ಡೊನಾಲ್ಡ್ ಟ್ರಂಪ್ ಮಾಜಿ ಸಲಹೆಗಾರ ರೋಜರ್ ಸ್ಟೋನ್ ಬಂಧನ: ಮಾಧ್ಯಮ
Team Udayavani, Jan 25, 2019, 12:32 PM IST
ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಸಲಹೆಗಾರ ರೋಜರ್ ಸ್ಟೋನ್ ಅವರನ್ನು ಬಂಧಿಸಲಾಗಿರುವುದಾಗಿ ವರದಿಗಳು ತಿಳಿಸಿವೆ.
ಟ್ರಂಪ್ ಅವರ ಸ್ಪೆಶಲ್ ಕೌನ್ಸೆಲರ್ ರಾಬರ್ಟ್ ಮ್ಯೂಲರ್ ಅವರ ಹೊರಡಿಸಿರುವ ಗಂಭೀರ ಅಪರಾಧಗಳ ಆರೋಪದ ಮೇಲೆ ಸ್ಟೋನ್ ಅವರನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಸುದ್ದಿ ಮೂಲಗಳು ಹೇಳಿವೆ.
ಮ್ಯೂಲರ್ ಪ್ರಕಾರ ಸ್ಟೋನ್ ಅವರು 7 ಹಂತದ ಅಪರಾಧ ಎಸಗಿದ್ದಾರೆ. ಇವುಗಳಲ್ಲಿ ಅಧಿಕೃತ ಕಲಾಪಕ್ಕೆ ತಡೆ ಒಡ್ಡಿರುವುದು, ಸುಳ್ಳು ಹೇಳಿಕೆ ನೀಡಿರುವುದು ಮತ್ತು ಸಾಕ್ಷ್ಯವನ್ನು ತಿರುಚಿರುವುದು ಸೇರಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಮ್ಯೂಲರ್ ಅವರು ರಶ್ಯ ತನಿಖೆಯನ್ನು ಕೈಗೊಂಡಿದ್ದಾರೆ.