ಘೋಷಿತ ಅಪರಾಧಿ ಎಂದು ಉಗ್ರ ನಿಗ್ರಹ ಕೋರ್ಟ್ ಘೋಷಿಸಿದೆ. ಜತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಆದೇಶಿಸಿದೆ. ರಾವಲ್ಪಿಂಡಿಯ ಮಾಜಿ ಪೊಲೀಸ್ ಆಯುಕ್ತ ಸಹಿತ ಇಬ್ಬರಿಗೆ 17 ವರ್ಷಗಳ ಜೈಲು ಶಿಕ್ಷೆ ನೀಡಿದೆ. ಪ್ರಕರಣ ಸಂಬಂಧ ತೆಹ್ರಿಕ್-ಇ- ತಾಲಿಬಾನ್ ಪಾಕಿಸ್ಥಾನ್ (ಟಿಟಿಪಿ) ಉಗ್ರ ಸಂಘಟನೆಯ ಐವರನ್ನು ಆರೋಪಮುಕ್ತಗೊಳಿಸಿದೆ.
2007ರ ಡಿ.27ರಂದು ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ವೇಳೆ ಆತ್ಮಾಹುತಿ ದಾಳಿ ನಡೆಸಿ ಬೆನಜೀರ್‌ರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ 22 ಮಂದಿ ಮೃತಪಟ್ಟಿ ದ್ದರು. ಆಗ ಜ| ಮುಷರ್ರಫ್ ಪಾಕ್ ಅಧ್ಯಕ್ಷರಾಗಿದ್ದರು. ಆರಂಭದಲ್ಲಿ ಟಿಟಿಪಿ ಮುಖ್ಯಸ್ಥ ಬೈತುಲ್ಲಾ ವಿರುದ್ಧ ಆರೋಪ ಹೊರಿಸಲಾಗಿತ್ತು. ಅದಕ್ಕೆ ಪೂರಕವಾಗಿ ಬಿಡುಗಡೆ ಆಗಿದ್ದ ಆಡಿಯೋ ತನಿಖೆಯ ದಾರಿ ತಪ್ಪಿಸಲು ಮುಷರ್ರೀಫ್ ಹೂಡಿದ ಸಂಚು ಎಂದು ತನಿಖಾ ಸಂಸ್ಥೆ ಆರೋಪಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.